ನಟ ಟೈಗರ್ ಶ್ರಾಫ್ ಜೊತೆ ಒಂದು ಗಂಟೆ ಲಿಫ್ಟ್ನಲ್ಲಿ ಸಿಕ್ಕಿಬಿದ್ದ ನಟಿ ನೇಹಾ: ರೋಚಕ ಕ್ಷಣದ ಕುರಿತು ಹೇಳಿದ್ದೇನು?
ಬಾಲಿವುಡ್ ನಟಿ ನೇಹಾ ಧೂಪಿಯಾ ಕೂಡ ಜನಪ್ರಿಯ ನಟಿ. ಈಕೆ ಬಹಳ ಸುದ್ದಿಯಾಗಿದ್ದು, ಅಂಗದ್ ಬೇಡಿಯನ್ನು ಗಡಿಬಿಡಿಯಿಂದ ವಿವಾಹವಾದ ಕಾರಣ. ಕೊನೆಗೂ ಈ ರಹಸ್ಯ ಬಿಚ್ಚಿಟ್ಟಿದ್ದ ನಟಿ, ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದೆ. ಅದಕ್ಕಾಗಿಯೇ ತರಾತುರಿಯಲ್ಲಿ ಮದುವೆಯಾದೆ ಎಂದು ಬಹಿರಂಗಗೊಳಿಸಿದ್ದರು. ಈ ರೀತಿ ಇದಾಗಲೇ ಕೆಲ ನಟಿಯರು ಆಗಿದ್ದಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ನೇಹಾ ಇದನ್ನು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ನೇಹಾ ಮತ್ತು ಅಂಗದ್ ಮೇ 10, 2018 ರಂದು ವಿವಾಹವಾದರು. ಸಿಖ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಿತು. ಇದು ಅಭಿಮಾನಿಗಳಷ್ಟೇ ಅಲ್ಲ ಬಾಲಿವುಡ್ ಮಂದಿಯನ್ನೇ ಬೆಚ್ಚಿ ಬೀಳಿಸುವ ಮದುವೆ ಆಗಿತ್ತು. ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ವಿಷಯ ತಿಳಿಯಿತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿ ಎಂದು ಪೋಸ್ಟ್ ಮೂಲಕ ಘೋಷಿಸಿದ್ದರು. ನಂತರ ಅಸಲಿಯತ್ತು ಬೆಳಕಿಗೆ ಬಂದಿತ್ತು.
ಇದೀಗ ನಟಿ, ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆ ಲಿಫ್ಟ್ನಲ್ಲಿ ಸಿಕ್ಕಿಬಿದ್ದ ಕುತೂಹಲದ ಮಾಹಿತಿಯನ್ನು ಶೇರ್ ಮಾಡಿದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ನೇಹಾ ಟಿವಿ ರಿಯಾಲಿಟಿ ಷೋಗಳ ತೀರ್ಪುಗಾರರಾಗಿದ್ದಾರೆ. ಈ ದಿನಗಳಲ್ಲಿ ನಟಿ ತಮ್ಮ ಚಾಟ್ ಷೋ 'ನೋ ಫಿಲ್ಟರ್ ನೇಹಾ' ಗಾಗಿ ಸುದ್ದಿಯಲ್ಲಿದ್ದಾರೆ. ನೇಹಾ ಈ ಕಾರ್ಯಕ್ರಮದ 6 ಸೀಸನ್‌ಗಳನ್ನು ಶೂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ, ಈ ಕಾರ್ಯಕ್ರಮದ ಪ್ರಚಾರದಲ್ಲಿ ನಿರತರಾಗಿದ್ದ ನಟಿ ನೇಹಾ ಅವರು ತಮಾಷೆಯ ಘಟನೆಯನ್ನು ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್ ಅವರೊಂದಿಗೆ ಲಿಫ್ಟ್ನಲ್ಲಿ ಸಿಕ್ಕಿಬಿದ್ದ ಘಟನೆಯನ್ನು ಹೇಳಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅಮ್ಮ ಆಗೋದು ನಿಜ, ಆದ್ರೆ ಗರ್ಭಿಣಿ ಅನ್ನೋದೇ ಸುಳ್ಳಾ? ಏನಿದು ಹೊಸ ವಿಷ್ಯ?
