
ತೆಲಗು ಚಿತ್ರರಂಗದ (Tollywood) ಕಾಂಟ್ರೋವರ್ಸಿಯಲ್ಲಿ ಸದಾ ಟಾಕ್ ಆಫ್ ಇಂಡಿಯಾ ಆಗುವುದಕ್ಕೆ ಕಾರಣ ನಟಿ ಶ್ರೀರೆಡ್ಡಿ (Sri Reddy). ಮೀಟೂ (Me Too) ಅಭಿಯಾನದ ವೇಳೆ ದಿನಕ್ಕೊಬ್ಬ ಸ್ಟಾರ್ ನಟನ ಮೇಲೆ ಕಿಡಿಕಾರುತ್ತಿದ್ದರು. ಆರೋಪ ಮಾಡುತ್ತಿದ್ದರು ಹಾಗೇ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ (Police) ಮೇಲೆ ಒತ್ತಡ ಹಾಕುತ್ತಿದ್ದರು ಈ ನಟಿ. ಮೀಟೂ ಸಂಚಲನ ಸೃಷ್ಟಿಸಿದ ಸಮಯದಲ್ಲಿ ಪವನ್ ಕಲ್ಯಾಣ್ (Pawan Kalyan) ವಿರುದ್ಧ ಕೂಡ ತಿರುಗಿ ಬಿದ್ದಿದ್ದರು. ಆಗ ಅವರ ತಾಯಿ ಹೆಸರು ಬಳಸಿದ ಕಾರಣ ಈಗ ಕ್ಷಮೆ ಕೇಳಿದ್ದಾರೆ.
ಏನಿದು ಘಟನೆ?:
ಮೀಟೂ ಅಭಿಯಾನ ವೇಳೆ ಪವನ್ ಕಲ್ಯಾಣ್ ವಿರುದ್ಧ ಶ್ರೀ ರೆಡ್ಡಿ ತಿರುಗಿಬಿದ್ದಿದ್ದರು. ಆಗ ಪವನ್‌ಗೆ ಮಿಡಲ್ ಫಿಂಗರ್ (Middle Finger) ತೋರಿಸಿ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದ್ದರು. ಅಲ್ಲದೇ ಪವನ್ ಅವರ ತಾಯಿಯನ್ನು ಎಳೆದು ತಂದೆ ಕೆಟ್ಟದಾಗಿ ಮಾತನಾಡಿದ್ದರು. ಈ ಘಟನೆ ನಡೆದು ವರ್ಷಗಳೇ ಕಳೆಯುತ್ತಿದೆ. ಈಗ ಶ್ರೀ ರೆಡ್ಡಿ ಕ್ಷಮೆ ಕೇಳಿದ್ದಾರೆ.
ಮೀಟೂ ಸಮಯದಲ್ಲಿ ಸ್ರೀರೆಡ್ಡಿ ಅರೆಬೆತ್ತಲಾಗಿ (Half Naked) ಆಗಿ ಬಂದು ತೆಲುಗು ಚಿತ್ರರಂಗದ ನಿರ್ಮಾಪಕ ಸುರೇಶ್ ಬಾಬು (Suresh Babu) ಪುತ್ರ ಅಭಿರಾಮ್ ದಗ್ಗುಬಾಟಿ (Abhiram Daggubati) ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆಂಬ ಆರೋಪ ಮಾಡಿದ್ದರು. ಈ ವೇಳೆ ಪವನ್ ಕಲ್ಯಾಣ್‌ಗೆ ಸಪೋರ್ಟ್ ಮಾಡಲು ಶ್ರೀರೆಡ್ಡಿ ಸಾಕಷ್ಟು ಮನವಿ ಮಾಡಿಕೊಂಡಿದ್ದರು. ಆದರೆ ಪವನ್ ಪ್ರತಿಕ್ರಿಯೆ ನೀಡಿರಲಿಲ್ಲ. ಈ ವಿಚಾರಕ್ಕೆ ಕೋಪಗೊಂಡ ಶ್ರೀರೆಡ್ಡಿ ಪವನ್ ಮತ್ತು ಅವರ ತಾಯಿಯನ್ನು ಹಿಗ್ಗಾಮುಗ್ಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಶ್ರೀ ರೆಡ್ಡಿ ಮಾತುಗಳನ್ನು ಕೇಳಿ ಅಭಿಮಾನಿಗಳು ಮತ್ತು ಪವನ್ ಫ್ಯಾಮಿಲಿ ಮಾತ್ರವಲ್ಲದೇ ಇಡೀ ಚಿತ್ರರಂಗವೇ ಬೇಸರ ಮಾಡಿಕೊಂಡಿತ್ತು.
