ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕ ಬಲ ತುಂಬಿದ ಪವನ್ ಕಲ್ಯಾಣ್

Published : Mar 26, 2020, 08:02 PM ISTUpdated : Mar 28, 2020, 11:04 PM IST
ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕ ಬಲ ತುಂಬಿದ ಪವನ್ ಕಲ್ಯಾಣ್

ಸಾರಾಂಶ

ಡೆಡ್ಲಿ ಕೊರೋನಾ ವೈರಸ್ ಎನ್ನುವ ಮಾಹಾಮಾರಿ ರೋಗ ಇಡೀ ವಿಶ್ವದೆಲ್ಲಡೆ ಹಬ್ಬಿದೆ. ಅದರಲ್ಲೂ ಭಾರತದಲ್ಲಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆ. ಇದಿರಂದ ಭಾರತ ಸರ್ಕಾರ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಶಕ್ತಿ ಮೀರಿ ಸಮರಕ್ಕಿಳಿದಿದೆ. ಇದರ ಮಧ್ಯೆ ಜನಸೇನಾ ಪಕ್ಷದ ಮುಖ್ಯಸ್ಥ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಆರ್ಥಿಕವಾಗಿ ನೆರವಾಗಿದ್ದಾರೆ.

ಹೈದರಾಬಾದ್, (ಮಾ.26): ಕೊರೋನಾ ವಿರುದ್ಧದ ಹೋರಾಟಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಎರಡು ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

 ಆಂಧ್ರ ಪ್ರದೇಶ ಸರ್ಕಾರ ಮತ್ತು ತೆಲಂಗಾಣ ರಾಜ್ಯಕ್ಕೆ ತಲಾ 50 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇಡೀ ದೇಶವನ್ನ ಕಾಯುವ ಕೇಂದ್ರ ಸರ್ಕಾರ 1 ಕೋಟಿ ರೂ. ಒಟ್ಟು ಸೇರಿ ಒಟ್ಟು 2 ಕೋಟಿ ರೂ. ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. 

ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಅವರು ಟ್ವೀಟ್ ಮಾಡಿ ತಿಳಿಸಿದ್ದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ಹಾಗೂ 1 ಕೋಟಿ ರೂ. ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ಒಂದು ಕೋಟಿ ನೀಡಲು ನಿರ್ಧರಿಸಿರುವೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗೆ ದೇಶಕ್ಕೆ ಕಷ್ಟದ ಸಮಯದಲ್ಲಿ ಈ ರೀತಿ ಹಣದ ಸಹಾಯ ಮಾಡುತ್ತಿರುವುದು ನಿಜಕ್ಕೂ ಗ್ರೇಟ್.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!