ರಜನೀಕಾಂತ್‌ಗಾಗಿ 10 ದಿನ ಉಪವಾಸ ಮಾಡಿದ ಶ್ರೀದೇವಿ

Suvarna News   | Asianet News
Published : Dec 12, 2020, 01:53 PM ISTUpdated : Dec 12, 2020, 02:15 PM IST
ರಜನೀಕಾಂತ್‌ಗಾಗಿ 10 ದಿನ ಉಪವಾಸ ಮಾಡಿದ ಶ್ರೀದೇವಿ

ಸಾರಾಂಶ

ಲೇಡೆ ಸೂಪರ್‌ಸ್ಟಾರ್ ಶ್ರೀದೇವಿ ತಲೈವಾ ರಜನಿಕಾಂತ್‌ಗಾಗಿ ಉಪವಾಸ ಮಾಡಿದ್ದು ಗೊತ್ತಾ..? ರಜನಿಕಾಂತ್ ಬರ್ತ್‌ಡೇ ದಿನ ನಟನ ಕುರಿತ ಅಪರೂಪದ ಸಂಗತಿಗಳೇನು ನೊಡಿ

ಫ್ಯಾನ್ಸ್‌ಗಳಿಂದ ತಲೈವಾ ಎಂದು ಕರೆಯಲ್ಪಡೋ ನಟ ರಜನೀಕಾಂತ್‌ಗೆ ಇಂದು ಹ್ಯಾಪಿ ಬರ್ತ್‌ಡೇ. ಬಸ್ ಕಂಡಕ್ಟರ್ ಆಗಿದ್ದಲ್ಲಿಂದ ಕಾಲಿವುಡ್‌ನ ತಲೈವಾ ಆಗೋ ತನಕ ನಟ ಸಿನಿ ಜರ್ನಿ ಅದ್ಭುತ. ಸೌತ್ ಸೂಪರ್‌ಸ್ಟಾರ್‌ 70ಕ್ಕೆ ಕಾಲಿಟ್ಟಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ರಜನಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.

ನಟನ ರಾಜಕೀಯ ನಡೆಯ ನಿರೀಕ್ಷೆಯಲ್ಲಿರೋ ಫ್ಯಾನ್ಸ್‌ಗೆ ದೊಡ್ಡ ಅಪ್‌ಡೇಟ್ ನೀಡದೆ ನಿರಾಸೆ ಮಾಡಿದ್ದಾರೆ ರಜನಿ. ಡಿಸೆಂಬರ್ 12ರಂದು ನಟ ಬರ್ತ್ಡೇ ಆಚರಿಸುತ್ತಿದ್ದಾರೆ. ಫ್ಯಾನ್ಸ್‌ಗಳಿಂದ ನಟನಿಗೆ ಶುಭಾಶಯಗಳು ಹರಿದುಬಂದಿವೆ.

ಬರಡು ಭೂಮಿಯನ್ನು ಹಸಿರಾಗಿಸಿದ ನಟ ಮಾಧವನ್

2011ರಲ್ಲಿ ಶೂಟಿಂಗ್ ಮಧ್ಯೆ ರಜನೀಕಾಂತ್ ಹುಷಾರು ತಪ್ಪಿದ್ದಾಗ ನಟಿ ಶ್ರೀದೇವಿ ನಟನಿಗಾಗಿ ಉಪವಾಸ ಮಾಡಿದ್ರಂತೆ. ಆ ಸಂದರ್ಭ ನಟನನ್ನು ಸಿಂಗಾಪೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಜನಿಕಾಂತ್‌ನ ಆತ್ಮೀಯ ಸ್ನೇಹಿತೆಯಾಗಿದ್ದ ಶ್ರಿದೇವಿಶಿರಡಿ ಸಾಯಿಬಾಬಾ ಮಂದಿರಲ್ಲಿ ನಟನಿಗಾಗಿ ಪ್ರಾರ್ಥಿಸಿ 10 ದಿನ ಉಪವಾಸ ಮಾಡಿದ್ದರಂತೆ. ರಜನಿ ಕುರಿತು ಇನ್ನೂ ಕೆಲವು ಅಪರೂಪದ ವಿಷಯಗಳಿವು:

  1. ರಜನೀಕಾಂತ್ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್‌ವಾಡ್
  2. ನಟನಾಗುವ ಮುನ್ನ ರಜನೀಕಾಂತ್ ಕೂಲಿಯಾಗಿ, ಕಂಡಕ್ಟರ್, ಕಾರ್ಪೆಂಟರ್ ಆಗಿಯೂ ಕೆಲಸ ಮಾಡಿದ್ದರು.
  3. ರಜನಿಕಾಂತ್ ಅವರು ಚಿತ್ರರಂಗದಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಾ 2 ವರ್ಷಗಳತನಕ, ಅವರು ವಿಲನ್ ಪಾತ್ರವನ್ನು ಮಾತ್ರ ಪಡೆಯುತ್ತಿದ್ದರು. ಅವರ ಮೊದಲು ಹೀರೋ ಪಾತ್ರ ಮಾಡಿದ ಸಿನಿಮಾ 1977 ರ ಭುವನಾ ಒರು ಕೆಲ್ವಿಕ್ಕುರಿ.
  4. ದಕ್ಷಿಣ ಮತ್ತು ಬಾಲಿವುಡ್ ಚಿತ್ರಗಳಲ್ಲದೆ, ರಜನಿಕಾಂತ್ ಬ್ಲಡ್ ಸ್ಟೋನ್ ಎಂಬ ಹಾಲಿವುಡ್ ಚಿತ್ರದಲ್ಲೂ ಕೆಲಸ ಮಾಡಿದ್ದರು.ರಜನಿಕಾಂತ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ 2000 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?