ಪ್ರೆಗ್ನೆನ್ಸಿ ಅಂತ ಪಬ್ಲಿಸಿಟಿ ಸ್ಟಂಟ್ ಮಾಡ್ತಿದ್ದಾರಾ ನೇಹಾ..?

Published : Dec 19, 2020, 04:42 PM IST
ಪ್ರೆಗ್ನೆನ್ಸಿ ಅಂತ ಪಬ್ಲಿಸಿಟಿ ಸ್ಟಂಟ್ ಮಾಡ್ತಿದ್ದಾರಾ ನೇಹಾ..?

ಸಾರಾಂಶ

ಮದುವೆಯಾಗಿ ಎರಡೇ ತಿಂಗಳಿಗೆ ಇನ್‌ಡೈರೆಕ್ಟ್ ಆಗಿ ಪ್ರೆಗ್ನೆಂಟ್ ಅಂತ ಹೇಳ್ಕೊಂಡ ಸ್ಟಾರ್ ಕಪಲ್ ಅಸಲಿಗೆ ಮಾಡ್ತಿರೋದೇನು..? ಸುಮ್ನೆ ಪಬ್ಲಿಸಿಟಿ ಸ್ಟಂಟ್ ಕೊಡ್ತುದ್ದಾರಾ ನೇಹಾ..?

ನೇಹಾ ಕಕ್ಕರ್ ಪ್ರೆಗ್ನೆನ್ಸಿ ವಿಚಾರ ಸ್ವತಃ ನಟಿಯಿಂದಲೇ ಪ್ರಚಾರ ಮಾಡಲಾಗಿದೆ. ಒಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಟ್ರೆಂಡ್ ಆದ ಬಾಲಿವುಡ್ ಜೋಡಿ ನಿಜಕ್ಕೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ..?

ಗಾಯಕಿ ನೇಹಾ ಸಹೋದರ ಟೋನಿ ಕಕ್ಕರ್ ಸೇರಿ ಬಹಳಷ್ಟು ಜನ ನಟಿಗೆ ಶುಭಾಶಯಗಳನ್ನು ತಿಳಿಸಿದ್ದರು. ನಿಜಕ್ಕೂ ನೇಹಾ ಗರ್ಭಿಣಿಯಾ..? ಮದುವೆಯಾಗಿ 2 ತಿಂಗಳಾಗಿದ್ದಷ್ಟೇ.. ಅಷ್ಟರಲ್ಲಿ ಸಿಹಿ ಸುದ್ದಿ ಕೊಡ್ತಿದ್ದಾರಾ..? ಆದ್ರೆ ಶನಿವಾರ ನಟಿ ಪೋಸ್ಟ್ ಮಾಡಿದ ಫೋಟೋ ಏನ್ ಹೇಳುತ್ತೆ ನೋಡಿ

ಮದುವೆಯಾಗಿ ಎರಡೇ ತಿಂಗಳಲ್ಲಿ ನೇಹಾ ಪ್ರೆಗ್ನೆಂಟ್..!

ನೇಹಾ ಶನಿವಾರ ಶೇರ್ ಮಾಡಿದ ಫೋಟೋ ಇದೇನು ಇಲ್ಲ, ಬರೀ ಪಬ್ಲಿಸಿಟಿ ಸ್ಟಂಟ್ ಎಂದು ರಿವೀಲ್ ಮಾಡಿದೆ. ತಮ್ಮ ಮುಂದಿನ ವಿಡಿಯೋ ಸಾಂಗ್‌ನ ಪ್ರಚಾರದ ಭಾಗವಾಗಿ ನೇಹಾ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ವೈರಲ್ ಆದ ಅದೇ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ನಟಿ. ಆದರೆ ಈ ಬಾರಿ ಪ್ರೋಮೋ ಪೋಸ್ಟರ್‌ನಂತೆ ವಿನ್ಯಾಸಗೊಳಿಸಲಾಗಿದೆ. ಖ್ಯಾಲ್ ರಾಖ್ಯಾಕರ್ 22 ಡಿಸೆಂಬರ್ ಎಂದು ಬರೆದಿದ್ದಾರೆ ಗಾಯಕಿ. ನೇಹಾ ವಿಡಿಯೋದಲ್ಲಿ ಪತಿ ರೋಹನ್‌ಪ್ರೀತ್ ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ನೇಹಾ To ನೀನಾ: ಮದ್ವೆಗೂ ಮೊದಲೇ ಪ್ರೆಗ್ನೆಂಟ್ ಆದವರಿವರು..!

ಮದುವೆ ಥೀಮ್‌ನ ವಿಡಿಯೋ ಸಾಂಗ್ ಸೆಟ್‌ನಲ್ಲಿ ನೇಹಾ ಮತ್ತು ರೋಹನ್ ಪ್ರೀತ್ ಭೇಟಿಯಾಗಿದ್ದರು. ಮದುವೆಯಾಗೋಕೂ ನಿರ್ಧರಿಸಿದ್ರು. ಅಕ್ಟೋಬರ್‌ನಲ್ಲಿ ಮದುವೆಯಾದ ಜೋಡಿ ದುಬೈಗೆ ಹನಿಮೂನ್ ಹೋಗಿದ್ರು.

ನೇಹಾ ಪೋಸ್ಟ್‌ನಲ್ಲಿ ಏನೂ ತಿಳಿಸದಿದ್ದರೂ, #KhyaalRakhyaKar(ಕಾಳಜಿವಹಿಸು) ಎಂದು ಬರೆದಿದ್ದಾರೆ. ರೋಹನ್ ಪ್ರೀತ್ ಇದಕ್ಕೆ ಕಮೆಂಟ್ ಮಾಡಿದ್ದು, ಇನ್ನು ಮುಂದೆ ನಾನು ನಿನ್ನನ್ನು ಇನ್ನಷ್ಟು ಹೆಚ್ಚು ಕೇರ್ ಮಾಡಬೇಕು ನೇಹೂ ಎಂದಿದ್ದಾರೆ. ಈ ಜೋಡಿ ತಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿಲ್ಲ. ಆದರೆ ಇದು ಹಿಂಟ್ ಕೊಟ್ಟಿದ್ದಾ ಅನ್ನೋ ಡೌಟ್ ಎಲ್ಲರಲ್ಲೂ ಇತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