
ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ಚಿತ್ರರಂಗಕ್ಕೆ ಪ್ರವೇಶಿಸಿರುವುದರ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಸಮಂತಾ ಅಕ್ಕಿನೇನಿ ಅಭಿನಯಿಸುತ್ತಿರುವ ಶಾಕುಂತಲಂ ಚಿತ್ರದಲ್ಲಿ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಷ್ಟು ದಿನಗಳ ಕಾಲ ಡೈಲಾಗ್ ಪ್ರ್ಯಾಕ್ಟಿಸ್ ನಡೆಯುತ್ತಿದ್ದು, ಈಗಷ್ಟೇ ಚಿತ್ರೀಕರಣ ಆರಂಭಿಸಿದ್ದಾರೆ. ಶೂಟಿಂಗ್ ಸೆಟ್‌ಗೆ ಬರೋಬ್ಬರಿ 5 ಕೋಟಿ ರೂ. ಬೆಲೆಯ ಕ್ಯಾರಾವ್ಯಾನ್‌ನಲ್ಲಿ ಆರ್ಹಾ ಇಳಿದು ಬಂದುದ್ದನ್ನು ನೋಡಿ ಸೆಟ್‌ನಲ್ಲಿದ್ದವರು ಶಾಕ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆಯಲು ಸಜ್ಜಾಗಿರುವ ಆರ್ಹಾಗೆ ಫುಲ್ ಸೆಕ್ಯೂರಿಟಿಯನ್ನೂ ನೀಡಲಾಗಿದೆ.
ಚಿತ್ರೀಕರಣಕ್ಕೆ ಅರ್ಹಾ ರೆಡಿಯಾಗುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೌರಾಣಿಕ ಕಥೆ ಹೊಂದಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು ಗುಣಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಕ್ಯಾರವ್ಯಾನ್ ಮುಂದೆ ಆರ್ಹಾ ಹೆಸರಿನ ಬಲೂನ್ ಕಟ್ಟಿ ಚಿತ್ರತಂಡ ಸ್ವಾಗತಿಸಿಕೊಂಡಿದೆ. ಅರ್ಜುನ್ ಪತ್ನಿ ಸ್ನೇಹಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಮಗಳ ಹೊಸ ದಿನಚರಿ ಬಗ್ಗೆ ಮಾಹಿತಿ ಹಂಚಿ ಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಸಹ ಬಾಲ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಈಗ ಆರ್ಹಾ ಎಂಟ್ರಿ ಕೊಟ್ಟಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.