
ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ 10 ವರ್ಷದ ನಂತರ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ. ಗರ್ಭಿಣಿ ಉಪಾಸನಾ ಸದ್ಯ ತನ್ನ ತಾಯ್ತಿತನದ ಜರ್ನಿ ಎಂಜಾಯ್ ಮಾಡುತ್ತಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ ಇಬ್ಬರೂ ಇತ್ತೀಚಿಗಷ್ಟೆ ವಿದೇಶಕ್ಕೆ ಹಾರಿದ್ದು ಅಲ್ಲೇ ಉತ್ತಮ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೆ ವಿದೇಶದಲ್ಲಿ ಉಪಾಸನಾ ಬೇಬಿಶವರ್ ಕಾರ್ಯಕ್ರವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ನಡುವೆ ಉಪಾಸನಾ ನೀಡಿದ ಸಂದರ್ಶನಗಳು ವೈರಲ್ ಆಗುತ್ತಿವೆ. ರಾಮ್ ಚರಣ್ ಬಗ್ಗೆ ಉಪಾಸನಾ ಹೇಳಿದ್ದ ಮಾತುಗಳು ಅಭಿಮಾನಿಗಳು ಗಮನ ಸೆಳೆಯುತ್ತಿವೆ.
ಜೀವನದ ಮೊದಲುಗಳು ಯಾವಾಗಲೂ ವಿಶೇಷವಾಗಿರುತ್ತವೆ. ಫಸ್ಟ್ ಲವ್, ಫಸ್ಟ್ ಗಿಫ್ಟ್ ಹೀಗೆ ಪ್ರತಿಯೊಂದು ಮೊದಲುಗಳು ಸದಾ ನೆನಪಿನಲ್ಲಿ ಇರುವಂತದ್ದಾಗಿದೆ. ಹಾಗೆ ಉಪಾಸನಾ ಕೂಡ ತನ್ನ ಜೀವನದ ಮೊದಲುಗಳು ತುಂಬಾ ವಿಶೇಷವಾಗಿದ್ದು ಎಂದು ಹೇಳಿದ್ದಾರೆ. ಪ್ರಾರಂಭದ ದಿನಗಳಲ್ಲಿ ಅಂದರೆ ರಾಮ್ ಚರಣ್ ಪರಿಚಯವಾದ ಸಮಯದಲ್ಲಿ ಕೊಟ್ಟ ಮೊದಲ ಗಿಫ್ಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಾಮ್ ಚರಣ್ ಮೊದಲು ಕೊಟ್ಟ ಗಿಫ್ಟ್ ಯಾವುದು ಎಂದು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ರಾಮ್ ಚರಣ್ ಮೊದಲು ಹೃದಯಾಕಾರದ ಕಿವಿಯೋಲೆ ನೀಡಿರುವುದಾಗಿ ಹೇಳಿದ್ದಾರೆ. ಪ್ರೇಮಿಗಳ ದಿನಾಚರಣೆ ದಿನ ರಾಮ್ ಚರಣ್ ಹೃದಯಾಕಾರದ ಕಿವಿಯೋಲೆ ನೀಡಿದ್ದರು. ಈಗಲೂ ಉಡುಗೊರೆಯನ್ನು ತುಂಬಾ ಪ್ರೀತಿಯಿಂದ ಜೋಪಾನವಾಗಿ ಇಟ್ಟಿದ್ದೇನೆ' ಎಂದು ಹೇಳಿದ್ದಾರೆ.
ಬಾಡಿಶೇಮಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರಾಮ್ ಚರಣ್ ಪತ್ನಿ; ಟ್ರೋಲ್‌ಗಳ ಬಗ್ಗೆ ಹೇಳಿದ್ದೇನು?
ರಾಮ್ ಚರಣ್ ಮತ್ತು ಉಪಾಸನಾ ಇಬ್ಬರೂ 2012 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ. ಮದುವೆಯಾಗಿ 10 ವರ್ಷಗಳ ಬಳಿಕ ಇಬ್ಬರೂ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಮಗ ಪಡೆಯುವ ಬಗ್ಗೆ ಇದ್ದ ಒತ್ತಡಗಳ ಬಗ್ಗೆ ಉಪಾಸನಾ ಬಹಿರಂಗ ಪಡಿಸಿದ್ದರು.
ಸಮಾಜ ಬಯಸಿದಾಗ ಅಲ್ಲ, ನಾನು ಬಯಸಿದಾಗ ತಾಯಿ ಆಗ್ತಿದ್ದೀನಿ; ರಾಮ್ ಚರಣ್ ಪತ್ನಿ ಉಪಾಸನಾ
ಕುಟುಂಬ ಮತ್ತು ಸಮಾಜದಿಂದ ಸಾಕಷ್ಟು ಒತ್ತವಿತ್ತು. ಆದರೆ ರಾಮ್ ಚರಣ್ ಮತ್ತು ತಾನು ಯಾವುದೇ ಪರಿಣಾಮ ಬೀರಲು ಬಿಡಲಿಲ್ಲ ಎಂದು ಹೇಳಿದ್ದರು. 'ನಾನು ತುಂಬಾ ಉತ್ಸುಕಳಾಗಿದ್ದೇನೆ. ತುಂಬಾ ಹೆಮ್ಮೆಪಡುತ್ತೇನೆ. ಸಮಾಜ ಬಯಸಿದಾಗ ಅಲ್ಲ ನಾವು ಬಯಸಿದಾಗ ಮಗು ಪಡೆಯುತ್ತಿದ್ದೇವೆ. ಮದುವೆಯಾಗಿ ಹತ್ತು ವರ್ಷಗಳ ನಂತರ ಈಗ ಮಗುವನ್ನು ಪೆಯುತ್ತಿದ್ದೇವೆ. ಇದು ಉತ್ತಮ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾನು ಅಭಿವೃದ್ದಿ ಹೊಂದಿದ್ದೇವೆ, ಇಬ್ಬರೂ ಆರ್ಥಿಕವಾಗಿ ಸದೃಢರಾಗಿದ್ದೇವೆ. ಮಕ್ಕಳನ್ನೂ ನಾವೆ ನೋಡಿಕೊಳ್ಳಬಹುದು' ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.