urfi Javed; ಬೋಲ್ಡ್ ಬಟ್ಟೆ ತಂದ ಸಂಕಷ್ಟ; ಪೊಲೀಸ್ ವಿಚಾರಣೆಗೆ ಹಾಜರಾದ ನಟಿ

By Shruthi KrishnaFirst Published Jan 15, 2023, 2:39 PM IST
Highlights

BJP ಸದಸ್ಯೆ ಚಿತ್ರಾ ವಾಘ್ 'ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸುತ್ತಿದ್ದಾರೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಅವರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

BJP ಸದಸ್ಯೆ ಚಿತ್ರಾ ವಾಘ್ 'ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸುತ್ತಿದ್ದಾರೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಅವರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್​ ಆಯುಕ್ತರ ಆದೇಶದ ಮೇರೆಗೆ ಮುಂಬೈನ ಅಂಬೋಲಿ ಠಾಣೆಯ ಪೊಲೀಸರು ಉರ್ಫಿ ಜಾವೇದ್​ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಪೊಲೀಸರ ಮುಂದೆ ಹಾಜರಾದ ಉರ್ಫಿಯನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಕೇಳಿದ ಅನೇಕ ಪ್ರಶ್ನೆಗಳಿಗೆ ಉರ್ಫಿ ಉತ್ತರ ನೀಡಿದ್ದಾರೆ. ಬೋಲ್ಡ್ ಬಟ್ಟೆಗಳನ್ನು ಧರಿಸಿ ಪೋಸ್ ನೀಡುತ್ತಾ ಮುಂಬೈ ಬೀದಿಗಳಲ್ಲಿ ಸುತ್ತಾಡಿದ್ದ ಉರ್ಫಿಗೆ ಇದೀಗ ಸಂಕಷ್ಟ ಎದುರಾಗಿದೆ.  

ಮಾಜಿ ಬಿಗ್​ ಬಾಸ್ ಸ್ಪರ್ಧಿ ಉರ್ಫಿ ಜಾವೇದ್​ ಧರಿಸುವ ಬಟ್ಟೆಗಳ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್​ ವಾಘ್​ ಅವರು ಉರ್ಫಿ ಜಾವೇದ್​ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸರು ಉರ್ಫಿ ಜಾವೇದ್​ಗೆ ನೋಟಿಸ್​ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಿದರು.

ಅಕ್ಕನಿಗೆ ಪೈಪೋಟಿ ನೀಡಲು ಸಿದ್ಧರಾದ ಉರ್ಫಿ ಸಹೋದರಿಯರು ಇವರೇ ನೋಡಿ...

ಉರ್ಫಿ ವಿಡಿಯೋ ಶೇರ್ ಮಾಡಿ,  'ಮುಂಬೈ ಬೀದಿಗಳಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ. ಉರ್ಫಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. 'ಒಂದು ಕಡೆ ಮುಗ್ಧ ಹಿಡುಗಿಯರು ಈ ವುಕೃತಿಗೆ ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಹುಡುಗಿ ವಿಕೃತಿಯನ್ನು ಹರಡುತ್ತಿದ್ದಾರೆ' ಎಂದು ಆರೋಪಿಸಿದ್ದರು. ಉರ್ಫಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿತ್ರಾ ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

ಸಲಿಂಗಕಾಮ: ಸದ್ಗುರುಗೆ ಉರ್ಫಿ ಜಾವೇದ್ ಹೇಳಿದ್ದೇನು, ಕೇಳಿದ್ದೇನು?

ಉರ್ಫಿ ಜಾವೇದ್ ವಿಚಿತ್ರ ಬಟ್ಟೆಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಅಂಡ್ ಹಾಟ್ ಬಟ್ಟೆಗಳ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಉರ್ಫಿ  ಬಿಜೆಪಿ ಸದಸ್ಯೆ  ವಿರುದ್ಧವೂ ಕಿಡಿ ಕಾರಿದ್ದರು. 'ನನ್ನನ್ನು ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ವಿಧಿ ಇಲ್ಲ. ಅಶ್ಲೀಲತೆ, ನಗ್ನತೆಯ ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ನನ್ನ ಖಾಸಗಿ ಭಾಗಗಳು ಕಾಣಿಸದ ಹೊರತು, ನೀವು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಪ್ರಚಾರ ಪಡೆಯಲು ಮಾತ್ರ ಇವರು ಇದನ್ನು ಮಾಡುತ್ತಿದ್ದಾರೆ' ಎಂದು ಹೇಳಿದ್ದರು. 'ಅತ್ಯಾಚಾರದ ಅಪರಾಧಿಗಳು ಸ್ವತಂತ್ರವಾಗಿ ತಿರುಗುತ್ತಿರುವಾಗ ಈ ರಾಜಕಾರಣಿಗಳು ನನ್ನನ್ನು ಬಂಧಿಸಲು ಬಂದಿದ್ದಾರೆ. ನಮ್ಮ ದೇಶದ ರಾಜಕಾರಣಿಗಳು ನನ್ನ ಬಂಧನಕ್ಕೆ ಒತ್ತಾಯಿಸುತ್ತಿರುವಾಗ ಅವರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಎಂಥ ವಿಪರ್ಯಾಸ. ಹಾಗಾದರೆ ನಾನು ಅತ್ಯಾಚಾರಿಗಳಿಗಿಂತ ಸಮಾಜಕ್ಕೆ ದೊಡ್ಡ ಭಯ ಆಗಿದ್ದೀನಾ? ಎಂದು ಪ್ರಶ್ನೆಸಿದ್ದರು.

click me!