ಉಡುಗೊರೆ ಬೇಕೆಂದು ಹಠ ಮಾಡಿದಕ್ಕೆ ಅಪ್ಪ ರಕ್ತ ಮಾರಿದರು: ನಟಿ ಅನಸೂಯ ಭಾರದ್ವಾಜ್ ಭಾವುಕ

Published : Jun 09, 2023, 10:54 AM IST
ಉಡುಗೊರೆ ಬೇಕೆಂದು ಹಠ ಮಾಡಿದಕ್ಕೆ ಅಪ್ಪ ರಕ್ತ ಮಾರಿದರು: ನಟಿ ಅನಸೂಯ ಭಾರದ್ವಾಜ್ ಭಾವುಕ

ಸಾರಾಂಶ

ತಂದೆ ನೆನೆದು ಭಾವುಕರಾದ ನಟಿ ಅನಸೂಯ ಭಾರದ್ವಾಜ್. ರಕ್ತ ಮಾರಿದ ಕಾರಣ ತಿಳಿಸಿದ ನಟಿ..... 

ನಾನಾ ಕಾರಣಗಳಿಗೆ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ತೆಲುಗು ಖ್ಯಾತ ನಟಿ ಹಾಗೂ ಕಿರುತೆರೆ ನಿರೂಪಕಿ ಅನಸೂಯ ಭಾರದ್ವಾಜ್ ತಂದೆ ನೆನೆದು ಭಾವುಕರಾಗಿದ್ದಾರೆ. ಅನಸೂಯ ನಟನೆಯ ವಿಮಾನಂ ಬಿಡುಗಡೆಗೆ ಸಜ್ಜಾಗಿದ್ದು ಪ್ರಚಾರಕ್ಕೆಂದು ಅನಸೂಯ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಟ್ರೋಲ್, ಸ್ಟಾರ್ ನಟರ ಕಿರಿಕಿರಿ, ತಂದೆ..ಹೀಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. 

ವಿಮಾನಂ ಸಿನಿಮಾದಲ್ಲಿ ತಂದೆ ಹಾಗೂ ಮಗನ ಭಾವನಾತ್ಕಕ ಕಥೆಯನ್ನು ಹೇಳಲಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು ಎಮೋಷನಲ್ ಎಲಿಮೆಂಟ್‌ಗಳಿದೆ ಎಂದು ಪ್ರಚಾರದಲ್ಲಿ ಇಡೀ ತಂಡ ಹೇಳಿಕೊಂಡು ಬರುತ್ತಿದೆ. ಹೀಗಾಗಿ ಅನಸೂಯ ಕೂಡ ತಂದೆ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ರಕ್ತ ಮಾರಿ ಉಡುಗೊರೆ ತಂದುಕೊಟ್ಟ ಘಟನೆ ವಿವರಿಸಿದ್ದಾರೆ. 

ದುಡ್ಡು ಕೊಟ್ಟು ನಟಿ ಅನಸೂಯ ಭಾರದ್ವಾಜ್ ಮಾನ ಕಳೆದ ಸ್ಟಾರ್ ನಟ; ವಿಜಯ್ ದೇವರಕೊಂಡ ವಿರುದ್ಧ ಗರಂ!

'ಅಂದು ನನ್ನ ಹುಟ್ಟುಹಬ್ಬವಿತ್ತು ಆ ದಿನ ತನ್ನ ತಂದೆಗೆ ಉಡುಗೊರೆಯನ್ನು ಕೊಡಲು ಕೇಳಿದೆ. ಅಂದು ಅವರು ನನಗೆ ಗೊತ್ತಿಲ್ಲದ ಹಾಗೆ ತಮ್ಮ ರಕ್ತ ಮಾರಿ ಉಡುಗೊರೆಯನ್ನು ತಂದು ಕೊಟ್ಟರು. ಹಲವು ದಿನಗಳ ನಂತರ ಈ ವಿಚಾರ ನನ್ನ ಕಿವಿಗೆ ಬಿತ್ತು ಕೇಳಿ ಬೆಚ್ಚಿಬಿದ್ದಿದೆ' ಎಮದು ಅನಸೂಯ ಹೇಳಿದ್ದಾರೆ. 'ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗಾಗಿ ಏನನ್ನಾದರೂ ತ್ಯಾಗ ಮಾಡುತ್ತಲೇ ಇರುತ್ತಾನೆ. ತಂದೆಯ ಪ್ರೀತಿಮ ತ್ಯಾಗದಿಂದ ಬರುತ್ತದೆ. ನನ್ನ ತಂದೆ ಜೀವನದಲ್ಲಿ ಹೀರೋ' ಎಂದು ನಿರ್ದೇಶಕ ಶಿವಪ್ರಸಾದ್ ಹೇಳಿದ್ದಾರೆ. 

