ಅತ್ಯಧಿಕ ಸಂಭಾವನೆ: ಫೋಬ್ರ್ಸ್ ಪಟ್ಟಿಯಲ್ಲಿ ಭಾರತದ ಏಕೈಕ ನಟ

Published : Dec 18, 2020, 05:42 PM IST
ಅತ್ಯಧಿಕ ಸಂಭಾವನೆ: ಫೋಬ್ರ್ಸ್ ಪಟ್ಟಿಯಲ್ಲಿ ಭಾರತದ ಏಕೈಕ ನಟ

ಸಾರಾಂಶ

ಬಾಲಿವುಡ್ ನಟ ಅಕ್ಷಯ್ ಸಿಕ್ಕಾಪಟ್ಟೆ ಸಂಭಾವನೆ ಪಡೀತಾರೆ ಅಂತ ಗೊತ್ತು. ಆದ್ರೆ ಫೋಬ್ರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯೋ ಏಕೈಕ ನಟ ಅನ್ನಿಸುವಷ್ಟು ಸಂಪಾದಿಸ್ತಾರೆ ಅಂತ ಗೊತ್ತಿತ್ತಾ..? ಇವರ ಸಂಭಾವನೆ ಎಷ್ಟಿದೆ ನೋಡಿ

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು ಫೋರ್ಬ್ಸ್ ಟಾಪ್ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ನಟ. ಅಂದಾಜು 48.5 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ, ಅಂದಾಜು ರೂ. 356 ಕೋಟಿ ಸಂಪಾದಿಸೋ ಅಕ್ಷಯ್ 52 ನೇ ಸ್ಥಾನದಲ್ಲಿದ್ದಾರೆ.

ಅಕ್ಷಯ್ ಅವರ ಮುಂಬರುವ ಚಿತ್ರಗಳಲ್ಲಿ ಬಚ್ಚನ್ ಪಾಂಡೆ, ಬೆಲ್ ಬಾಟಮ್, ಸೂರ್ಯವಂಶಿ, ಪೃಥ್ವಿರಾಜ್, ಅಟ್ರಂಗಿ ರೇ, ರಾಮ್ ಸೇತು ಮತ್ತು ರಕ್ಷಾ ಬಂಧನ್ ಸೇರಿವೆ. 
ಈ ತಿಂಗಳ ಆರಂಭದಲ್ಲಿ, ಏಷ್ಯಾ-ಪೆಸಿಫಿಕ್ ಪ್ರದೇಶದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಭಾವಶಾಲಿ ಪ್ರಸಿದ್ಧ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಜೊತೆ ಸೈಫ್ ಅಲಿ ಖಾನ್ ಮಗಳ ರೊಮ್ಯಾನ್ಸ್..!

ಈ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಆಲಿಯಾ ಭಟ್ ಮತ್ತು ಹೃತಿಕ್ ರೋಷನ್ ಇತರರು ಇದ್ದಾರೆ. ಬಾಲಿವುಡ್‌ನ ಬ್ಯಸಿಯೆಸ್ಟ್‌ ನಟರಲ್ಲಿ ಒಬ್ಬರು ಅಕ್ಷಯ್ ಕುಮಾರ್.

ನಟನ ಲಕ್ಷ್ಮೀ ಸಿನಿಮಾ ಎಲ್ಲೆಡೆ ಹವಾ ಸೃಷ್ಟಿಸಿದೆ. ಲಕ್ಷ್ಮೀ ಬಾಂಬ್ ಎಂಬ ಹೆಸರಿದ್ದ ಸಿನಿಮಾ ಆರಂಭದಲ್ಲಿ ಸ್ವಲ್ಪ ವಿವಾದಕ್ಕೂ ಗುರಿಯಾಗಿತ್ತು. ಆದರೆ ನಂತರ ಸಿನಿಮಾ ಹೆಸರನ್ನು ಲಕ್ಷ್ಮೀ ಎಂದು ಬದಲಾಯಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?