
ಟಾಲಿವುಡ್ ಸಿಂಪಲ್ ಸ್ಟಾರ್ ವಿಶಾಲ್ ನಟನಾಗಿ ಮಾತ್ರವಲ್ಲದೆ ಒಬ್ಬ ನಿರ್ಮಾಪಕರನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡುತ್ತಲ್ಲೇ ಇದ್ದಾರೆ. ಸದಾ ಸಿಹಿ ಸುದ್ದಿ ನೀಡುತ್ತಿದ್ದ ಪ್ರೊಡಕ್ಷನ್ ಕಂಪನಿಯಿಂದ ಮೊದಲ ಬಾರಿಗೆ ವಂಚನೆ ವಿಚಾರ ಕೇಳಿ ಬಂದಿದೆ.
ತಮಿಳು ನಟ ವಿಶಾಲ್ ಜೊತೆ ಒಂದಾದ ರಾಕಿಂಗ್ ಸ್ಟಾರ್ ಯಶ್; ಯಾವ ವಿಚಾರಕ್ಕೆ?
ನಟ ವಿಶಾಲ್ ಮತ್ತ ಪ್ರೊಡಕ್ಷನ್ ಮ್ಯಾನೇಜರ್ ಹರಿ ಕೆಲ ದಿನಗಳ ಹಿಂದೆ ಆಡಿಟ್ ಚೆಕ್ ಮಾಡಿದ್ದಾರೆ.ಕಂಪನಿಯಲ್ಲಿ 6 ವರ್ಷಗಳಿಂದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಓರ್ವ ಮಹಿಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ TDS ಮೊತ್ತವನ್ನು ನೇರವಾಗಿ ಕುಟುಂಬಸ್ಥರ ಖಾತೆಗೆ ಸೇರುವಂತೆ ಮಾಡಿರುವ ವಂಚನೆ ಬೆಳಕಿಗೆ ಬಂದಿದೆ.
ಮ್ಯಾನೆಜರ್ ಹರಿ ನೀಡಿರುವ ಮಾಹಿತಿ ಪ್ರಕಾರ ಅಕೌಂಟೆಂಟ್ ಜೂನ್ 28ರ ಒಳಗೆ ಆದಾಯ ತೆರಿಗೆ ಮಾಡಬೇಕಿತ್ತು. ಈ ಸಮಯದಲ್ಲಿ ಆಕೆ ಯಾವ ಇನ್ನಿತರ ನೌಕರರಿಗೂ ಟಿಡಿಎಸ್ ಹಣ ನೀಡಿಲ್ಲ ಎಂದು ಎನ್ನುವುದು ತಳಿದು ಬಂದಿದೆ. ಈ ವಿಚಾರದ ಬಗ್ಗೆ ನಟ ವಿಶಾಲ್ ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಚೆನ್ನೈನ ಸ್ಥಳೀಯ ವಿರುಗಂಪಕ್ಕಂ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ಹರಿ ದೂರು ನೀಡಿದ್ದಾರೆ.
ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!
ಇಷ್ಟು ದಿನಗಳ ಕಾಲ ಸದಾ ಸಿಹಿ ಸುದ್ದಿ ನೀಡುತ್ತಿದ್ದ ವಿಶಾಲ್ ಫಿಲ್ಮ್ ಫ್ಯಾಕ್ಟರಿಯಿಂದ ವಂಚನೆಯ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯದಲ್ಲೇ ವಿಶಾಲ್ ಬ್ಯಾನರ್‌ನಲ್ಲಿ 'ಚಕ್ರ' ಮತ್ತು 'Thupparivaalan 2' ಸಿನಿಮಾ ರಿಲೀಸ್ ಆಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.