ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ ಹಾಕಿ ಮದುವೆ ವೇದಿಕೆಯಲ್ಲಿ ವಿಜಯ್-ತ್ರಿಶಾ, ವಿಡಿಯೋ

Published : Mar 05, 2026, 09:20 PM ISTUpdated : Mar 05, 2026, 09:24 PM IST
Vijay and Trisha

ಸಾರಾಂಶ

ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ ಹಾಕಿ ಮದುವೆ ವೇದಿಕೆಯಲ್ಲಿ ವಿಜಯ್-ತ್ರಿಶಾ,ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಒಂದೇ ಕಾರಿನಲ್ಲಿ ಜೊತೆಯಾಗಿ ಬಂದ ಈ ಜೋಡಿ ವಿರುದ್ದ ಫ್ಯಾನ್ಸ್ ಗರಂ ಆಗಿದ್ದಾರೆ. 

ಚೆನ್ನೈ (ಮಾ.05) ನಟ, ಟಿವಿಕೆ ಪಕ್ಷದ ಅಧ್ಯಶ್ರ ವಿಜಯ್ ಜೋಸೆಫ್ ಹಾಗೂ ಪತ್ನಿ ಸಂಗೀತಾ ನಡುವಿನ ಡಿವೋರ್ಸ್ ಭಾರಿ ಕೋಲಾಹಲ ಸೃಷ್ಟಿಸಿದೆ. ವಿಜಯ್ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಪತ್ನಿ ಸಂಗೀತಾ ಆರೋಪಿಸಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೂ ಮೊದಲೇ ನಟ ವಿಜಯ್ ಜೊಸೆಫ್ ಹಾಗೂ ನಟಿ ತ್ರಿಶಾ ರಿಲೇಶನ್‌ಶಿಪ್ ಕುರಿತು ಭಾರಿ ಊಹಾಪೋಹಳು ಹರಿದಾಡಿದೆ. ಇದೀಗ ಇವೆಲ್ಲಾ ಬೆಳವಣಿಗೆಗೆ ಪುಷ್ಠಿ ನೀಡುವಂತೆ ನಟ ವಿಜಯ್ ಜೊಸೆಫ್ ಹಾಗೂ ನಟಿ ತ್ರಿಶಾ ಒಂದೇ ಕಾರಿನಲ್ಲಿ ಮ್ಯಾಚಿಂಗ್ ಡ್ರೆಸ್ ಹಾಕಿ ಬಂದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟನೆ ನಡೆದಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಗರಂ ಆಗಿದ್ದಾರೆ.

ಮದುವೆಗೆ ಆಗಮಿಸಿದ ವಿಜಯ್ ಜೊಸೆಫ್ ತ್ರಿಶಾ ಜೋಡಿ

ನಿರ್ಮಾಪಕ ಕಲ್ಪಾತ್ತಿ ಎಸ್. ಸುರೇಶ್ ಅವರ ಪುತ್ರನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಜೊಸೆಫ್ ಹಾಗೂ ತ್ರಿಶಾ ಜೊತೆಯಾಗಿ ಆಗಮಿಸಿದ್ದಾರೆ. ಇಬ್ಬರೂ ಒಂದೇ ಕಾರಿನಲ್ಲಿ, ಮ್ಯಾಚಿಂಗ್ ಬಣ್ಣದ ಬಟ್ಟೆ ಧರಿಸಿ ಬಂದಿದ್ದರು. ವೇದಿಕೆ ಮೇಲೆ ಹೋಗಿ ವಧು-ವರರಿಗೆ ಶುಭ ಹಾರೈಸಿ, ಸ್ವಲ್ಪ ಹೊತ್ತು ಮಾತಾಡಿ ಇಬ್ಬರೂ ಅಲ್ಲಿಂದ ಹೊರಟಿದ್ದಾರೆ.. ಈ ಜೋಡಿಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಗಾಸಿಪ್ ನಿಜ ಎಂದ ನೆಟ್ಟಿಗರು

ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ವಿಜಯ್-ತ್ರಿಶಾ ಸಂಬಂಧದ ಬಗ್ಗೆ ಹಬ್ಬಿರುವ ಗಾಸಿಪ್ ನಿಜ ಅನ್ನೋ ಥರದ ಕಾಮೆಂಟ್‌ಗಳು ಬರುತ್ತಿವೆ. ಜೊತೆಗೆ, ಇಬ್ಬರ ವಿರುದ್ಧ ಟೀಕೆಗಳೂ ವ್ಯಕ್ತವಾಗುತ್ತಿವೆ. ಆದರೆ, ಇವರಿಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ನಿರ್ಮಾಪಕರ ಮಗನ ಮದುವೆಗೆ ಹೋಗಿದ್ದರಲ್ಲಿ ತಪ್ಪೇನಿದೆ ಅಂತಾ ಕೆಲವರು ಪ್ರಶ್ನಿಸಿ, ಇಬ್ಬರನ್ನೂ ಸಪೋರ್ಟ್ ಮಾಡುತ್ತಿದ್ದಾರೆ.

ಫೆಬ್ರವರಿ 27 ರಂದು ಸಂಗೀತಾ ಸ್ವರ್ಣಲಿಂಗಂ ಅವರು ವಿಜಯ್‌ಗೆ ಕಳುಹಿಸಿದ್ದ ವಿಚ್ಛೇದನ ನೋಟಿಸ್ ಬಹಿರಂಗವಾಗಿತ್ತು. ಅವರು ಚೆಂಗಲ್‌ಪೇಟೆ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ನೋಟಿಸ್ ಪ್ರಕಾರ, ವಿಜಯ್ ಏಪ್ರಿಲ್ 20 ರಂದು ಕೋರ್ಟ್‌ಗೆ ಹಾಜರಾಗಬೇಕು. ಈ ನೋಟಿಸ್‌ನಲ್ಲಿ ಸಂಗೀತಾ ಹಲವು ವಿಚಾರಗಳನ್ನು ಹೇಳಿದ್ದಾರೆ. ನಟಿಯೊಂದಿಗಿನ ಅಕ್ರಮ ಸಂಬಂಧ'ದ ಆರೋಪ ದೊಡ್ಡ ಚರ್ಚೆಗೆ ಕಾರಣವಾಯಿತು. ಈ ಸಂಬಂಧ ಮುಂದುವರಿಸದಂತೆ ತಾನು ಹಲವು ಬಾರಿ ಎಚ್ಚರಿಕೆ ನೀಡಿದ್ದೆ, ಆದರೂ ಇಬ್ಬರೂ ವಿದೇಶಕ್ಕೆ ಹೋಗಿ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ನೋಟಿಸ್ ಹೊರಬಂದ ನಂತರ, ಆ ನಟಿ ತ್ರಿಶಾ ಅವರೇ ಎಂಬ ವದಂತಿಗಳು ಹಬ್ಬಿದವು. ಇಬ್ಬರೂ ಒಟ್ಟಿಗೆ ಇರುವ ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತೆ ವೈರಲ್ ಆದವು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ
Shakeela: ಆ ನಟನ ರೂಮ್‌ನಲ್ಲಿ ಶಕೀಲಾ.. ರಾತ್ರಿ ನಡೆದ ಆ ಘಟನೆ ನೆನೆದು ನಕ್ಕಿದ್ಯಾಕೆ ನಟಿ!