ಅನುಸೂಯಾ ಎಂಬಿಎ ಪದವಿಧರೆ.2003ರಲ್ಲಿ 'ನಾಗ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. 2013ರಲ್ಲಿ  'ಜಬರ್ದಸ್ತ್' ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದರು. 2018ರಲ್ಲಿ 'ರಂಗಸ್ಥಲಂ' ಚಿತ್ರಕ್ಕೆ ಫಿಲ್ಮ್‌ ಫೇರ್ ಬೆಸ್ಟ್‌ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟು 24 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆ ಮೇಲೆ ಮಿಂಚುವ ಮುನ್ನ ಅನಸೂಯಾ ಕೆಲ ವರ್ಷಗಳ ಕಾಲ ಎಚ್‌ಆರ್‌ ಆಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಮ್‌ ಚರಣ್‌ ಜೊತೆ ರಂಗಸ್ಥಲಂನಲ್ಲಿ ಮಿಂಚಿದ್ದಾರೆ. ಸೈಮಾ ಬೆಸ್ಟ್ ಸಪೋರ್ಟಿಂಗ್ ನಟಿ ಅವಾರ್ಡ್‌ ಪಡೆದುಕೊಂಡಿದ್ದಾರೆ. ಸುಶಾಂಕ್ ಭಾರದ್ವಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಅನಸೂಯಾಗೆ ಇಬ್ಬರು ಮಕ್ಕಳಿದ್ದಾರೆ.

ಅನಸೂಯಾ ಭಾರದ್ವಾಜ್ ಸಲಿಂಗಕಾಮಿ?

ತುಂಬಾ ದಿನಗಳಾಯ್ತು ನಾವು ಮಾತನಾಡಿ ಚರ್ಚೆ ಮಾಡೋಣಾ? ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಫ್ಯಾಮಿಲಿ ಸಿನಿಮಾಗಳ ಬಗ್ಗೆ ಉತ್ತರಿಸಿದ ನಟಿ ಸಲಿಂಗಕಾಮಿ ಎಂದು ಟಾರ್ಗೆಟ್‌ ಮಾಡಿದವನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಆಂಟಿ ಆಂಟಿ ಅನ್ನೋಕೆ ನಾಚಿಕೆ ಆಗಲ್ವಾ?; ಹುಡುಗರ ಡಬಲ್ ಮೀನಿಂಗ್‌ ಕಾಮೆಂಟ್‌ಗೆ ನಟಿ ಕಸ್ತೂರಿ ಕ್ಲಾಸ್

ಹೌದು! ನೆಟ್ಟಿಗನೊಬ್ಬ 'ನೀನು ಲಿಬರಲ್ ಮತ್ತು ಮೆಚ್ಯೂರ್‌ ಮಹಿಳೆ ಆಗಿದ್ದರೆ ಇದಕ್ಕೆ ಉತ್ತರ ಕೊಡಬೇಕು. ನೀನು ಲೆಸ್ಬಿಯನ್ ಎನ್ಕೌಂಟರ್ ಮಾಡಿರುವೆ' ಎಂದು ಪ್ರಶ್ನೆ ಮಾಡುತ್ತಾರೆ. ಒಮ್ಮೆ ಇದನ್ನು ಓದಿದ್ದರೆ ಪ್ರಶ್ನೆ ರೀತಿ ಇರಲಿಲ್ಲ ಸ್ಟೇಟ್ಮೆಂಟ್‌ ರೀತಿ ಇದೆ ಎನ್ನಬಹುದು. ಅಲ್ಲಿಗೆ ಸುಮ್ಮನಾಗದ ಅನಸೂಯ 'ನನಗೆ ಸಲಿಂಗಕಾಮಿ ಸ್ನೇಹಿತರು ಮತ್ತು ಕುಟುಂಬಸ್ಥರು ಇದ್ದಾರೆ ಆದರೆ ಜೀವನದಲ್ಲಿ ನಾನು ಎಂದೂ ಈ ರೀತಿ ಪರ್ಸನಲ್‌ ಎನ್ಕೌಂಟರ್‌ಗೆ ಗುರಿಯಾಗಿರಲಿಲ್ಲ ಆದರೆ ಆಲ್‌ಲೈನ್‌ನಲ್ಲಿ ಬೇಕೆಂದು ಪ್ರಶ್ನೆ ಮಾಡುವ ಜನರಿಗೆ ನಾನು ಯಸ್ ಎಂದು ಉತ್ತರ ಕೊಡುವೆ' ಎಂದು ಅನಸೂಯ ಬರೆದುಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?