VIjay TVK: ಬೆಚ್ಚಿಬಿದ್ದ ವಿಜಯ್‌ ದಳಪತಿ; ಹೂ ಕಂಡು ಎದ್ನೋ ಬಿದ್ನೋ ಎಂದು ಓಡಿದ್ಯಾಕೆ ತಮಿಳು ಹೀರೋ?

Published : Apr 13, 2026, 04:35 PM IST
actor thalapathy vijay

ಸಾರಾಂಶ

VIjay TVK: ಕನ್ಯಾಕುಮಾರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸೈಕಲ್ ಸವಾರಿ ಮಾಡುತ್ತಿದ್ದ ನಟ ವಿಜಯ್, ಯಾರೋ ಎಸೆದ 'ಹೂವಿನ ಚೆಂಡಿಗೆ' ಬೆದರಿ ತಕ್ಷಣ ಕಾರು ಹತ್ತಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಎಲ್ಲೆಲ್ಲೂ ನಟ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರದ್ದೇ ಚರ್ಚೆ. ಇತ್ತೀಚೆಗೆ ಅವರು ಕನ್ಯಾಕುಮಾರಿಯಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಒಂದು ಕಡೆ ಕಾರಿನಿಂದ ಇಳಿದು, ಸೈಕಲ್ ತುಳಿಯುತ್ತಾ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಭೇಟಿಯಾದರು. ಈ ವೇಳೆ, ಯಾರೋ ಒಬ್ಬರು 'ಹೂವಿನ ಚೆಂಡು' (Flower Ball) ಎಸೆದಿದ್ದಾರೆ. ಇದನ್ನು ನೋಡಿದ ತಕ್ಷಣ ವಿಜಯ್ ವೇಗವಾಗಿ ವಾಪಸ್ ತಮ್ಮ ಕಾರು ಹತ್ತಿದ್ದಾರೆ. ಇದೇ ಘಟನೆ ಈಗ ಟ್ರೋಲ್‌ಗಳಿಗೆ ಆಹಾರವಾಗಿದೆ.

ರ್ಯಾಲಿ ಮಾಡುವಾಗ ಓಡಿದ್ರು!

'ಹೂವಿನ ಚೆಂಡು' ಬಿದ್ದ ತಕ್ಷಣ ಕಣ್ಣು ಮುಚ್ಚಿ ತೆರೆಯುವುದರೊಳಗೆ ವಿಜಯ್ ಕಾರು ಹತ್ತಿದ್ದರು. ಅವರ ಹಿಂದೆಯೇ ಬಾಡಿಗಾರ್ಡ್‌ಗಳು ಸೈಕಲ್ ಎತ್ತಿಕೊಂಡು ಓಡಿದರು. 'ಹೂವಿನ ಚೆಂಡನ್ನು ಬಾಂಬ್ ಎಂದುಕೊಂಡು ವಿಜಯ್ ಹೆದರಿ ಓಡಿದರು' ಅಂತಾ ಈ ವಿಡಿಯೋವನ್ನು ಟ್ರೋಲ್ ಮಾಡಲಾಗುತ್ತಿದೆ. 'ಸಿನಿಮಾದಲ್ಲಿ ಬಾಂಬ್, ಗನ್ ಹಿಡಿದ ವಿಲನ್‌ಗಳನ್ನು ಎದುರಿಸಿ ಇಡೀ ಹಳ್ಳಿಯನ್ನೇ ಕಾಪಾಡೋ ಹೀರೋ ವಿಜಯ್. ಭಾಷಣದಲ್ಲೂ ಅದೇ ಧೈರ್ಯ. ಆದರೆ ನಿಜ ಜೀವನದಲ್ಲಿ ಸೈಕಲ್ ರ‍್ಯಾಲಿ ಮಾಡುವಾಗ ಒಂದು ಹೂವಿನ ಹಾರ ಬಿದ್ದಿದ್ದಕ್ಕೆ ಓಡಿದ್ದೇ ಓಡಿದ್ದು' ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಸಿನಿಮಾದಲ್ಲಿರೋ ಧೈರ್ಯ ರಿಯಲ್‌ ಲೈಫ್‌ನಲ್ಲಿಲ್ಲ!

