ತಿಥಿ ಊಟ ತಿಂದ 10 ಮಂದಿಯಿಂದ 26000 ಜನಕ್ಕೆ ಸಂಕಷ್ಟ!

By Kannadaprabha NewsFirst Published Apr 6, 2020, 10:22 AM IST
Highlights

ತಿಥಿ ಊಟ ತಿಂದ 10 ಮಂದಿಯಿಂದ 26000 ಜನಕ್ಕೆ ಸಂಕಷ್ಟ| ತಾಯಿಯ ಸಾವಿನ ಸುದ್ದಿ ಕೇಳಿ ಬಂದಿದ್ದಾತ ತಿಥಿ ಊಟ ಹಾಕಿಸಿದ್ದ

ಮೊರೆನಾ(ಏ.06): ತಿಥಿ ಊಟಕ್ಕೆ ಹೋಗಿ ಬಂದ 10 ಜನರು ಕೊರೋನಾ ಸೋಂಕುಪೀಡಿತರಾದ ಕಾರಣ ಮಧ್ಯಪ್ರದೇಶದ ಮೊರಾನಾ ನಗರದ 26000 ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಾಯಿಯ ಸಾವಿನ ಸುದ್ದಿ ಕೇಳಿ ಮಾ.17ಕ್ಕೆ ತವರಿಗೆ ಬಂದಿದ್ದ. ಮಾ.20ರಂದು ಆತ ತಾಯಿಯ ತಿಥಿ ಊಟ ಹಾಕಿಸಿದ್ದ. ಬಳಿಕ ಏ.2ಕ್ಕೆ ದುಬೈನಿಂದ ಮರಳಿದ್ದ ವ್ಯಕ್ತಿ ಮತ್ತು ಆತನ ಪತ್ನಿಗೆ ಕೊರೋನಾ ದೃಢಪಟ್ಟಿತ್ತು.

ದೇಶದಿಂದ ಪರಾರಿಗೆ ತಬ್ಲೀಘಿಗಳ ಪ್ರಯತ್ನ!

ಬಳಿಕ ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರೆ 10 ಜನ ಕೂಡಾ ಸೋಂಕಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಸೋಂಕಿತ 10 ಜನರು ವಾಸ ಮಾಡುತ್ತಿದ್ದ ವಾರ್ಡ್‌ ನಂ.47ರ ಎಲ್ಲಾ 26000 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್‌ಗೆ ಸೂಚಿಸಿದೆ.

click me!