ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

By Suvarna News  |  First Published Aug 16, 2023, 2:52 PM IST

ಖುಷಿ ಚಿತ್ರದ ಪ್ರಚಾರದಲ್ಲಿರುವ ವಿಜಯ್​ ದೇವರಕೊಂಡ ಮತ್ತು ಸಮಂತಾ ಅವರು ವೇದಿಕೆ ಮೇಲೆ ಸಕತ್​ ರೊಮ್ಯಾನ್ಸ್​ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗ್ತಿದೆ. 
 


ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.  ಸೆಪ್ಟೆಂಬರ್​ 1ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಮೊದಲ ಹಾಡು ಕಳೆದ ಮೇ 9ರಂದು ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಹುಟ್ಟುಹಬ್ಬಕ್ಕೆ ಗಿಫ್ಟ್​ ಆಗಿ ನೀಡಲಾಗಿತ್ತು. ಅದಾದ ಬಳಿಕ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ.  ನಟಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಲವ್​, ರೊಮ್ಯಾಂಟಿಕ್​ ಎಂಟರ್ಟೈನ ರ್ಚಿತ್ರವಾಗಿದ್ದು, ಶಿವ ನಿರ್ವಾಣ ಎಂಬುವರು ನಿರ್ದೇಶನ​ ಮಾಡಿದ್ದಾರೆ. ಲೈಗರ್ ಸಿನಿಮಾ ಸೋಲಿನ ಬಳಿಕ ಸಮಂತಾ ರುತ್​ ಪ್ರಭು ಜೊತೆ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ನಟ ವಿಜಯ್ ದೇವರಕೊಂಡ.

ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಖುಷಿ ಚಿತ್ರದ ನಾಯಕಿ  ಸಮಂತಾ ಅವರ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗುತ್ತಿವೆ. ಸಮಂತಾ ಹಾಗೂ ವಿಜಯ್ ಅವರ ಸಿನಿಮಾದ ರೊಮ್ಯಾಂಟಿಕ್ ಹಾಡುಗಳು (Romantic Songs) ವೈರಲ್ ಆಗಿವೆ. ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಖುಷಿ ಚಿತ್ರಕ್ಕೆ ಸಂಬಂಧಿಸಿದಂತೆ ಇದಾಗಲೇ ಈ ಜೋಡಿಯ ಹಲವಾರು ಫೋಟೋಗಳು ವೈರಲ್​ ಆಗಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಇದೀಗ ವಿಜಯ ದೇವರಕೊಂಡ ಅವರು ಸಮಂತಾ ಮೇಲೆ ತಮಗೆ ಕ್ರಷ್​ ಇದೆ ಎನ್ನುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ. ಸಮಂತಾ ನಿಮ್ಮ ಕ್ರಷ್​ ಆದರೆ ರಶ್ಮಿಕಾ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ.

Tap to resize

Latest Videos

ಮದ್ವೆಯ ಮಾತನಾಡುತ್ತಲೇ ಸಮಂತಾ ನನ್ನ ಕ್ರಷ್​ ಎಂದ ವಿಜಯ ದೇವರಕೊಂಡ; ರಶ್ಮಿಕಾ ಶಾಕ್​!

ಈಗ ಅದರ ನಡುವೆಯೇ, ನಿನ್ನೆ ನಡೆದ ಕಾರ್ಯಕ್ರಮವೊಂದರ ವಿಡಿಯೋ ನೋಡಿ ಫ್ಯಾನ್ಸ್​ ಉಸ್ಸಪ್ಪಾ ಉಸ್ಸೋ ಎನ್ನುತ್ತಿದ್ದಾರೆ. ಆಗಸ್ಟ್​ 15ರ ಸ್ವಾಂತಂತ್ರ್ಯ ದಿನವಾದ (Indepence day) ನಿನ್ನೆ ಖುಷಿ ಚಿತ್ರತಂಡ ಹೈದರಾಬಾದ್​ನ ಎಚ್​ಐಸಿಸಿ ಹಾಲ್​ನಲ್ಲಿ  ಸಂಗೀತ ಸಂಜೆ ಆಯೋಜಿಸಿತ್ತು. ಈ ಸಂಗೀತ ಸಂಜೆಯಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದಾರೆ. ಇದರಲ್ಲಿ ಅವರು ಸಂಪೂರ್ಣ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಂಡಿದ್ದು, ಅದರ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಾಹಿಬ್, ಸಿದ್ ಶ್ರೀರಾಮ್, ಜಾವೇದ್ ಅಲಿ, ಅನುರಾಗ್ ಕುಲಕರ್ಣಿ, ಹರಿಚರಂ ಮತ್ತು ಚಿನ್ಮಾಯಿ ಕೂಡ ಪ್ರದರ್ಶನ ನೀಡಿದರು. ಆದರೆ ವಿಜಯ್​ ಮತ್ತು ಸಮಂತಾ ಅವರ ರೊಮ್ಯಾನ್ಸ್​ ನೋಡಿ ಕೆಲವರು ಟ್ರೋಲ್​ ಮಾಡಿದ್ದರೆ, ಇನ್ನು ಕೆಲವರು ರಶ್ಮಿಕಾ ಕಥೆ ಮುಗಿದಂತೆ ಎಂದಿದ್ದಾರೆ. ಇವರ ರೊಮ್ಯಾಂಟಿಕ್​ ಸಾಂಗ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಇದಕ್ಕೆ ಒಂದು ಕಾರಣವೂ ಇದೆ. ಈ ನೃತ್ಯಕ್ಕೂ ಮುನ್ನ  ವಿಜಯ್​ ದೇವರಕೊಂಡ (Vijay Devarakonda) ಅವರು ತಮ್ಮ ಶರ್ಟ್​ ಅನ್ನು ತೆಗೆದು ಕೇವಲ ಬನಿಯನ್​ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್​ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್​ ಮುಂದುವರೆಯಿತು. ಕೆಲವರು ವಿಜಯ್​ ದೇವರಕೊಂಡ ಅವರ ಡ್ರೆಸ್ಸಿಂಗ್ ಬಗ್ಗೆ ಕಮೆಂಟ್ ಮಾಡುತ್ತಿದ್ದರೆ,  ಸಮಂತಾ ಅಭಿಮಾನಿಗಳು ಕೂಡ ಸಮಂತಾ ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಪರಿಗೆ ಅಚ್ಚರಿಗೊಂಡಿದ್ದದಾರೆ.  ಇದರ ಜೊತೆಗೆನೇ ಸಕತ್​ ಟ್ರೋಲ್​ ಕೂಡ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆ ಥಹರೇವಾರಿ  ಮೀಮ್ಸ್​ ಬರುತ್ತಿವೆ.  

ವಿಜಯ್​ ದೇವರಕೊಂಡ ಮದ್ವೆಯಾದ್ಮೇಲೆ ಪ್ರೀತಿ, ಪ್ರೇಮ, ರೊಮ್ಯಾನ್ಸ್​ ಹೀಗಿರತ್ತಂತೆ!
 

click me!