ಮಲಯಾಳಂನ 'ಚಟ್ಟಂಬಿ ನಾಡು' ಸಿನಿಮಾದ ನಟ ಸೂರಜ್ ವೆಂಜಾರಮೂಡ್ ಅವರ ಕಾಮಿಡಿ ಡೈಲಾಗ್ ಸೇರಿಸಿ, ವಿಜಯ್ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. 'ಇಡೀ ಹಳ್ಳಿಯನ್ನೇ ರಕ್ಷಿಸೋಕೆ ಹೊರಟವನ ಪೋಸ್ ನೋಡಿ', 'ನಿಜವಾಗಿ ಅವರು ಹಿಂದಿನ ಗಾಡಿಯಲ್ಲಿದ್ದವರನ್ನು ಕಾಪಾಡೋಕೆ ಸೈಕಲ್ ಬಿಸಾಕಿ ಓಡಿದ್ದು ಅಂತ ಎಷ್ಟು ಜನಕ್ಕೆ ಗೊತ್ತಾಯ್ತು?', 'ಏಯ್ ಚೆಲ್ಲಂ, ಎಲ್ಲಿಗೆ ಓಡ್ತಿದೀಯಾ?', 'ಸಿನಿಮಾದಲ್ಲಿ ಜೇಮ್ಸ್ ಬಾಂಡ್, ನಿಜ ಜೀವನದಲ್ಲಿ ಬರೀ ಬೋಂಡ', 'ಆ ಬಾಂಬ್ ಎಸೆದವನೇ ನಿಜವಾದ ಸ್ಟಾರ್', 'ಸಿನಿಮಾದಲ್ಲಿ ತೋರಿಸೋದ್ರಲ್ಲಿ ಅರ್ಧದಷ್ಟೂ ಧೈರ್ಯ ಇಲ್ವಾ?' ಎಂಬಂತಹ ಕಾಮೆಂಟ್‌ಗಳು ಹರಿದಾಡುತ್ತಿವೆ.

ಸೈಕಲ್‌ ಯಾಕೆ ಬೇಕಿತ್ತು?

ಇದೇ ವೇಳೆ, ವಿಜಯ್ ಅವರನ್ನು ಕೆಲವರು ಟೀಕಿಸಿದರೆ, ಇನ್ನು ಕೆಲವರು ಬೆಂಬಲಕ್ಕೆ ನಿಂತಿದ್ದಾರೆ. 'ಸರಿಯಾಗಿ ಕಾರಲ್ಲೇ ಹೋಗಬಹುದಿತ್ತಲ್ವಾ? ಅವರ ಹಿಂದೆ ಓಡುತ್ತಿರುವ ಬಾಡಿಗಾರ್ಡ್‌ಗಳನ್ನು ನೋಡಿದರೆ ಪಾಪ ಎನಿಸುತ್ತದೆ. ಈ ಸೈಕಲ್ ಪ್ರಹಸನ ಯಾಕೆ ಬೇಕಿತ್ತು?' ಎಂದು ಕೆಲವರು ಟೀಕಿಸಿದ್ದಾರೆ. 'ಒಂದು ವೇಳೆ ಅದು ನಿಜವಾದ ಬಾಂಬ್ ಆಗಿದ್ದರೆ ಏನು ಕಥೆ? ಸದ್ಯದ ತಮಿಳುನಾಡು ರಾಜಕೀಯ ಪರಿಸ್ಥಿತಿಯಲ್ಲಿ ಏನನ್ನೂ ಹೇಳೋಕೆ ಆಗಲ್ಲ' ಎಂದು ವಿಜಯ್ ಬೆಂಬಲಿಗರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ, ವಿಜಯ್ ಅವರ ಈ 'ಸೈಕಲ್, ಫ್ಲವರ್ ಬಾಲ್ ಓಟ'ದ ವಿಡಿಯೋ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟಿ ಕೀರ್ತಿ ಸುರೇಶ್ ಕುಡಿಯಲ್ಲ, ಆದ್ರೆ ಬೆಳಗಿನ ಜಾವ 2 ಗಂಟೆಗೆ ಹೈಪರ್ ಆಗ್ತಾಳೆ..: ಸೀಕ್ರೆಟ್ ಬಿಚ್ಚಿಟ್ಟ ಸಮಂತಾ
ಯಾವ ನಟಿ ನಿರ್ಮಾಪಕ, ನಿರ್ದೇಶಕರ ಜೊತೆ ಬೆಡ್‌ ಶೇರ್‌ ಮಾಡಿಲ್ಲ ಹೇಳಿ? ಇನ್ನೋರ್ವ ನಟಿ ಸವಾಲು ಹಾಕಿದ್ರು!