
ಸದ್ಯ ಆಲಿಯಾ ಭಟ್ ರಣಬೀರ್ ಕಪೂರ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಈ ಇಬ್ಬರಿಗೂ ಇಷ್ಟು ಲಾಂಗ್ ಆಗಿ ಉಳಿದ ರಿಲೇಷನ್‌ಶಿಪ್ ಇದು. ಇದಲ್ಲದೆ ಆಲಿಯಾ ಆಗಲಿ, ರಣಬೀರ್ ಆಗಲಿ ಬೇರೆ ಯಾರೊಂದಿಗೂ ಇಷ್ಟು ದಿನ ಒಟ್ಟಾಗಿ ಇದ್ದಿಲ್ಲ.
ಕಾಫಿ ವಿತ್ ಕರಣ್‌ನಲ್ಲಿ ಶಾರೂಖ್ ಮತ್ತು ಆಲಿಯಾ ಭಟ್ ಭಾಗವಹಿಸಿದ್ದರು. ಆ ಸಂದರ್ಭ ಆಲಿಯಾ ಎಲ್ಲರ ಜೊತೆಗೂ ಡೇಟ್ ಮಾಡಿದ್ದಾಳೆ ಎಂದಿದ್ದಾರೆ ಶಾರೂಖ್ ಖಾನ್. ಆಲಿಯಾ ಯಾರ ಜೊತೆ ಡೇಟ್ ಮಾಡ್ತಿದ್ದಾಳೆ ಎಂದು ಹೇಳಿ ಎಂದ ಪ್ರಶ್ನೆಗೆ ಉತ್ತರಿಸಿದ ಶಾರೂಖ್, ಎಲ್ಲರನ್ನೂ, ಆಕೆ ಇಂಡಸ್ಟ್ರಿಗೆ ಬಂದಾಗ ಎಲ್ಲರ ಜೊತೆ ಡೇಟ್ ಮಾಡ್ತಿದ್ಲು ಎಂದಿದ್ದಾರೆ.
ಮದ್ವೆಗೆ ಮೊದಲೇ ಅಲಿಯಾ ಗುಡ್‌ನ್ಯೂಸಾ?
ಅವಳು ಚಿಕ್ಕವಳಿಂದಲೇ ನನಗೆ ಗೊತ್ತು. ಇದು ನಿಜಕ್ಕೂ ಶಾಕಿಂಗ್. ನನ್ನೆದುರು ಇವಳು ಪುಟ್ಟ ಹುಡುಗಿಯಾಗಿದ್ದಳು. ಆದ್ರೆ ನಾನು ಭೇಟಿಯಾದವರೆಲ್ಲ ಆಲಿಯಾ ಅವ್ರನ್ನ ಡೇಟ್ ಮಾಡ್ತಿದ್ರು, ಇವ್ರನ್ನ ಡೇಟ್ ಮಾಡ್ತಿದ್ರು ಎಂದಿದ್ದಾರೆ. ಆದ್ರೆ ಆಕೆಯನ್ನು ವೈಯಕ್ತಿಕವಾಗಿ ಇದುವರೆಗೂ ಕೇಳೋಕಾಗಿಲ್ಲ ಎಂದಿದ್ದಾರೆ.
ಶಾರಖ್ ಮತ್ತು ಆಲಿಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದ್ದು ಡಿಯರ್ ಝಿಂದಗಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇದನ್ನು ಗೌರಿ ಸಿಂಧೆ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ಶಾರೂಖ್ ಸೈಕಾಲಜಿಸ್ಟ್ ಆಗಿ ಕೆಲಸ ಮಾಡಿ, ಆಲಿಯಾಗೆ ಬದುಕನ್ನು ಹೊಸ ದೃಷ್ಟಿಯಲ್ಲಿ ನೋಡುವುದನ್ನು ಕಲಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.