
ಬಾಲಿವುಡ್ ಹಿರಿಯ ಖ್ಯಾತ ನಿರ್ದೇಶಕ ಮಹೇಶ್ ಭಟ್ ನಟಿ ರಿಯಾ ಚಕ್ರವರ್ತಿ ಭುಜದ ಮೇಲೆ ತಲೆ ಇಟ್ಟು ಆಕೆಯನ್ನು ತಬ್ಬಿಕೊಂಡ ಫೋಟೋ ವೈರಲ್ ಆಗುತ್ತಿದೆ. ಇದೀಗ ಹಿರಿಯ ನಟ ಇವರಿಬ್ಬರ ಸಂಬಂಧವನ್ನು ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಯಾ ಚಕ್ರವರ್ತಿ ಹಾಗೂ ಮಹೇಶ್ ಭಟ್ ಸಂಬಂಧದ ಬಗ್ಗೆಯೂ ತೀವ್ರ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗಷ್ಟೇ ಇಬ್ಬರ ನಡುವಿನ ವಾಟ್ಸಾಪ್ ಚಾಟ್ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮಹೇಶ್ ಭಟ್- ನಟಿ ರಿಯಾ ಫೋಟೋಸ್ ವೈರಲ್
ನಟಿ ರಿಯಾ ಜೊತೆ ಅತ್ಯಂತ ಕ್ಲೋಸ್ ಆಗಿರುವಂತೆ ಮಹೇಶ್ ಭಟ್ ಪೋಟೋಸ್ ಟ್ರೋಲ್ ವೈರಲ್ ಆಗುವುದರ ಜೊತೆ ಇದೀಗ ಹಿರಿಯ ನಟ ಶತ್ರುಘ್ನ ಸಿನ್ಹಾ ಇವರಿಬ್ಬರ ಸಂಬಂಧವನ್ನು ಪ್ರಶ್ನಿಸಿದ್ದಾರೆ.
ರಿಯಾ ಚಕ್ರವರ್ತಿಗೆ ಮಹೇಶ್ ಭಟ್ ತಂದೆಯಂತೆಯಾ..? ಗಾಡ್ ಫಾದರಾ..? ಅಥವಾ ಬೇರೇನಾದರೂ ಇದೆಯಾ ಎಂಬುದನ್ನು ಎಲ್ಲರಿಗೆ ತಿಳಿಯಬೇಕಿದೆ ಎಂದು ಹಿರಿಯ ನಟ ಪ್ರತಿಕ್ರಿಯಿಸಿದ್ದಾರೆ.
ಸುಶಾಂತ್ ಮನೆಯಿಂದ ಬಂದು ಈಗ ರಿಲೀಫ್ ಎಂದ ರಿಯಾ: ಮಹೇಶ್ ಭಟ್ ಜೊತೆಗಿನ ವಾಟ್ಸಾಪ್ ಚಾಟ್ ವೈರಲ್
ರಿಯಾ ಚಕ್ರವರ್ತಿಯನ್ನು ನಾನೊಮ್ಮೆಯೂ ಭೇಟಿಯಾಗಿಲ್ಲ. ಮಹೇಶ್ ಭಟ್‌ನ್ನೂ ಕಳೆದ 5 ವರ್ಷದಿಂದ ಭೇಟಿಯಾಗಿಲ್ಲ. ವಯಸ್ಸನಲ್ಲಿ ನೊಡಿದರೆ ಸುಶಾಂತ್ ನನ್ನ ಮಗನಂತೆ. ಎಲ್ಲವನ್ನೂ ಸಿಬಿಐಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ಮುಂಬೈ ಪೊಲೀಸ್ ಹಾಗೂ ಬಿಹಾರ ಪೊಲೀಸ್ ನಡುವಿನ ಕೋಲ್ಡ್ ವಾರ್ ನಂತರ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸುಪ್ರಿಂ ಕೋರ್ಟ್ ಸಿಬಿಐಗೆ ವಹಿಸಿತ್ತು. ಸಿಬಿಐ ಮುಂಬೈನಿಂದ ಪ್ರಕರಣದ ತನಿಖೆ ಆರಂಭಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.