
ನಟ ಆರ್ ಮಾಧವನ್ ಏನ್ಮಾಡ್ತಿದ್ದಾರೆ ಗೊತ್ತಾ..? ನಿಶ್ಯಬ್ಧಂ ಸಿನಿಮಾ ನಟ ಬಂಜರು ಭೂಮಿಯನ್ನು ಸುಂದರವಾದ ಫಾರ್ಮ್ ಆಗಿ ಬದಲಾಯಿಸಿದ್ದಾರೆ. ಲಾಕ್‌ಡೌನ್ ಸಂದರ್ಭ ಒಂದಷ್ಟು ಜನ ಅಡುಗೆ ಮಾಡಿದ್ರು, ಕೇಕ್ ಮಾಡಿದ್ರು ಏನೇನೋ ಹೊಸ ಪ್ರಯೋಗ ಮಾಡಿದ್ರು. ಟಾಲಿವುಡ್ ನಟ ಆರ್.ಮಾಧವನ್ ತಮ್ಮ ಸಾಮರ್ಥ್ಯವನ್ನು ಬಳಿಸಿಕೊಂಡು ಬಂಜರು ಭೂಮಿಯನ್ನು ಹಸಿರಾಗಿಸಿದ್ದಾರೆ.
ಮಾಧವನ್ ಮತ್ತು ಅವರ ಸಹೋದರ ಸುಬಯೋಗನ್ ಅವರು ಪರಿಸರಸ್ನೇಹಿ ಪ್ರಾಜೆಕ್ಟ್ ಆರಂಭಿಸಿದ್ದರು. ತಮಿಳುನಾಡಿನ ಬಂಜರು ಭೂಮಿಯನ್ನು ಹಸಿರಾಗಿಸಿದ್ದು ಈ ಆ ಪ್ರದೇಶದಲ್ಲಿ ಪ್ರಕೃತಿ ಮತ್ತೆ ನಗುತ್ತಿದೆ.
ಜಗತ್ತಿನಲ್ಲೊಂದು ಗುರುತು ಮಾಡ್ತಾರಂತೆ ನಟಿ ಸ್ವರಾ..!
ಭೂಮಿಯನ್ನು ಪುನಶ್ಚೇತನಗೊಳಿಸುವುದನ್ನು ನೋಡುವುದು ಮತ್ತು ಅದರ ಅರ್ಥವನ್ನು ನೇರವಾಗಿ ತಿಳಿದಿದ್ದು ಅದ್ಭುತವಾಗಿತ್ತು. ಸರಿಯಾದ ಹಸಿಗೊಬ್ಬರದಿಂದ ಭೂಮಿಯನ್ನು ಸಿದ್ಧಪಡಿಸುವುದರಿಂದ ಹಿಡಿದು ಸರಿಯಾದ ರೀತಿಯ ಮೀನುಗಳನ್ನು ಬಾವಿಗೆ ಹಾಕುವವರೆಗೆ- ಪ್ರತಿಯೊಂದು ಕಲಿಕೆಯೂ ಅಮೂಲ್ಯವಾದುದು ಎಂದಿದ್ದಾರೆ ಮಾಧವನ್.
ಲಾಕ್‌ಡೌನ್ ಸಮಯದಲ್ಲಿ ಮಾಧವನ್ ತಮ್ಮ ಮನೆಯ ಮೇಲಿನ ಟೆರೇಸ್ ಗಾರ್ಡ್‌ನ್ ವ್ಯೂ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದರು. ಅನುಷ್ಕಾ ಶೆಟ್ಟಿ ಜೊತೆ ನಿಶ್ಯಬ್ದಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಮಾಧವನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.