ಶಿವರಾಜ್ ಕುಮಾರ್ ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಈ ಸಮಯದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಪತ್ನಿ ಗೀತಾ. ತಮ್ಮ ಪತ್ನಿಯ ತ್ಯಾಗ, ಪ್ರೀತಿ ನೆನೆದು ಶಿವಣ್ಣ ಕಣ್ಣೀರಿಟ್ಟಿದ್ದಾರೆ.
ಸ್ಯಾಂಡಲ್ವುಡ್ ನಟ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Sandalwood actor and hat-trick hero Shivarajkumar) ಕ್ಯಾನ್ಸರ್ (cancer) ಎಂಬ ಯುದ್ಧ ಗೆದ್ದು ಬಂದಿದ್ದಾರೆ. ಅಮೆರಿಕಾದಿಂದ ವಾಪಸ್ ಬಂದಿರುವ ಶಿವಣ್ಣ ಅವರಿಗೆ ಇಡೀ ಕರ್ನಾಟಕದ ಜನತೆ ಸ್ವಾಗತ ಕೋರಿದೆ. ಎಲ್ಲರ ಪ್ರೀತಿ, ಪ್ರಾರ್ಥನೆಗೆ ಆಭಾರಿಯಾಗಿರುವ ಶಿವರಾಜ್ ಕುಮಾರ್, ತಮ್ಮ ಪತ್ನಿ ಗೀತಾ (Geetha)ರಿಗೆ ಧನ್ಯವಾದ ಹೇಳ್ತಾ ಕಣ್ಣೀರಿಟ್ಟಿದ್ದಾರೆ. ಸುಖ, ಸಂತೋಷ, ನೋವಿನಲ್ಲಿ ಜೊತೆಯಾಗಿ ನಿಂತಿರುವ ಗೀತಾ, ಪತ್ನಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಶಿವಣ್ಣ ಹೇಳಿದ್ದಾರೆ. ಗೀತಾ ಬಗ್ಗೆ ಮಾತನಾಡ್ತಿದ್ದ ಶಿವಣ್ಣ ಅವರಿಗೆ ತಮ್ಮ ಭಾವನೆಯನ್ನು ಕಂಟ್ರೋಲ್ ಮಾಡಲು ಸಾಧ್ಯವಾಗ್ಲಿಲ್ಲ. ಸಂಪೂರ್ಣ ಕುಸಿದು ಹೋದ ಶಿವಣ್ಣ, ಗಳಗಳನೆ ಕಣೀರಿಟ್ಟಿದ್ದಾರೆ.
ಬಿ. ಗಣಪತಿ ಜೊತೆ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಮಾತುಕತೆ ನಡೆಸಿದ್ರು. ಸಂದರ್ಶನದಲ್ಲಿ ಗೀತಾ ಹೋರಾಟದ ಆ ದಿನಗಳನ್ನು ಹಂಚಿಕೊಂಡ್ರು. ಶಿವಣ್ಣ ಕೂಡ ತಮ್ಮ ಕೆಟ್ಟ ದಿನಗಳು ಹೇಗಿದ್ವು, ಏನೆಲ್ಲ ಹೋರಾಟ ನಡೆಸಬೇಕಾಯ್ತು ಎಂಬುದನ್ನು ಹೇಳಿದ್ದಾರೆ. ಗೀತಾ ಹಾಗೂ ಮಗಳು ಸೇರಿದಂತೆ ಎಲ್ಲರೂ ನನಗೆ ಧೈರ್ಯ ಹೇಳಿದ್ರು. ಗೀತಾ ಇಲ್ಲದೆ ನಾನು ಇಲ್ಲ. ಎಲ್ಲರಿಗೂ ಎಲ್ಲ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಆದ್ರೆ ಗೀತಾ ಎಲ್ಲವನ್ನೂ ಮಾಡಿದ್ದಾರೆ. ಗಂಡ ಹೆಂಡತಿ ಮಧ್ಯೆ ಏನೇ ಇರ್ಬಹುದು, ಆದ್ರೆ ಗೀತಾ, ನನ್ನನ್ನು ತನ್ನವನು ಎನ್ನುವಂತೆ ನೋಡಿದ್ದಾರೆ. ಅವರು ಹೆಂಡತಿಯಾಗಿ ಮಾತ್ರವಲ್ಲ ತಾಯಿಯಾಗಿ, ಗೆಳತಿಯಾಗಿ ನನ್ನನ್ನು ನೋಡಿದ್ದಾರೆ. ನಾನು ಕೆಲವೊಂದು ತಪ್ಪು ಮಾಡಿದ್ದೇನೆ. ಅವರ ಪ್ರೀತಿಗೆ ನಾನು ಫಿಟ್ ಆಗಿದ್ದೇನಾ ಗೊತ್ತಿಲ್ಲ. ಸಾರಿ ಅಂತ ಆರಾಮಾಗಿ ಹೇಳ್ಬಹುದು. ಆದ್ರೆ ಅದ್ರ ಬಗ್ಗೆ ಆಲೋಚನೆ ಮಾಡಿದಾಗ ಅರ್ಥ ಆಳವಾಗಿ ಹೋಗುತ್ತೆ. ನಾನು ಅವರನ್ನು ಪತ್ನಿಯಾಗಿ ಪಡೆಯಲು ತುಂಬಾ ಅದೃಷ್ಟ ಮಾಡಿದ್ದೆ ಎನ್ನುತ್ತ ಶಿವರಾಜ್ ಕುಮಾರ್ ಕಣ್ಣೀರಿಟ್ಟಿದ್ದಾರೆ.
