ಮಸೀದಿ ಸೇರಿಕೊಂಡ 21 ತಬ್ಲೀಘಿಗಳನ್ನು ಹಿಡಿದ ಪೊಲೀಸ್‌ಗೂ ಬಂತು ಕೊರೋನಾ!

By Suvarna NewsFirst Published Apr 11, 2020, 7:21 PM IST
Highlights

ಕೋತಿ ತಾನು ಕೆಡುವುದು ಮಾತ್ರವಲ್ಲದೇ ವನವನ್ನೆಲ್ಲಾ ಕೆಡಿಸಿತು ಅನ್ನೋ ಮಾತಿನಂತೆ ತಮಗೆ ಕೊರೋನಾ ವೈರಸ್ ತಗುಲಿರುವುದು ಮಾತ್ರವಲ್ಲ ಇಡೀ ದೇಶಕ್ಕೆ ಕೊರೋನಾ ಹಬ್ಬಿಸಿದ್ದಾರೆ ಈ ತಬ್ಲೀಘಿಗಳು. ಜಮಾತ್‌ನಲ್ಲಿ ಪಾಲ್ಗೊಂಡು ಮುಂಬೈನಲ್ಲಿ ಓಡಾತುತ್ತಿದ್ದ 21 ತಬ್ಲೀಘಿಗಳನ್ನು ಹಿಡಿದ ಮುಂಬೈ ಪೊಲೀಸ್‌ಗೂ ಇದೀಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮುಂಬೈ(ಏ.11):  ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲೀಘ್ ಜಮಾತ್ ಕಾರ್ಯಕ್ರಮದಿಂದ ಭಾರತ ಅಕ್ಷರಶಃ ನಲುಗಿ ಹೋಗಿದೆ. ಕಾರಣ ಸಂಪೂರ್ಣ ಭಾರತದಲ್ಲಿ ತಬ್ಲೀಘಿಗಳು ಕೊರೋನಾ ವೈರಸ್ ಹರಡಿದ್ದಾರೆ. ಲಾಕ್‌ಡೌನ್ ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮದಿಂದ ಭಾರತದಲ್ಲಿ ಕೊರೋನಾ ಹತೋಟಿಯಲ್ಲಿತ್ತು. ಆದರೆ ಯಾವಾಗ ತಬ್ಲೀಘಿಗಳು ಆರ್ಭಟ ಶುರು ಮಾಡಿದರೂ ಅವಾಗಲೇ ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ದುಪ್ಪಟ್ಟಾಯಿತು. 

ಲಾಕ್‌ಡೌನ್ ವೇಳೆ ಇಸ್ಪೀಟ್ ಆಟ: ಮೇಲಿಂದ ಬಂತು ಪೊಲೀಸರ ಡ್ರೋನ್!.

ದೆಹಲಿಯಲ್ಲಿ ನಡೆದ ತಬ್ಲೀಘ್ ಜಮಾತ್‌ನಲ್ಲಿ ಪಾಲ್ಗೊಂಡು ಬಳಿಕ ಮುಂಬೈನಲ್ಲಿ ತಿರುಗಾಡುತ್ತಿದ್ದ 21 ವಿದೇಶಿಗರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿಸಿದ ಮಂಬೈ ಪೊಲೀಸ್‌ ಸೂಪರಿಡೆಂಟ್‌ಗೆ ಇದೀಗ ಕೊರೋನಾ ವೈರಸ್ ತಗುಲಿರುವುದು ದೃಢವಾಗಿದೆ. ತಲೆಕೆಟ್ಟ ತಬ್ಲೀಘಿಗಳಿಂದ ಪ್ರಾಣದ ಹಂಗು ತೊರೆದು ಕರ್ತವ್ಯ ನಿಭಾಯಿಸಿದ ಪೊಲೀಸ್‌ಗೂ ಕೊರೋನಾ ತಗುಲಿರುವುದೇ ನೋವಿನ ವಿಚಾರ.

ದೆಹಲಿ ತಬ್ಲೀಘ್ ಜಮಾತ್ ಮುಗಿಸಿದ 13 ಬಾಂಗ್ಲಾದೇಶಿಗಳು ಹಾಗೂ 8 ಮಲೇಷಿಯಾ ಪ್ರಜೆಗಳು ಟ್ರೈನ್ ಮೂಲಕ ತಮಿಳುನಾಡು ತೆರಳಿ ಅಲ್ಲಿ ತಮ್ಮ ಧರ್ಮದ ಕೆಲಸದಲ್ಲಿ ತೊಡಗಿದ್ದಾರೆ. ಬಳಿಕ ತಮಿಳುನಾಡಿನಿಂದ ಮುಂಬೈಗೆ ಬಂದು ಮಸೀದಿ ಹಾಗೂ ಮಸೀದಿಯ ಶಾಲೆಯಲ್ಲಿ ಅವಿತುಕುಳಿತಿದ್ದರು. ಇದನ್ನು ಪತ್ತೆ ಹಚ್ಚಿದ ಪೊಲೀಸ್, ಎಲ್ಲರನ್ನೂ ಕ್ವಾರಂಟೈನ್‌ಗೆ ಹಾಕಿದ್ದರು. ಇಷ್ಟೇ ಅಲ್ಲ ಈ 21 ಮಂದಿಗೂ ಕೊರೋನಾ ವೈರಸ್ ದೃಢಪಟ್ಟಿತ್ತು. 

21 ವಿದೇಶಿಗರನ್ನು ಪತ್ತೆ ಹಚ್ಚಿದ ಬೆನ್ನಲ್ಲೇ ಪೊಲೀಸ್‌ಗೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಪರೀಕ್ಷೆಗೆ ಒಳಪಟ್ಟಾಗ, ಕೊರೋನಾ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.  ಕ್ವಾರಂಟೈನ್ ಮಾಡಿದ ಪೊಲೀಸ್ ಇದೀಗ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!