ಮಗಳಿಗೆ ನಿಜವಾದ ಪೋಷಕರನ್ನ ಹುಡುಕೋಕೆ ನೆರವಾದ್ರು ಮಾಜಿ ವಿಶ್ವಸುಂದರಿ..!

Suvarna News   | Asianet News
Published : Nov 19, 2020, 10:28 AM ISTUpdated : Nov 19, 2020, 07:08 PM IST
ಮಗಳಿಗೆ ನಿಜವಾದ ಪೋಷಕರನ್ನ ಹುಡುಕೋಕೆ ನೆರವಾದ್ರು ಮಾಜಿ ವಿಶ್ವಸುಂದರಿ..!

ಸಾರಾಂಶ

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್‌ ತಾನು ದತ್ತು ಪಡೆದ ಮುದ್ದು ಮಗಳಿಗೆ ಆಕೆಯ ನಿಜವಾದ ಪೋಷಕರನ್ನು ಹುಡುಕೋಕೆ ನೆರವಾಗಿದ್ದಾರೆ. ತಾಯ್ತನ ಬದುಕಿನ ದೊಡ್ಡ ಖುಷಿ ಎಂದ ಸುಶ್ಮಿತಾ ಮನಸು ಇದು

ಮಾತೃತ್ವ ಬದುಕಿನ ಅತ್ಯಂತ ದೊಡ್ಡ ಖುಷಿ ಎನ್ನುವ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಮನಸಿನಲ್ಲಿರುವ ಮಮತೆ ಹೇಗಿದೆ ಗೊತ್ತಾ..? ಮಗಳು ರೆನೀಯನ್ನು ಸುಶ್ಮಿತಾ 24 ವಯಸ್ಸಿನವರಿದ್ದಾಗ ದತ್ತು ಸ್ವೀಕರಿಸಿದ್ದರು. 2010ರಲ್ಲಿ ಅಲಿಶಾಳನ್ನು ದತ್ತು ಸ್ವೀಕರಿಸಿದ್ದರು.

ಆಕೆಯ ಮೊದಲ ಮಗಳು ರೆನೀಗೆ ಆಕೆಯ ನಿಜವಾದ ಪೋಷಕರನ್ನು ಹುಡುಕೋಕೆ ನೆರವಾಗುವ ಉಡುಗೋಡೆ ನೀಡೋಕೆ ನಿರ್ಧರಿಸಿದ್ದರು ಸುಶ್ಮಿತಾ. ಹಾಗೆಯೇ ರೆನೀಯ 16ನೇ ಬರ್ತ್‌ಡೇಗೆ ಇದನ್ನು ಹೇಳಿದ್ದರು. 18 ವರ್ಷವಾದ್ರೂ ತನ್ನ ಮೂಲ ಪೋಷಕರನ್ನು ನೋಡುವ ಬಗ್ಗೆ ಹೆಚ್ಚಿನ ಒಲವಿರಲಿಲ್ಲ ಆಕೆಗೆ.

ಶಾರೂಖ್ ಖಾನ್ ಪಠಾಣ್ ಲುಕ್ ವೈರಲ್..! ಹೊಸ ಸ್ಟೈಲ್ ನೋಡಿ

ಮಗಳ ಬಯಲಾಜಿಕಲ್ ಪೋಷಕರ ಹೆಸರು ಕೋರ್ಟ್‌ಗೆ ಗೊತ್ತಿದೆಯೋ ಇಲ್ಲವೋ.. ಆದರೆ ಒಂದು ಎನ್ವಲಪ್‌ನಲ್ಲಿ ಈ ಕುರಿತ ಮಾಹಿತಿ ಇದೆ. ಇದನ್ನು ನೀನು ಮಾತ್ರ 18 ವರ್ಷದ ನಂತರ ತೆರೆದು ನೋಡಬಹುದು ಎಂದು ಮಗಳಿಗೆ ಹೇಳಿದ್ದರು ಸುಶ್ಮಿತಾ.

ನನಗೆ ನನ್ನ ಮಗಳಿಗೆ ಸುಳ್ಳು ಹೇಳುವ ಮನಸಿರಲಿಲ್ಲ. ಅಲ್ಲಿ ಹೋದ ಮೇಲೆ ಆಕೆಗೆ ನೋವಾಗುವುದನ್ನು ನಾನು ಬಯಸಲಿಲ್ಲ. ನೀನ್ಯಾವಾಗ ರೆಡಿಯೋ ಆಗ ಹೋಗುವ, ನಾವು ಹೋಗಲೇ ಬೇಕು ಎಂದು ಮಗಳಿಗೆ  ಸುಶ್ಮಿತಾ ಸೇನ್. ಆದ್ರೆ ಯಾಕೆ ತನ್ನ ಮೂಲ ಪೋಷಕರನ್ನು ನೋಡಬೇಕು ಎಂದು ತಾಯಿಯನ್ನು ಪ್ರಶ್ನಿಸಿದ್ದರು ರೆನೀ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!
Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!