ನಟಿ ಲಾವಣ್ಯ ತ್ರಿಪಾಠಿಗೆ ವಿಚಿತ್ರ ಕಾಯಿಲೆ; ಮದುವೆ ಮುರಿಯುತ್ತಾ? ಗಾಬರಿ ಆದ ನೆಟ್ಟಿಗರು

Published : Jun 29, 2023, 01:24 PM IST
ನಟಿ ಲಾವಣ್ಯ ತ್ರಿಪಾಠಿಗೆ ವಿಚಿತ್ರ ಕಾಯಿಲೆ; ಮದುವೆ ಮುರಿಯುತ್ತಾ? ಗಾಬರಿ ಆದ ನೆಟ್ಟಿಗರು

ಸಾರಾಂಶ

ಮೆಗಾ ಸ್ಟಾರ್ ಸೊಸೆಗೆ ವಿಚಿತ್ರ ಕಾಯಿಲೆ. ಶಾಕಿಂಗ್ ನ್ಯೂಸ್ ಕೇಳಿ ಮದುವೆ ಮುರಿಯಲಿದೆ ಎಂದ ನೆಟ್ಟಿಗರು. ಅಷ್ಟಕ್ಕೂ ಆಗಿರುವುದೇನು?

ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಮತ್ತು ಪದ್ಮಜಾ ಕೊನಿಡೆಲಾ ಪುತ್ರ ನಟ ವರುಣ್ ತೇಜ್ ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ಪ್ರೀತಿಸಿದ ಹುಡುಗಿ ಲಾವಣ್ಯಾ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. 6 ವರ್ಷಗಳ ಹಿಂದೆ ಮಿಸ್ಟರ್ ಅನ್ನೋ ಚಿತ್ರದಲ್ಲಿ ವರುಣ್ ಮತ್ತು ಲಾವಣ್ಯ ನಟಿಸಿದ್ದರು, ಅಲ್ಲಿಂದ ರೀಲ್‌ಗಿಂತ ರಿಯಲ್ ಲೈಫ್‌ನಲ್ಲಿ ಅವರಿಬ್ಬರ ಲವ್ ಸ್ಟೋರಿ ಶುರುವಾಯ್ತು. ಸೈಲೆಂಟ್ ಅಗಿ ನಡೆಸುತ್ತಿದ್ದ ಲವ್‌ ಬಗ್ಗೆ ಪೋಷಕರಿಗೆ ಒಪ್ಪಿಸಿ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. 

ಮೆಗಾ ಸ್ಟಾರ್ ಫ್ಯಾಮಿಲಿಗೆ ಲಾವಣ್ಯ ತ್ರಿಪಾಠಿ ಎಂಟ್ರಿ ಕೊಡುತ್ತಿರುವ ವಿಚಾರ ಕಿವಿಗೆ ಬೇಳುತ್ತಿದ್ದಂತೆ ನಟಿ ಹಿಂದೆ ಮುಂದೆ ಫುಲ್ ಬ್ಯಾಗ್ರೌಂಡ್‌ನ ನೆಟ್ಟಿಗರು ಸರ್ಚ್‌ ಮಾಡಿದ್ದಾರೆ. ಆಸ್ತಿ ಮೌಲ್ಯ ಆರೋಗ್ಯ ಪ್ರತಿಯೊಂದನ್ನು ಸರ್ಚ್ ಮಾಡುವಾಗ ಲಾವಣ್ಯ ಈ ಹಿಂದೆ ಹೇಳಿಕೊಂಡಿದ್ದ ವಿಚಿತ್ರವಾದ ಕಾಯಿಲೆ ಬಗ್ಗೆ ರಿವೀಲ್ ಆಗಿದೆ.

ವರುಣ್ ತೇಜ್-ಲಾವಣ್ಯಾ ತ್ರಿಪಾಠಿ ನಿಶ್ಚಿತಾರ್ಥ: ಈ ವಿಷಯ ಗೊತ್ತಾದ ತಕ್ಷಣ ನೆಟ್ಟಿಗರು ಹುಡುಕಿದ್ದು ಏನ್‌ ಗೊತ್ತಾ?

ಹೌದು! ಹಲವು ವರ್ಷಗಳ ಹಿಂದೆ ಲಾವಣ್ಯ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವಾಗ ವಿಚಿತ್ರ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕಾಯಿಲೆ ಹೆಸರು ಟ್ರಪೋಫೋಬಿಯಾ ಎನ್ನುತ್ತಾರೆ. ಇದು ಚರ್ಮದ ರಂಧ್ರಗಳು, ಜೇನು ಗೂಡು, ಕಮಲದ ಕಣ್ಣುಗಳು ರಂಧ್ರಗಳು ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುಗಳನ್ನು ನೋಡಿದರೆ ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತಾರಂತೆ. ಸಾಕಷ್ಟು ಸಲ ಇದರಿಂದ ಹೊರ ಬರುವ ಪ್ರಯತ್ನ ಮಾಡಿದ್ದಾರೆ ಆದರೆ ಆಗಲಿಲ್ಲವಂತೆ. 

ಈ ವಿಚಿತ್ರ ಕಾಯಿಲೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದ್ದಂತೆ ಲಾವಣ್ಯ ಸ್ಪಷ್ಟನೆ ಕೊಟ್ಟಿದ್ದಾರೆ. 'ನನಗೆ ಕಾಯಿಲೆ ಇದ್ಯಾ? ನನ್ನ ಬಗ್ಗೆ ನನಗೆ ಗೊತ್ತಿರುವ ಪ್ರಕಾರ ನಾನು ತುಂಬಾ ಆರೋಗ್ಯವಾಗಿರುವೆ. ಸುಳ್ಳು ಸುದ್ದಿ ಮಾಡಬೇಡಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಉತ್ತರ ಪ್ರದೇಶ ಮೂಲದ ನಟಿ ಲಾವಣ್ಯಾ ಜಾತಿ ಬಗ್ಗೆ ಮಾತನಾಡಿದ್ದರು. ತನಗೆ ಜಾತಿ ಮುಖ್ಯವಲ್ಲ ಎಂದು ಹೇಳಿದ್ದರು. 'ಒಬ್ಬ ವ್ಯಕ್ತಿ ತನ್ನ ಕಾರ್ಯಗಳಿಂದ ಶ್ರೇಷ್ಠನಾಗುತ್ತಾನೆ ಅವರ ಜಾತಿಯಿಂದ ಅಲ್ಲ ಎಂದು ನಾನು ನಂಬಿದ್ದೇನೆ' ಎಂದು ಹೇಳಿದ್ದರು. ಈ ನಡುವೆ ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ ಎಂಗೇಜ್ಮೆಂಟ್ ರಿಂಗ್ ಸದ್ದು ಮಾಡುತ್ತಿದ್ದಾರೆ. ಇವರ ನಿಶ್ಚಿತಾರ್ಥದ ಉಂಗುರದ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ವಿಶೇಷವಾಗಿ ಡಿಸೈನ್ ಮಾಡಿಸಿದ ರಿಂಗ್ ಅದಾಗಿತ್ತು. ಅಂದಹಾಗೆ ಒಂದು ಉಂಗುರದ ಬೆಲೆ ಬರೋಬ್ಬರಿ 25 ಲಕ್ಷ ರೂಪಾಯಿ ಎನ್ನಲಾಗಿದೆ. 

ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಕೊನೆಯದಾಗಿ ಹ್ಯಾಪಿ ಬರ್ತಡೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!