
ಹೈದರಾಬಾದ್/ಗದ್ವಾಲ್: ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸಂತೋಷದಲ್ಲಿರುವ ಟಾಲಿವುಡ್‌ನ ಯುವ ನಟ, ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ತೆಲಂಗಾಣದ ಗದ್ವಾಲ್ ಜಿಲ್ಲೆ ಸಮೀಪದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ.
ಅದೃಷ್ಟವಶಾತ್, ವಿಜಯ್ ದೇವಕೊಂಡ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಈ ಸುದ್ದಿ ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ವಿಜಯ್ ದೇವರಕೊಂಡ ಅವರು ತಮ್ಮ ನಿಶ್ಚಿತಾರ್ಥದ ನಂತರ, ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆ ಪುಟ್ಟಪರ್ತಿಯಲ್ಲಿರುವ ಸತ್ಯಸಾಯಿ ಸಮಾಧಿಯ ದರ್ಶನಕ್ಕೆ ತಮ್ಮ ಸ್ನೇಹಿತರೊಂದಿಗೆ ತೆರಳಿದ್ದರು. ದರ್ಶನ ಮುಗಿಸಿ ವಾಪಸ್ ಹೈದರಾಬಾದ್‌ಗೆ ಬರುತ್ತಿದ್ದಾಗ, ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆ, ಉಂಡವೆಲ್ಲಿ ಮಂಡಲದ 44ನೇ ರಾಷ್ಟ್ರೀಯ ಹೆದ್ದಾರಿಯ ವರಸಿದ್ಧಿ ವಿನಾಯಕ ಹತ್ತಿ ಮಿಲ್ ಬಳಿ ಈ ಅಪಘಾತ ಸಂಭವಿಸಿದೆ.
ವಿಜಯ್ ದೇವರಕೊಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾದ ಬಗ್ಗೆ ಎರಡು ವಿಭಿನ್ನ ಮಾಹಿತಿ ಲಭ್ಯವಾಗಿದೆ:
ಬೊಲೆರೋ ವಾಹನ ಡಿಕ್ಕಿ: ಆಂಧ್ರಪ್ರದೇಶದ ನಂದಿಕೊಟ್ಕೂರುನಿಂದ ಪೆಬ್ಬೇರು ಕಡೆಗೆ ಹಸುಗಳನ್ನು ಸಾಗಿಸುತ್ತಿದ್ದ ಬೊಲೆರೋ ವಾಹನವು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ, ವಿಜಯ್ ದೇವರಕೊಂಡ ಅವರ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಒಂದು ಮೂಲ ಹೇಳಿದೆ.
ಏಕಾಏಕಿ ಟರ್ನಿಂಗ್: ಇನ್ನೊಂದು ಮಾಹಿತಿಯ ಪ್ರಕಾರ, ಉಂಡವೆಲ್ಲಿ ಬಳಿ ಬೊಲೆರೋ ವಾಹನವೊಂದು ಏಕಾಏಕಿ ಬಲಕ್ಕೆ ತಿರುಗಿದಾಗ (ರೈಟ್ ಟರ್ನ್), ಹಿಂಬದಿಯಿಂದ ಬರುತ್ತಿದ್ದ ವಿಜಯ್ ದೇವರಕೊಂಡ ಅವರ ಕಾರು ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಈ ಘಟನೆಯಲ್ಲಿ ಕಾರಿಗೆ ಮಾತ್ರ ಸ್ವಲ್ಪ ಹಾನಿಯಾಗಿದೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ವಿಜಯ್ ದೇವರಕೊಂಡ ಅವರು ಕಾರನ್ನು ಸ್ಥಳದಲ್ಲಿಯೇ ಬಿಟ್ಟು, ತಮ್ಮ ಸ್ನೇಹಿತರ ಮತ್ತೊಂದು ಕಾರಿನಲ್ಲಿ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದರು. ಅವರೊಂದಿಗೆ ಮ್ಯಾನೇಜರ್ ರವಿಕಾಂತ್ ಯಾದವ್ ಮತ್ತು ಡ್ರೈವರ್ ಅಂದೇ ಶ್ರೀಕಾಂತ್ ಪುಟ್ಟಪರ್ತಿಗೆ ತೆರಳಿದ್ದರು. ಅಪಘಾತದಲ್ಲಿ ಯಾರೊಬ್ಬರಿಗೂ ಗಾಯಗಳಾಗದಿರುವುದು ಸಮಾಧಾನಕರ ಸಂಗತಿಯಾಗಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ವಿಜಯ್ ಅವರ ಕಾರು ಚಾಲಕ ಅಂದೇ ಶ್ರೀಕಾಂತ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ನಿಶ್ಚಿತಾರ್ಥವಾದ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ವಿಜಯ್ ಮತ್ತು ರಶ್ಮಿಕಾ ಕುಟುಂಬಗಳಲ್ಲಿ ಆತಂಕ ಮೂಡಿಸಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿರುವ ಈ ಜೋಡಿಗೆ ಯಾವುದಾದರೂ ಗಂಡಾಂತರ* ಕಾದಿದೆಯೇ ಎಂಬ ಚರ್ಚೆಗಳು ಅಭಿಮಾನಿಗಳಲ್ಲಿ ಶುರುವಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.