ತಬ್ಲೀಘಿಗಳಿಂದ ಕೊರೋನಾ ಸೋಂಕಿತರು ಡಬಲ್!

By Kannadaprabha NewsFirst Published Apr 6, 2020, 7:41 AM IST
Highlights

ದೇಶ​ದಲ್ಲಿ ಸೋಂಕಿ​ತರ ಸಂಖ್ಯೆ4.1 ದಿನಕ್ಕೆ ಡಬಲ್‌| ತಬ್ಲೀ​ಘಿ​ಗ​ಳಿಂದಾಗಿ ಇಷ್ಟೊಂದು ಹೆಚ್ಚ​ಳ| ಸಾಮಾನ್ಯ ಸ್ಥಿತಿ​ಯಲ್ಲಿ 7.4 ದಿನಕ್ಕೆ ದ್ವಿಗುಣ| ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ

ನವದೆಹಲಿ(ಏ.04): ‘ದೇಶದಲ್ಲಿ ಕೊರೋನಾ ವೈರಸ್‌ ಹರಡುವಿಕೆ ವಾಡಿಕೆಯಂತೆ ಸರಾಸರಿ 7.4 ದಿನದಲ್ಲಿ ದ್ವಿಗುಣಗೊಳ್ಳಬೇಕಿತ್ತು. ಆದರೆ ದಿಲ್ಲಿಯ ತಬ್ಲೀಘಿ ಜಮಾತ್‌ ಧರ್ಮಸಭೆಯಲ್ಲಿ ಪಾಲ್ಗೊಂಡವರಿಗೆ ವ್ಯಾಪಕವಾಗಿ ಸೋಂಕು ತಗುಲಿದ ಕಾರಣಕ್ಕೆ ಸರಾಸರಿ 4.1 ದಿನದಲ್ಲಿ ಸೋಂಕು ದುಪ್ಪಟ್ಟಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾನುವಾರ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ‘ತಬ್ಲೀಘಿ ಜಮಾತ್‌ ಸೋಂಕಿತರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ ಬಾಕಿ ಸೋಂಕಿತರ ಸಂಖ್ಯೆಯನ್ನು ಪರಿಗಣಿಸಿದರೆ ಸರಾಸರಿ 7.4 ದಿನದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ ದುಪ್ಪಟ್ಟು ಆಗುತ್ತಿತ್ತು. ಆದರೆ ತಬ್ಲೀಘಿ ಪ್ರಕರಣಗಳನ್ನು ಸೇರಿಸಿದರೆ 4.1 ದಿನದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ’ ಎಂದರು.

ತಬ್ಲೀಘಿಗಳ ಪತ್ತೆಗೆ ಕೇಂದ್ರದ ಹೊಸ ಅಸ್ತ್ರ!

ಶನಿವಾರದಿಂದ ಭಾನುವಾರ ಸಂಜೆ 4 ಗಂಟೆಯವರೆಗೆ 15 ಹೊಸ ಸಾವು ಪ್ರಕರಣಗಳು ಕೊರೋನಾ ಕಾರಣ ಸಂಭವಿಸಿದ್ದು, ಹೊಸದಾಗಿ ಒಂದೇ ದಿನ 505 ಮಂದಿಗೆ ಸೋಂಕು ತಗುಲಿದೆ. ದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 3577ಕ್ಕೇರಿದೆ. ಸಾವಿನ ಸಂಖ್ಯೆ 83ಕ್ಕೇರಿದೆ. 267 ಜನರು ಗುಣಮುಖರಾಗಿದ್ದಾರೆ. ಒಟ್ಟು 274 ಜಿಲ್ಲೆಗಳು ಈಗ ಸೋಂಕಿತವಾಗಿವೆ ಎಂದು ಅಗರ್‌ವಾಲ್‌ ಹೇಳಿದರು.

ಮಹಾರಾಷ್ಟ್ರದಲ್ಲಿ ದೇಶದಲ್ಲೇ ಹೆಚ್ಚು ಅಂದರೆ 490 ಪ್ರಕರಣ ದೃಢಪಟ್ಟಿದ್ದು, 24 ಜನ ಸಾವನ್ನಪ್ಪಿದ್ದಾರೆ. ಆದರೆ ಪಿಟಿಐ ಸುದ್ದಿಸಂಸ್ಥೆ ಕ್ರೋಡೀಕರಿಸಿರುವ ರಾಜ್ಯವಾರು ಮಾಹಿತಿ ಪ್ರಕಾರ ಸೋಂಕಿತರ ಸಂಖ್ಯೆ 3624ಕ್ಕೇರಿದೆ ಹಾಗೂ ಸಾವನ್ನಪ್ಪಿದವರ ಸಂಖ್ಯೆ ಶತಕ ದಾಟಿ 110ಕ್ಕೆ ಹೆಚ್ಚಿದೆ. 284 ಜನರು ಗುಣಮುಖರಾಗಿ ಮನೆಗೆ ಬಿಡುಗಡೆ ಹೊಂದಿದ್ದಾರೆ.

ಅಸ್ಸಲಾಂ ಅಲೈಕುಂ.. ಏರ್‌ ಇಂಡಿಯಾ ಸೇವೆ ಪ್ರಶಂಸಿದ ಪಾಕಿಸ್ತಾನ!

click me!