ನಾನು ಸಿನಿಮಾ ಶೂಟಿಂಗ್ ಮಾಡೋದು ಬೇಡ್ವಾ? ಶಿವಣ್ಣ ಕೋಪಕ್ಕೆ 'ಗಡಗಡ' ಆಗೋದ್ರಾ?
ನನ್ನ ಎಲ್ಲ ಏರಿಳಿತದಲ್ಲಿ ಗೀತಾ ನನ್ನ ಜೊತೆಗಿದ್ದಾರೆ. ಅವರ ಈ ಕೆಲಸವನ್ನು ನಾವು ಎಂದಿಗೂ ಮರೆಯೋದಿಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ನಾನು ಇಷ್ಟರಮಟ್ಟಿಗೆ ಬಂದು ನಿಂತಿದ್ದೇನೆ ಅಂದ್ರೆ ನನ್ನ ಪತ್ನಿ ಗೀತಾ, ಮಗಳು, ಇಡೀ ಇಂಡಸ್ಟ್ರೀ ಬೆಂಬಲದಿಂದ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ಅನೇಕ ದಿನಗಳ ಕಾಲ ತಮಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತೇ ಇರಲಿಲ್ಲವಂತೆ. ಅವರಿಗೆ ತಿಳಿಯದೆ ಗೀತಾ ನೋವನ್ನು ನುಂಗಿಕೊಂಡಿದ್ದರು. ಎರಡು ಆಪರೇಷನ್ ಕೂಡ ನಡೆದಿತ್ತು. ಆದ್ರೆ ಕಿಮೋಥೆರಪಿ ಅನಿವಾರ್ಯವಾದಾಗ ಗೀತಾ, ಶಿವರಾಜ್ ಕುಮಾರ್ ಅವರಿಗೆ ಅಳ್ತಾ ವಿಷ್ಯ ತಿಳಿಸಿದ್ರು. ಮುಂದೇನೂ ಬೇಡ ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದ ಶಿವರಾಜ್ ಕುಮಾರ್ ನಂತ್ರ ಧೈರ್ಯ ಮಾಡಿ ಕಿಮೋಗೆ ಸಿದ್ಧವಾಗಿದ್ದರು. ನಾಲ್ಕು ಕಿಮೋಥೆರಪಿ ಮಾಡಿಸ್ಕೊಂಡ ಶಿವರಾಜ್ ಕುಮಾರ್., ಕಿಮೋ ಮಧ್ಯೆಯೇ ಎರಡು ಸಿನಿಮಾ, ಡಿಕೆಡಿ ಹಾಗೂ ಕೆಲ ಜಾಹೀರಾತುಗಳ ಶೂಟಿಂಗ್ ಮಾಡಿದ್ದರು. ಆ ದಿನಗಳಲ್ಲಿ ಹೇಗೆ ಕೆಲಸ ಮಾಡಿದೆ ಎಂಬುದು ನನಗೆ ತಿಳಿದಿಲ್ಲ. ಧೈರ್ಯ ಮಾಡಿ ಎಲ್ಲವನ್ನೂ ಎದುರಿಸಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಮತ್ತೆ ನಿಮ್ಮನ್ನು ನೋಡುತ್ತೀನಿ ಅಂದುಕೊಂಡಿರಲಿಲ್ಲ; ಪತ್ನಿ ಗೀತಾ ಜೊತೆ ಜೀ ವೇದಿಯಲ್ಲಿ ಕಾಣಿಸಿಕೊಂಡ ಶಿವಣ್ಣ ಭಾವುಕ
ಬಿ. ಗಣಪತಿ ಯುಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಹಾಗೂ ಗೀತಾ, ಕ್ಯಾನ್ಸರ್ ಎದುರಿಸಿದ ಆ ದಿನ, ಅಮೆರಿಕಾದಲ್ಲಿ ನಡೆದ ಆಪರೇಷನ್ ಹಾಗೂ ಆ ದಿನಗಳಲ್ಲಿ ಮಾಡಿದ ಕೆಲಸಗಳನ್ನು ಅವರು ವೀಕ್ಷಕರ ಮುಂದಿಟ್ಟಿದ್ದಾರೆ. ಶಿವರಾಜ್ ಕುಮಾರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಣ್ಣೀರಿಡದಂತೆ ಶಿವಣ್ಣನಿಗೆ ಧೈರ್ಯ ಹೇಳಿದ್ದಾರೆ. ನಿಮ್ಮ ಜೊತೆ ಸದಾ ನಾವಿದ್ದೇವೆ ಎಂದಿದ್ದಾರೆ.