ದೊಡ್ಡ ಅವಘಡದಿಂದ ಪಾರಾದ ನಟ ವಿಶಾಲ್; ಟೆಕ್ನಿಕಲ್ ಸಮಸ್ಯೆಯಿಂದ ಟ್ರಕ್ ಕಂಟ್ರೋಲ್ ತಪ್ಪಿತ್ತುಎಂದ ತಂಡ

Published : Feb 23, 2023, 09:47 AM IST
ದೊಡ್ಡ ಅವಘಡದಿಂದ ಪಾರಾದ ನಟ ವಿಶಾಲ್; ಟೆಕ್ನಿಕಲ್ ಸಮಸ್ಯೆಯಿಂದ ಟ್ರಕ್ ಕಂಟ್ರೋಲ್ ತಪ್ಪಿತ್ತುಎಂದ ತಂಡ

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಅಪಾಯದಿಂದ ಪಾರಾಗಿರುವ ವಿಡಿಯೋ ಹಂಚಿಕೊಂಡ ನಟ ವಿಶಾಲ್. ಟ್ವಟಿರ್‌ನಲ್ಲಿ ಟ್ರೆಂಡ್ ಆಯ್ತು Vishal accident...

ತೆಲುಗು ಚಿತ್ರರಂಗದ ಸಿಂಪಲ್ ನಟ ಕಮ್ ನಿರ್ಮಾಪಕ ವಿಶಾಲ್ ಮಾರ್ಕ್‌ ಆಂಟನಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 100 ಸಾಹಸ ಕಲಾವಿದರು ಇರುವ ಸೆಟ್‌ನಲ್ಲಿ ಫೈಟಿಂಗ್ ಸೀನ್‌ ಚಿತ್ರೀಕರಣ ಮಾಡಲಾಗಿತ್ತು ಈ ವೇಳೆ ಟೆಕ್ನಿಕಲ್ ಸಮಸ್ಯೆಯಿಂದ ಟ್ರಕ್ ನಿಯಂತ್ರಣ ತಪ್ಪಿ ವಿಶಾಲ್ ಪಕ್ಕದಲ್ಲೇ ಹರಿದಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಟ ಘಟನೆ ಬಗ್ಗೆ ವಿವರಿಸಿದ್ದಾರೆ.

ವಿಶಾಲ್ ಟ್ವೀಟ್: 

'ಕೆಲವೇ ಸೆಕೆಂಡ್‌ಗಳಲ್ಲಿ ಕೆಲವೇ ಇಂಚ್‌ಗಳಲ್ಲಿ ನನ್ನ ಪ್ರಾಣ ಕಳೆದುಕೊಳ್ಳುತ್ತಿದೆ. ದೇವರ ದಯೇ ಕ್ಷೇಮವಾಗಿರುವೆ. ಈ ಘಟನೆಯಿಂದ ಕೊಂಚ ಶಾಕ್ ಆಗಿರುವೆ ಆದರೂ ಚಿತ್ರೀಕರಣ ಮತ್ತೆ ಶುರು ಮಾಡಿರುವೆ' ಎಂದು ವಿಶಾಲ್ ಬರೆದುಕೊಂಡಿದ್ದಾರೆ. 

'ನಿಜಕ್ಕೂ ದೇವರಿಗೆ ಥ್ಯಾಂಕ್ಸ್‌ ಹೇಳಬೇಕು. ಅಪಘಾತ ಹೇಗಾಯ್ತು ಅಂತ ಗೊತ್ತಾಗುತ್ತಿಲ್ಲ, ಶೂಟಿಂಗ್ ಪ್ಲ್ಯಾನ್ ಮಾಡಿರುವ ಪ್ರಕಾರ ಟ್ರಕ್ ನೇರವಾಗಿ ಹೋಗಬೇಕಿತ್ತು ಆದರೆ ನಿಯಂತ್ರಣ ತಪ್ಪಿ ಪಕ್ಕಕ್ಕೆ ಹರಿದಿದೆ.  ಒಂದ ವೇಳೆ ನೇರವಾಗಿ ಬಂದಿದ್ದರೆ ಖಂಡಿತಾ ವಿಶಾಲ್ ಮತ್ತು ನಾನು ಇಂದು ಈ ಘಟನೆ ಬಗ್ಗೆ ಟ್ವೀಟ್ ಮಾಡುತ್ತಿರಲಿಲ್ಲ. ದೇವರೇ ನಮ್ಮನ್ನು ಕಾಪಾಡಿರುವುದು' ಎಂದು ಮಾರ್ಕ್ ಆಂಟನಿ  ನಿರ್ದೇಶಕ ಎಸ್‌ಜೆ ಸೂರ್ಯ ಟ್ವೀಟ್ ಮಾಡಿದ್ದಾರೆ. 

