ದೇಶದಲ್ಲಿ 21 ಸಾವಿರ ದಾಟಿದ ಸೋಂಕಿತರು: ಒಂದೇ ದಿನ 1426 ಹೊಸ ಕೇಸು!

By Kannadaprabha NewsFirst Published Apr 23, 2020, 10:23 AM IST
Highlights

ದೇಶದಲ್ಲಿ 21 ಸಾವಿರ ದಾಟಿದ ಸೋಂಕಿತರು| ನಿನ್ನೆ ಒಂದೇ ದಿನ 1426 ಹೊಸ ಕೇಸು, 37 ಸಾವು

ನವದೆಹಲಿ(ಏ.23): ದಿನೇ ದಿನೇ ವ್ಯಾಪಕವಾಗುತ್ತಿರುವ ಕೊರೋನಾ ಬುಧವಾರ ಭಾರತದಲ್ಲಿ 20000 ಸೋಂಕಿತರ ಗಡಿ ದಾಟಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ ತಲುಪಿದ 17ನೇ ದೇಶವಾಗಿ ಹೊರಹೊಮ್ಮಿದೆ. 2020ರ ಜ.30ರಂದು ಕೇರಳದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು, ಅದಾದ ಕೇವಲ 83 ದಿನಗಳಲ್ಲಿ ಸೋಂಕಿತರ ಸಂಖ್ಯೆ 21000ದ ಗಡಿದಾಟಿದೆ. ದೇಶದಲ್ಲಿ ಸಿಕ್ಕಿಂ ಹೊರತುಪಡಿಸಿದಂತೆ ಉಳಿದೆಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ ಒಂದಾದರೂ ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿದೆ.

ಇದೇ ವೇಳೆ ಗುರುವಾರ ಒಂದೇ ದಿನ ದೇಶಾದ್ಯಂತ 1426 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21293ಕ್ಕೆ ತಲುಪಿದೆ. ಜೊತೆಗೆ ವಿವಿಧ ರಾಜ್ಯಗಳಲ್ಲಿ 37 ಜನ ಸಾವನ್ನಪ್ಪಿದ್ದು, ಸೋಂಕಿಗೆ ಒಟ್ಟು 683 ಜನ ಬಲಿಯಾದಂತೆ ಆಗಿದೆ. ಈ ವರೆಗೆ ಸೋಂಕಿನಿಂದ ಒಟ್ಟು 4103 ಜನ ಚೇತರಿಸಿಕೊಂಡಿದ್ದಾರೆ.

ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್‌ ಮೆಚ್ಚುಗೆ!

ದೇಶದಲ್ಲೇ ಅತಿ ಹೆಚ್ಚು ಪ್ರಕರಣ ಬೆಳಕಿಗೆ ಬಂದಿರುವ ಮಹಾರಾಷ್ಟ್ರದಲ್ಲಿ ಬುಧವಾರ 451 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಉಳಿದಂತೆ ಗುಜರಾತ್‌ನಲ್ಲಿ 329, ರಾಜಸ್ಥಾನದಲ್ಲಿ 209, ದೆಹಲಿಯಲ್ಲಿ 92,

ಮಧ್ಯಪ್ರದೇಶದಲ್ಲಿ 35 ಪ್ರಕರಣ ಬೆಳಕಿಗೆ ಬಂದಿದೆ.

ಸೋಂಕು ಸಾಗಿಬಂದ ಹಾದಿ

2020 ಜ.30: ಮೊದಲ ಕೇಸು

2020 ಮಾ.14: 100ನೇ ಕೇಸು

2020 ಮಾ.29: 1000ನೇ ಕೇಸು

2020 ಏ.13: 10000ನೇ ಕೇಸು

2020 ಏ.22: 20000ನೇ ಕೇಸು

click me!