ಸೆಕ್ಸೀ ಫೋಟೋಸ್‌ಗೆ ಡಬಲ್ ಮೀನಿಂಗ್ ಕ್ಯಾಪ್ಶನ್: ನವರಾತ್ರಿಗೆ ಅಶ್ಲೀಲ ಪೋಸ್ಟರ್ ಹಾಕಿದ ಎರೋಸ್ ನೌ..!

Suvarna News   | Asianet News
Published : Oct 23, 2020, 12:51 PM ISTUpdated : Oct 23, 2020, 01:02 PM IST
ಸೆಕ್ಸೀ ಫೋಟೋಸ್‌ಗೆ ಡಬಲ್ ಮೀನಿಂಗ್ ಕ್ಯಾಪ್ಶನ್: ನವರಾತ್ರಿಗೆ ಅಶ್ಲೀಲ ಪೋಸ್ಟರ್ ಹಾಕಿದ ಎರೋಸ್ ನೌ..!

ಸಾರಾಂಶ

ನವರಾತ್ರಿಗೆ ಸ್ಪೆಷಲ್ ಪೋಸ್ಟರ್ | ಅಶ್ಲೀಲ ಪೋಸ್ಟರ್ ಹಾಕಿದ ಎರೋಸ್ ನೌ | ನೆಟ್ಟಿಗರ ವಿರೋಧ | ಸೆಕ್ಸೀ ಫೋಟೋಸ್‌ಗೆ ಅಶ್ಲೀಲ ಕ್ಯಾಪ್ಶನ್

ಜಾಹೀರಾತಿನ ವಿಚಾರದಲ್ಲಿ ತನಿಷ್ಕ್ ಪೇಚಿಗೆ ಬಿದ್ದ ಬೆನ್ನಲ್ಲೇ ಇದೀಗ ಪೋಸ್ಟರ್ ವಿಚಾರದಲ್ಲಿ ಎರೋಸ್ ನೌ ಸಂಕಷ್ಟಕ್ಕೆ ಬಿದ್ದಿದೆ. ಅಶ್ಲೀಲವಾಗಿ ನವರಾತ್ರಿಗೆ ಪೋಸ್ಟರ್ ಹಾಕಿದ ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಎರೋಸ್ ನೌ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. 

ಎರೋಸ್ ಇಂಟರ್‌ನ್ಯಾಷನಲ್ ಒಡೆತನದ ಎರೋಸ್ ನೌ ನವರಾತ್ರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕಿತ್ತು. ನೆಟ್ಟಿಗರು ಪೋಸ್ಟರ್ ವಿರೋಧಿಸ್ತಿದ್ದಂತೆ ಅವುಗಳನ್ನು ಡಿಲೀಟ್ ಮಾಡಲಾಗಿದೆ.

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ಬೀ ನಾಟಿ, ಸ್ವೀಟ್ ತೋ ಮಿಠಾಯಿ ಭೀ ಹೈ(ನಾಟಿಯಾಗಿ, ಸ್ವೀಟ್‌ಗೆ ಮಿಠಾಯಿ ಇದೆ) ಎಂದು ಕ್ಯಾಪ್ಶನ್ ಕೊಡಲಾಗಿತ್ತು. ಇನ್ನೊಂದರಲ್ಲಿ ಕತ್ರೀನಾ ಕೈಫ್ ಫೋಟೋ ಹಾಕಿ, ನಿಮ್ಮ ರಾತ್ರಿಯನ್ನು ನನ್ನ ನವರಾತ್ರಿಗೆ ಹಾಕಬೇಕಾ ಎಂದು ಪ್ರಶ್ನಿಸಲಾಗಿದೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ #BoycottErosNow ಟ್ರೆಂಡ್ ಆಗಿದೆ. ಹಿಂದೂ ಹಬ್ಬವನ್ನು ಅವಮಾನಿಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ #BoycottErosNow ಟ್ರೆಂಡ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಎರೋಸ್ ನೌ ನಾವು ಸಂಸ್ಕೃತಿಯನ್ನು ಸಮನಾಗಿ ಗೌರವಿಸುತ್ತೇವೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದು ಬರೆದಿದ್ದಾರೆ. ನಾವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದೇವೆ, ನಿಮ್ಮ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!