ಕೊರೋನಾ ಸೋಂಕಿ​ತರ ಸಂಖ್ಯೆ 4000, ಒಂದೇ ದಿನ 27 ಬಲಿ!

By Kannadaprabha NewsFirst Published Apr 6, 2020, 7:05 AM IST
Highlights

 ಕೊರೋನಾ ಸೋಂಕಿ​ತರು 4000, ಒಂದೇ ದಿನ ದಾಖಲೆಯ 27 ಬಲಿ| -3 ದಿನ​ದಲ್ಲಿ ಡಬಲ್‌ ಸೋಂಕಿ​ತರ ಸಂಖ್ಯೆ ಡಬಲ್‌| ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 13 ಸಾವು

ನವದೆಹಲಿ(ಏ. 06): ದೇಶದಲ್ಲಿ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದ್ದು, ಭಾನುವಾರ ಒಂದೇ ದಿನ ದಾಖಲೆಯ 27 ಮಂದಿಯನ್ನು ಬಲಿ ಪಡೆದಿದೆ. ಇದು ಒಂದು ದಿನದಲ್ಲಿ ದಾಖಲಾದ ಈವರೆಗಿನ ಗರಿಷ್ಠ ಸಾವಿನ ಸಂಖ್ಯೆ ಎನಿಸಿದೆ. ಶುಕ್ರವಾರ ಒಂದೇ ದಿನ 15 ಮಂದಿ ಬಲಿಯಾಗಿದ್ದೇ ಈವರೆಗಿನ ದಾಖಲೆಯಾಗಿತ್ತು.

ಇದೇ ವೇಳೆ ಒಂದೇ ದಿನ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಆಘಾತಕಾರಿ ಸಂಗತಿಯೆಂದರೆ ಕೇವಲ ಮೂರು ದಿನದ ಅಂತರದಲ್ಲಿ 2000 ಮಂದಿಗೆ ಸೋಂಕು ತಗುಲಿದೆ. ಗುರು​ವಾರ 2300 ಮಂದಿಗೆ ಸೋಂಕು ತಗು​ಲಿತ್ತು. ಭಾನು​ವಾರ ಈ ಸಂಖ್ಯೆ 4000 ತಲು​ಪಿದೆ. ಪಿಟಿಐ ವರದಿಯ ಪ್ರಕಾರ ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 4111ಕ್ಕೆ ಏರಿಕೆ ಆಗಿದ್ದು, ಕೊರೋನಾಗೆ ದೇಶದಲ್ಲಿ ಈವರೆಗೆ 126 ಮಂದಿ ಬಲಿ ಆಗಿದ್ದಾರೆ. 315 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

'ಲಾಕ್‌ಡೌನ್‌ ಪಾಲಿಸದಿದ್ದರೆ ಗಂಡಾಂತರ, ಎಚ್ಚರ ತಪ್ಪಿದ್ರೆ ಪಾಶ್ಚಾತ್ಯ ದೇಶಗಳ ಸ್ಥಿತಿ'

ಇದೇ ವೇಳೆ ಮಹಾರಾಷ್ಟ್ರದಲ್ಲಿ ಭಾನುವಾರದ ಒಂದೇ ದಿನ 13 ಮಂದಿ ಬಲಿ ಆಗಿದ್ದು, ಸಾವಿನ ಸಂಖ್ಯೆ 45ಕ್ಕೆ ಏರಿದೆ. ಹೊಸದಾಗಿ 112 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 748 ಮಂದಿಗೆ ಸೋಂಕು ತಗಲಿದೆ. ತಮಿಳುನಾಡು ಹಾಗೂ ಮಧ್ಯಪ್ರದೇಶದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಪಂಜಾಬ್‌, ರಾಜಸ್ಥಾನ, ಹರ್ಯಾಣ, ಗುಜರಾತ್‌, ಉತ್ತರ ಪ್ರದೇಶ, ದೆಹಲಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ ಬಗ್ಗೆ ವರದಿ ಆಗಿದೆ. ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ ಯಾವುದೇ ಸಂಭವಿಸಿಲ್ಲ.

ಟಾಪ್‌ 5 ರಾಜ್ಯಗಳು

ಮಹಾರಾಷ್ಟ್ರ 13 ಸಾವು

ಮಧ್ಯ ಪ್ರದೇಶ 2 ಸಾವು

ತಮಿಳುನಾಡು 2 ಸಾವು

ರಾಜಸ್ಥಾನ 1 ಸಾವು

ಗುಜರಾತ್‌ 1 ಸಾವು

click me!