ವಿಶಾಲ್‌ ಮನೆ ಮೇಲೆ ಕಲ್ಲು:

ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ಅಪಘಾತ ಮತ್ತು ಗಲಾಟೆಯಿಂದ ವಿಶಾಲ್ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ವಿಶಾಲ್ ಚೆನ್ನೈನ ಅಣ್ಣಾ ನಗರದಲ್ಲಿರುವ ನಿವಾಸದ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು. ಈ ಮನೆಯಲ್ಲಿ ವಿಶಾಲ್ ತಂದೆ ತಾಯಿ ವಾಸವಾಗಿದ್ದರಂತೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ ಕೆಂಪು ಬಣ್ಣದ ಕಾರಿನಲ್ಲಿ ಕೆಲವು ದುಷ್ಕರ್ಮಿಗಳು ವಿಶಾಲ್ ಮನೆ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ದಾಳಿಯಿಂದಾಗಿ ವಿಶಾಲ್ ಮನೆಯ ಬಾಲ್ಕನಿ ಗ್ಲಾಸ್‌ಗಳು ಮತ್ತು ಮನೆಯ ಇತರ ಕೆಲವು ಸ್ಥಳಗಳಿಗೆ ಹಾನಿಯಾಗಿದೆ. ಈ ಬಗ್ಗೆ ವಿಶಾಲ್ ತಮ್ಮ ಮ್ಯಾನೇಜರ್ ಹರಿಕೃಷ್ಣನ್ ಮೂಲಕ ಅಣ್ಣಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿದ್ಯಾಭ್ಯಾಸಕ್ಕೆ ವಿಶಾಲ್ ಸಾಥ್:

ಪುನೀತ್ ಅಕಾಲಿಕ ಮರಣದ ನೋವನ್ನು ಅನಿವಾರ್ಯವಾಗಿ ಅರಗಿಸಿಕೊಳ್ಳಬೇಕಾಗಿದೆ. ಪುನೀತ್  ರಾಜ್ ಕುಮಾರ್ ಸುಮಾರು 1800  ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದರು. ನಟ ವಿಶಾಲ್ ಈ ಮಕ್ಕಳ ವಿದ್ಯಾಭ್ಯಾಸ ಹೊಣೆ ನನ್ನದು ಎಂದು ತಿಳಿಸಿದ್ದಾರೆ. 

ಲೈಂಗಿನ ದೌರ್ಜನ್ಯ ಆರೋಪವಿದೆ:

 ಇತ್ತೀಚಿಗೆ ನಟಿ ಗಾಯತ್ರಿ  ರಘುರಾಮ್‌ ವಿಶಾಲ್ ವಿರುದ್ಧ ಟ್ಟೀಟ್ ಮಾಡಿದ್ದಾರೆ. 'ಮನಸೆಲ್ಲಾ ನೀನೇ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಗಾಯತ್ರಿ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಆನಂತರ ಬಿಜೆಪಿ ಸೇರಿಕೊಂಡು ರಾಜಕಾರಣಿ ಆಗಿದ್ದಾರೆ.

' ನಟ ವಿಶಾಲ್ ಮತ್ತು ಸ್ನೇಹಿತರು ಚಿತ್ರರಂಗಕ್ಕೆ ಬರುವ ಹೊಸ ನಟಿಯರ ಮೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಬಳಸಿಕೊಂಡು ಬಿಸಾಡುತ್ತಾರೆ. ನಾನು ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಇದರ ಬಗ್ಗೆ ಧ್ವನಿ  ಎತ್ತಬೇಕಿದೆ. ವಿಶಾಲ್ ನೀವು ಮೊದಲು ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿದೆ.  ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ. ನೀನು ಪದೇ ಪದೇ ಪೀಡಿಸುವ ಕಾರಣಕ್ಕೆ ನಟಿಯರು ನಿನ್ನನ್ನು ಕಂಡು ದೂರು ಓಡುತ್ತಾರೆ. ಈ ವಿಚಾರ ನಿನಗೆ ಗೊತ್ತಾ? ಚಿತ್ರರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಬೇಕು ಆದರೆ ನೀನು ವಿಲನ್ ರೀತಿ ವರ್ತಿಸಿದೆ' ಎಂದು ಗಾಯತ್ರಿ ಟ್ಟೀಟ್ ಮಾಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?