ವಾಸ್ತವವಾಗಿ, ನೇಹಾ ಮತ್ತು ಟೈಗರ್ ಶ್ರಾಫ್ 'ನೋ ಫಿಲ್ಟರ್ ನೇಹಾ' ಸಂಚಿಕೆಯನ್ನು ಶೂಟ್ ಮಾಡಲು ಸೆಟ್‌ಗೆ ತಲುಪಬೇಕಾಗಿತ್ತು. ಇಬ್ಬರೂ ಒಟ್ಟಿಗೆ ಇದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್ ಕೆಟ್ಟು ನಿಂತ ಘಟನೆ ಹೇಳಿದ್ದಾರೆ. , 'ನಾನು ಮತ್ತು ಟೈಗರ್ ರೆಕಾರ್ಡಿಂಗ್‌ಗಾಗಿ ಸೆಟ್‌ಗೆ ತಲುಪಬೇಕಾಗಿತ್ತು. ನಾವಿಬ್ಬರೂ ಲಿಫ್ಟ್ ಒಳಗೆ ಹೋದೆವು ಮತ್ತು ಅದು ಇದ್ದಕ್ಕಿದ್ದಂತೆ ನಿಂತಿತು. ಆಗ ನಾನು ತಾಳ್ಮೆ ಕಳೆದುಕೊಂಡೆ. ಒಬ್ಬೊಬ್ಬರು ಒಂದೊಂದು ಸಮಸ್ಯೆಯಲ್ಲಿ ಸಿಲುಕಿದ್ದರು. ಕೆಲವೊಬ್ಬರು ಲಿಫ್ಟ್ ಒಳಗಿನಿಂದ ನರಳುತ್ತಿದ್ದರು. ನಾನು ಅಕ್ಷರಶಃ ಸತ್ತೇ ಹೋದಂತೆ ಮಾಡುತ್ತಿದ್ದೆ. ಅದು ಬರೋಬ್ಬರಿ ಒಂದು ತಾಸು! ಅಷ್ಟರಲ್ಲಿ ನನಗೆ ಏನು ಮಾಡಬೇಕು ಎಂದೇ ತಿಳಿದಿರಲಿಲ್ಲ. ಆದರೆ ಟೈಗರ್ಗೆ ಲಿಫ್ಟ್ ಕೆಟ್ಟು ಹೋದ ವಿಷಯವೇ ತಿಳಿದಿರಲಿಲ್ಲ ಎಂದಿದ್ದಾರೆ!
ಅಷ್ಟಕ್ಕೂ ಟೈಗರ್ ಶ್ರಾಫ್ ಅವರಿಗೆ ಲಿಫ್ಟ್ ಹಾಳಾಗಿದ್ದು ಗೊತ್ತಿರಲಿಲ್ಲ ಎಂದಲ್ಲ. ಆದರೆ ಎಲ್ಲರೂ ಆತಂಕದಲ್ಲಿ ಇದ್ದರೂ ಅವರು ಮಾತ್ರ ಕೂಲ್ ಆಗಿದ್ದರು. ಅವರಿಗೆ ಸ್ವಲ್ಪವೂ ಟೆನ್ಷನ್ ಆಗಿರಲಿಲ್ಲ. ನನಗೆ ಮಾತ್ರ ಎಲ್ಲಾ ರೀತಿ ತಲೆ ನೋವು ಇದ್ದವು. ಆದರೆ ಟೈಗರ್ ತಮ್ಮ ಸನ್ಗ್ಲಾಸ್ ತೆಗೆದು ಧರಿಸಲು ಪ್ರಾರಂಭಿಸಿದರು. ಅಂತಹ ಪರಿಸ್ಥಿತಿಯಲ್ಲಿಯೂ ಅವರು ತಮ್ಮ ಶೈಲಿಯನ್ನು ಸ್ಥಾಪಿಸುವಲ್ಲಿ ಇದ್ದರೇ ವಿನಾ ಟೆನ್ಷನ್ ಒಂದು ಚೂರು ಕಾಣಿಸಲಿಲ್ಲ. ನಂತರ ಲಿಫ್ಟ್ ಸರಿಯಾಗಿ ಹೊರಗೆ ಬಂದಾಗ ಎಲ್ಲರೂ ಒಂದು ತಾಸು ಟೈಗರ್ ಜೊತೆ ಹೇಗೆ ಅನುಭವವಾಯ್ತು ಎಂದೆಲ್ಲಾ ಕೇಳಿದರು. ಎಲ್ಲರೂ ತಮಾಷೆ ಮಾಡುತ್ತಿದ್ದರು. ಅದು ನನಗೆ ವಿಚಿತ್ರ ಎನಿಸಿತು. ಏಕೆಂದರೆ ನನಗೆ ಅದು ದೊಡ್ಡ ವಿಷಯವೇ ಆಗಿರಲಿಲ್ಲ. ಆದರೆ ಜನರು ಇದು ವಿಶೇಷ ಕ್ಷಣ ಎಂದು ಜನರು ಭಾವಿಸಿದ್ದರು. ಆದರೆ ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಏಕೆಂದರೆ, ಓರ್ವ ನಿರ್ಮಾಪಕಳಾಗಿ, ಆದಷ್ಟು ಬೇಗ ಹೊರಬಂದು ಚಿತ್ರೀಕರಣವನ್ನು ಪೂರ್ಣಗೊಳಿಸುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.
ಅಮೃತಧಾರೆ ಗೌತಮ್‌ಗೆ ಹುಟ್ಟುಹಬ್ಬವಿಂದು: ನಟನ ರಿಯಲ್ ಜೀವನದ ಇಂಟರೆಸ್ಟಿಂಗ್ ವಿಷ್ಯದ ಜೊತೆ ವಿಡಿಯೋ ರಿಲೀಸ್