
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್ ದೇಶ ಹಾಗೂ ವಿದೇಶದಾದ್ಯಂತ ಭರ್ಜರಿ ಆರಂಭ ಪಡೆದಿದೆ. ದೇಶದಾದ್ಯಂತ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಟಾಕ್ಸಿಕ್ ಸಿನಿಮಾ, ಉತ್ತಮ ಆರಂಭದ ಹೊರತಾಗಿಯೂ ಕೊಂಚ ಕಲೆಕ್ಷನ್ ವಿಚಾರದಲ್ಲಿ ಇಳಿಮುಖದತ್ತ ಸಾಗುತ್ತಿದೆ. ಇದರ ಹೊರತಾಗಿಯೂ ಯಶ್ ಅವರ ಟಾಕ್ಸಿಕ್ ಸಿನಿಮಾವು, ದಳಪತಿ ವಿಜಯ್ ಅವರ 'ಜನ ನಾಯಗನ್' ನೆಟ್ ಕಲೆಕ್ಷನ್ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.
ನಟ ಕಮ್ ರಾಜಕಾರಣಿ, ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂದೇ ಪ್ರಸಿದ್ದಿ ಪಡೆದಿದ್ದ ಜನ ನಾಯಗನ್ ಸಿನಿಮಾ, ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿತ್ತು. ಆದರೆ 39 ದಿನಗಳ ಕಾಲ ತೆರೆಕಂಡ ಜನ ನಾಯಗನ್ ಸಿನಿಮಾವು ಭಾರತದಾದ್ಯಂತ ಸುಮಾರು 198.22 ಕೋಟಿ ರುಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಯಶ್ ಅವರ ಟಾಕ್ಸಿಕ್ ಸಿನಿಮಾ ತೆರೆ ಕಂಡ ಕೇವಲ ಐದು ದಿನಗಳೊಳಗಾಗಿ ಜನ ನಾಯಗನ್ ಸಿನಿಮಾ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದೆ.
ಟಾಕ್ಸಿಕ್ ಸಿನಿಮಾ ತೆರೆಕಂಡು ಭಾನುವಾರಕ್ಕೆ ಐದು ದಿನಗಳಾದವು. ಐದನೇ ದಿನ ದೇಶಾದ್ಯಂತ ಟಾಕ್ಸಿಕ್ ಸಿನಿಮಾವು ಬರೋಬ್ಬರಿ 23 ಕೋಟಿ ರುಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಐದನೇ ದಿನದಂತ್ಯಕ್ಕೆ ಟಾಕ್ಸಿಕ್ ಸಿನಿಮಾವು ಸುಮಾರು 214.10 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಇನ್ನು Sacnilk ವರದಿಯ ಪ್ರಕಾರ ಒಟ್ಟಾರೆ ಟಾಕ್ಸಿಕ್ ಸಿನಿಮಾವು ಐದನೇ ದಿನದಾಟದಂತ್ಯಕ್ಕೆ ಭಾರತದಾದ್ಯಂತ 255.95 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಇನ್ನು ಜಗತ್ತಿನಾದ್ಯಂತ ಟಾಕ್ಸಿಕ್ ಸಿನಿಮಾವು ಒಟ್ಟಾರೆ 285.20 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಟಾಕ್ಸಿಕ್ ಸಿನಿಮಾವು ಇದೀಗ 300 ಕೋಟಿ ರುಪಾಯಿ ಕ್ಲಬ್ ಸೇರಲು ಕೇವಲ 15 ಕೋಟಿ ರುಪಾಯಿ ಬಾಕಿಯಿದೆ. ಇಂದು ಬಹುಶಃ ಟಾಕ್ಸಿಕ್ ಸಿನಿಮಾ 300 ಕೋಟಿ ರುಪಾಯಿ ಕ್ಲಬ್ ಸೇರುವ ನಿರೀಕ್ಷೆಯಿದೆ.
ಹಲವು ತಾರಾ ನಟ-ನಟಿಯರ ದಂಡೇ ಹೊಂದಿರುವ ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರೇ, ಬಹುಭಾಷಾ ನಟಿಯರಾದ ನಯನತಾರ, ಕಿಯಾರ ಅಡ್ವಾಣಿ, ಹುಮಾ ಖುರೇಶಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮುಂತಾದ ಸೆಲಿಬ್ರಿಟಿಗಳು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಕ್ಸಿಕ್ ಸಿನಿಮಾವನ್ನು ಗೀತಾ ಮೋಹನ್‌ದಾಸ್ ಅವರು ನಿರ್ದೇಶಿಸಿದ್ದು, ಆಗಸ್ಟ್ 26ರಂದು ಕನ್ನಡ, ಹಿಂದಿ, ತಮಿಳ್, ತೆಲುಗು, ಮಲೆಯಾಳಂ ಹಾಗೂ ಇಂಗ್ಲಿಷ್‌ನಲ್ಲಿ ತೆರೆ ಕಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.