ತಂದೆ-ತಾಯಿ ವಿಚ್ಛೇದನಕ್ಕೆ ಕಾರಣ ಈಗಲೂ ಸೀಕ್ರೆಟ್; ಕಹಿ ಘಟನೆ ಹಂಚಿಕೊಂಡ ಕತ್ರಿನಾ ಕೈಫ್‌

By Vaishnavi ChandrashekarFirst Published Jan 22, 2023, 10:26 AM IST
Highlights

 ಕತ್ರಿನಾ ಕೈಫ್‌ಗೆ 6 ಸಹೋದರಿಯರು, 1 ಸಹೋದರ. 8 ಮಕ್ಕಳನ್ನು ಸುಝೇನ್ ಟರ್ಕೋಟ್ ಹೇಗೆ ಬೆಳೆಸಿದ್ದರು? ಜೀವನ ಹೇಗೆಲ್ಲಾ ಇತ್ತು ಎಂದು ಕತ್ರಿನಾ ಹೇಳಿದ್ದಾರೆ....

ಬಾಲಿವುಡ್ ಸಿಂಪಲ್ ಗರ್ಲ್‌ ಕತ್ರಿನಾ ಕೈಫ್‌ ಮತ್ತು ನಟ ವಿಕ್ಕಿ ಕೌಶಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಲೈಫ್‌ ಬ್ಯೂಟಿಫುಲ್ ಆಗಿದೆ ಎಂದು ಅವರಿಬ್ಬರ ಇನ್‌ಸ್ಟಾಗ್ರಾಂ ನೋಡಿದರೆ ತಿಳಿಯುತ್ತದೆ. ಕತ್ರಿನಾ ಜೊತೆ ಹುಟ್ಟಿರುವ 5 ಸಹೋದರಿಯರು ಮತ್ತು ಒಬ್ಬ ಸಹೋದರನ ಬಾಲ್ಯ ಬದುಕು ಹೇಗಿತ್ತು? ತಾಯಿ ಸುಝೇನ್ ಟರ್ಕೋಟ್ ಎಷ್ಟು ಕಷ್ಟ ಪಟ್ಟಿದ್ದಾರೆ. ತಂದೆ ಸ್ಥಾನದಲ್ಲಿ ಯಾರೂ ಇಲ್ಲದಾಗ ಸಮಾಜ ಹೇಗೆ ನೋಡುತ್ತದೆ ಎಂದು 2019ರಲ್ಲಿ ನಡೆದ ಸಂದರ್ಶನದಲ್ಲಿ ಕತ್ರಿನಾ ಕೈಫ್‌ ಹಂಚಿಕೊಂಡಿದ್ದರು. 

8 ಮಕ್ಕಳಿಗೆ ಜನ್ಮ ನೀಡಿದ ಮೇಲೆ ತಾಯಿ ಸುಝೇನ್ ಟರ್ಕೋಟ್ ಜೀವನ ಹೇಗಿತ್ತು, ಏನೆಲ್ಲಾ ಆಯ್ತು ಎಂದು ಒಮ್ಮೆ ಪ್ರಶ್ನೆ ಮಾಡಿದ್ದೀರಾ ಎಂದು ಫಿಲ್ಮ್‌ಫೇರ್‌ನಲ್ಲಿ ಕತ್ರಿನಾ ಕೈಫ್‌ನ ಪ್ರಶ್ನೆ ಮಾಡಲಾಗಿತ್ತು.  'ಹೌದು. ಈ ವಿಚಾರದ ಬಗ್ಗೆ ನನ್ನ  ತಾಯಿ ಜೊತೆ ತುಂಬಾ ಚರ್ಚೆ ಮಾಡಿರುವೆ. 7 ಜನ ಮಕ್ಕಳು ಎಂದ ತಕ್ಷಣ ಎಲ್ಲರೂ ಕಷ್ಟ ಎನ್ನುತ್ತಾರೆ ನೀವು ಹೇಗೆ ಇದನ್ನು ಮ್ಯಾನೇಜ್ ಮಾಡಲು ಸಾಧ್ಯವಾಗಿತ್ತು ಎಂದು ಆಗಾಗ ಪ್ರಶ್ನೆ ಮಾಡುವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜೀವನದ ಬಗ್ಗೆ ನನ್ನ ತಾಯಿ ಏನು ಹೇಳಿದ್ದಾರೆ ಅದು ನನ್ನ ಉಪಯೋಗಕ್ಕೆ ಬಂದಿದೆ. ತೂಕ ಇರುವ ಮಾತುಗಳನ್ನು ಹೇಳಿದ್ದಾರೆ. ದೂರದಲ್ಲಿ ನಿಂತುಕೊಂಡು ನೋಡಿದಾಗ ಎಷ್ಟು ಕಷ್ಟ ಇತ್ತು ಎಂದು ಅರ್ಥವಾಗುತ್ತದೆ, ಆ ಸ್ಥಾನದಲ್ಲಿ ಅವರಿದ್ದರು ಅವರಿಗೆ ಎಷ್ಟು ಕಷ್ಟ ಆಗಿರುವುದಿಲ್ಲ ಹೇಳಿ?' ಎಂದು ಕತ್ರಿನಾ ವೇದಿಕೆ ಮೇಲೆ ಮಾತನಾಡಿದ್ದರು.