ಶ್ರೀ ರೆಡ್ಡಿ ಕ್ಷಮೆ:
ಅಂದು ಆಡಿದ ಮಾತು ಈಗಲೂ ಮನಸ್ಸಿಗೆ ನೋವು ಮಾಡುತ್ತಿದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಹಂಚಿಕೊಂಡು, 'ಚಿರಂಜೀವಿ (Mega Star Chiranjeevi) ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ನಾನು ಅವರ ತಾಯಿ ಅಂಜನಾ ದೇವಿ (Anjana Devi) ಬಗ್ಗೆ ಮಾತನಾಡಬಾರದಿತ್ತು ಅಲ್ಲದೇ ಅಂತಹ ಅವಾಚ್ಯ ಶಬ್ದಗಳನ್ನು ಬಳಸಬಾರದಿತ್ತು. ನಾನು ಅಂದು ಆಡಿದ ಮಾಡಿದ ಮಾತಿಗೆ ಒಂದು ಅಂಜನಾ ದೇವಿಯವರಿಗೆ ಕ್ಷಮೆ ಕೇಳುತ್ತೇನೆ,' ಎಂದು ಮಾತನಾಡಿದ್ದಾರೆ.
ಪವನ್ ಕಲ್ಯಾಣ್ ಹೆಸರು ಬಳಸದೇ ಅವರ ತಾಯಿಗೆ ಕ್ಷಮೆ ಕೇಳಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ. ಪರೋಕ್ಷವಾಗಿ ಪವನ್‌ಗೆ ಕ್ಷಮೆ ಕೇಳಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್‌ಗೆ ನೇರವಾಗಿ ಕೇಳದೆ ಅವರ ತಾಯಿಗೆ ಕೇಳಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ಅಂಜನಾ ದೇವಿ ಅವರಿಗೆ ನಾಲ್ಕು ಗಂಡ ಮಕ್ಕಳು. ನಾಗಬಾಬು (Nagababu), ವಿಜಯದುರ್ಗ ಕೊನೆಡೆಲಾ, ಚಿರಂಜೀವಿ ಮತ್ತು ಪವನ್ ಕಲ್ಯಾಣ್. ಹೀಗಾಗಿ ಅಂಜನಾ ಅವರ ಮಕ್ಕಳಾದ ಒಬ್ಬರಿಗೆ ಅಡ್ರೆಸ್ ಮಾಡಿ ಕ್ಷಮೆ ಕೇಳಿದ್ದಾರೆ ಶ್ರೀರೆಡ್ಡಿ.
ಆರ್‌ಜಿವಿ ಎಂಟ್ರಿ:
ಪವನ್ ಕಲ್ಯಾಣ್ ವಿರುದ್ಧ ಶ್ರೀ ರೆಡ್ಡಿ ತಿರುಗಿ ಬಿದ್ದ ಕೆಲವು ದಿನಗಳ ನಂತರ ಮತ್ತೊಬ್ಬ ಕಾಂಟ್ರೋವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಎಂಟ್ರಿ ಕೊಟ್ಟಿದ್ದರು. ಪವನ್ ಮತ್ತು ಆರ್‌ಜಿವಿ ನಡುವೆ ಸಂಬಂಧ ಅಷ್ಟಕ್ಕಷ್ಟೇ. ಹೀಗಾಗಿ ನಾನೇ ಶ್ರೀರೆಡ್ಡಿಗೆ ಹೇಳಿಕೊಟ್ಟಿದ್ದು ಪವನ್ ವಿರುದ್ಧ ಹೀಗೆ ಮಾತನಾಡಲು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಅಂದಿನಿಂದ ಪವನ್ ಅಭಿಮಾನಿಗಳು ಆರ್‌ಜಿವಿ ಏನೇ ಮಾಡಿದ್ದರೂ ಟಾಂಗ್ ಕೊಟ್ಟೇ ಕೊಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.