ಜಮಾತ್‌ಗೆ ಹಾಜರಾದ ತಬ್ಲೀಘಿಗೆ ಕೊರೋನಾ, ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣು

By Suvarna NewsFirst Published Apr 12, 2020, 3:18 PM IST
Highlights

ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಧಾರ್ಮಿಕ ಸಭೆ ಬಳಿಕ ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾಗಿದೆ. ಜಮಾತ್‌ನಲ್ಲಿ ಪಾಲ್ಗೊಂಡ ಬಹುತೇಕರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇತ್ತ ಸೋಂಕಿತರು  ಚಿಕಿತ್ಸೆಗೂ ನಿರಾಕರಿಸುತ್ತಿದ್ದಾರೆ. ಗೌಪ್ಯವಾಗಿ ಓಡಾಡುತ್ತಿದ್ದಾರೆ. ಇದರ ನಡುವೆ ಪತ್ತೆ ಹಚ್ಚಿ ಆಸ್ಪತ್ರೆ ಸೇರಿಸಿದ ತಬ್ಲೀಘಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮುಂಬೈ(ಏ.12):  ದೆಹಲಿಯ ತಬ್ಲೀಘ್ ಜಮಾತ್ ಸಭೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ತಬ್ಲೀಘಿಗಳು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‌ಗೆ ಒಳಪಡುತ್ತಿಲ್ಲ. ಇತ್ತ ಪತ್ತೆ ಹಚ್ಚಿ ಆಸ್ಪತ್ರೆ ಸೇರಿಸಿದರೆ ಪುಂಡಾಟ ನಡೆಸುತ್ತಿದ್ದಾರೆ. ಹೀಗೆ ದೆಹಲಿಯಲ್ಲಿ ತಬ್ಲೀಘ್ ಜಮಾತ್ ಸಭೆಯಲ್ಲಿ ಪಾಲ್ಗೊಂಡ ಮಹಾರಾಷ್ಟ್ರದ 30 ವರ್ಷದ ವ್ಯಕ್ತಿ ಪತ್ತೆ ಹಚ್ಚೆ ಪರೀಕ್ಷಿಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆರಂಭಿಸಿದ ಬೆನ್ನಲ್ಲೇ ತಬ್ಲೀಘಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಸೀದಿ ಸೇರಿಕೊಂಡ 21 ತಬ್ಲೀಘಿಗಳನ್ನು ಹಿಡಿದ ಪೊಲೀಸ್‌ಗೂ ಬಂತು ಕೊರೋನಾ!

ಮಾರ್ಚ್ 6 ರಿಂದ 8 ವರೆಗೆ ನಡೆದ ತಬ್ಲೀಘಿ ಜಮಾತ್ ಸಭೆಯಲ್ಲಿ ಅಸ್ಸಾಂ ಮೂಲದ ಮಹಾರಾಷ್ಟ್ರದಲ್ಲಿ ನೆಲೆಸಿರುವ ಈ ವ್ಯಕ್ತಿ ಪಾಲ್ಗೊಂಡಿದ್ದ. ಜಮಾತ್ ಬಳಿಕ ರೈಲಿನ ಮೂಲಕ ಮುಂಬೈ ಸೇರಿಕೊಂಡಿದ್ದ. ತಬ್ಲೀಘಿಗಳ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ತಬ್ಲೀಘಿಗಳ ಹುಡುಕಾಟ ಆರಂಭವಾಗಿತ್ತು. ಬಾಲಾಪರು ಮದರಸ ಸೇರಿಕೊಂಡಿದ್ದ ಈ ತಬ್ಲೀಘಿಯನ್ನು ಪತ್ತೆ ಹಚ್ಚೆ ಅಕೋಲ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಬೆಂಗಳೂರು: ತಬ್ಲಿಘಿ ಜಮಾತ್‌ಗೆ ಹೋಗಿ ಬಂದವರಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಕೊರೋನಾ

ಹೀಗಾಗಿ ಅಕೋಲಾ ಆಸ್ಪತ್ರೆಯಲ್ಲಿ ಈ ತಬ್ಲೀಘಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಎಪ್ರಿಲ್ 7 ರಂದು ಚಿಕಿತ್ಸೆ ಆರಂಭಿಸಲಾಗಿತ್ತು. ಈ ವೇಳೆ ತಬ್ಲೀಘಿ ಹೆಚ್ಚು ಒತ್ತಡ ಹಾಗೂ ಆತಂಕಕ್ಕೆ ಒಳಗಾಗಿದ್ದ. ಇಷ್ಟೇ ಅಲ್ಲ ತಾನು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಬಿಟ್ಟು ಬಿಡಲು ವೈದ್ಯರು ಹಾಗೂ ನರ್ಸ್‌ಗಳಿಗೆ ಹೇಳಿದ್ದ. ಶನಿವಾರ(ಏ.11)ರ ಮುಂಜಾನೆ ಆಸ್ಪತ್ರೆಯ ಶೌಚಾಲಯದಲ್ಲಿ ಬ್ಲೇಡ್ ಮೂಲಕ ಕತ್ತು ಸೀಳಿ ಈ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೋಲಾ ಮೆಡಿಕಲ್ ಕಾಲೇಜು ಡೀನ್ ಅಪೂರ್ವ ಪಾವ್ಡೆ ಹೇಳಿದ್ದಾರೆ.

ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ. ಸಿಸಿಟಿವಿ ಹಾಗೂ ಆಸ್ಪತ್ರೆ ಸಿಬ್ಬಂಧಿ ಮಾಹಿತಿ ಆಧರಿಸಿ ಪ್ರಾಥಮಿಕ ವರಿದಯನ್ನು ಪೊಲೀಸರು ಸಲ್ಲಿಸಿದ್ದು, ಆತ್ಮಹತ್ಯೆ ಎಂದಿದ್ದಾರೆ. ಆದರೆ ಸಂಪೂರ್ಣ ತನಿಖೆ ಬಳಿಕ ಮಾಹಿತಿ ಬಹಿರಂಗ ಪಡಿಸುವುದಾಗ ಪೊಲೀಸರು ಹೇಳಿದ್ದಾರೆ. 

click me!