ಕತ್ರಿನಾ - ವಿಕ್ಕಿ ಮದುವೆಯಾಗಿ 1 ವರ್ಷ; ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರಗಳಿದು!

ತಂದೆ ತಾಯಿ ವಿಚ್ಛೇದನದಿಂದ ಹೆಚ್ಚಿಗೆ ಮನನೊಂದಿದ್ದು ಕತ್ರಿನಾ ಕೈಫ್‌ ಅಂತೆ. ಮೊದಲ ಮಗಳಾಗಿದ್ದ  ಕಾರಣ ಕತ್ರಿನಾ ಏನೇ ಮಾಡಿದ್ದರೂ ಸಹೋದರಿ-ಸಹೋದರರು ಅದನ್ನು ಪಾಲಿಸುತ್ತಿದ್ದರಂತೆ. ಜೀವನದಲ್ಲಿ ಎಂದಾದರು ಒಬ್ಬ ಸ್ಟ್ರಾಂಗ್ ಗಂಡಸು ಇರಬೇಕಿತ್ತು ಅನಿಸಿದ್ಯಾ ಎಂದು ಪ್ರಶ್ನೆ ಮಾಡಿದಾಗ 'ಸ್ಟ್ರಾಂಗ್ ಮೇಲ್ ಫಿಗರ್‌ ರೀತಿ ನಾನು ಯಾರನ್ನು ನೋಡಿಲ್ಲ ಆದರೆ ನನ್ನ ಜೊತೆಗಿರುವ ಸ್ನೇಹಿತರೇ ನನ್ನ ಶಕ್ತಿ. ನಂಬಿಕೆ ಇಟ್ಟಿರುವ ಸ್ನೇಹಿತರು ಮಾತ್ರ ಹತ್ತಿರ ಇರುವುದು, ಅವರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರಿಗೆ ನಾವು ನಡೆದು ಬಂದ ಹಾದಿ, ನಮ್ಮ ನೋವು ಹಾಗೂ ಇಷ್ಟ-ಕಷ್ಟಗಳು ಚೆನ್ನಾಗಿ ಗೊತ್ತಿರುತ್ತದೆ. ನನ್ನ ತಂದೆ ತಾಯಿ ದೂರುವಾಗಿದ್ದು ದೊಡ್ಡ ಪರಿಣಾಮ ಬೀರಿತ್ತು ಏಕೆಂದರೆ ಒಂಟಿ ಮಹಿಳೆ 7 ಹೆಣ್ಣು ಮಕ್ಕಳು ಒಬ್ಬ ಹುಡುಗನನ್ನು ಸಾಕುವುದು ಸುಲಭವಲ್ಲ' ಎಂದು ಕೈಫ್ ಹೇಳಿದ್ದಾರೆ. 

'ನನ್ನ ತಂದೆ ಹುಟ್ಟೂರು ಯಾವುದು ಎಂದು ನನಗೆ ಗೊತ್ತಿಲ್ಲ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ. ತಂದೆ ತಾಯಿ ದೂರವಾದಾಗ ನಾವು ಪುಟ್ಟ ಮಕ್ಕಳು. ಕೆಲವೊಂದು ಕಾರಣಗಳಿಂದ ಈ ವಿಚಾರವನ್ನು ತಾಯಿ ರಹಸ್ಯವಾಗಿಟ್ಟರು. ಧರ್ಮ ಮತ್ತು ಸಮಾಜದಲ್ಲಿ ನಮ್ಮ ಬೆಳವಣಿಗೆ ಮೇಲೆ ತಂದೆ ನಡಿಗೆ ಪರಿಣಾಮ ಬೀರಿಲ್ಲ. ಕಳೆದುಕೊಂಡಿರುವ ನೋವಿದೆ ಏಕೆಂದರೆ ನನ್ನ ಸ್ನೇಹಿತರು ಕುಟುಂಬ ಸಂತೋಷವಾಗಿರುವುದನ್ನು ನೋಡಿದ್ದೀನಿ. ಬೇಸರ ಮಾಡಿಕೊಳ್ಳುವ ಬದಲು ನನ್ನ ತಾಯಿ ಸ್ಟ್ರಾಂಗ್ ಎಂದು ಮನಸ್ಸು ಗಟ್ಟಿ ಮಾಡಿಕೊಳ್ಳುವೆ' ಎಂದಿದ್ದಾರೆ ಕತ್ರಿನಾ. 

click me!