
'ಲಸ್ಟ್ ಸ್ಟೋರಿಸ್' ಚಿತ್ರದ ನಂತರ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಟಿ ಕಿಯಾರ ಅಡ್ವಾನಿ ಈಗ ಬಾಲಿವುಡ್ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಈ ಅದೇ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಗುತ್ತಿದೆ.
'ನಾನೇಕೆ ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡೆ' ಕಿಯಾರಾ ಬೋಲ್ಡ್ ಉತ್ತರ
ಬಾಲಿವುಡ್‌ನಲ್ಲಿ ಹಿಟ್ ಸಿನಿಮಾವಾದ ಕಾರಣ ನಿರ್ದೇಶಕ ಕರಣ್ ಜೋಹಾರ್, ಅನುರಾಗ್ ಕಶ್ಯಪ್, ಜೋಯಾ ಅಕ್ತರ್ ಹಾಗೂ ಡಿವಾಕರ್ ಬ್ಯಾನರ್ಜಿ ಈ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಮಾಡುವುದಕ್ಕೆ ಪ್ಲಾನ್ ಮಾಡಿದ್ದರು.
ಕೆಲವು ಮಾಹಿತಿಗಳ ಪ್ರಕಾರ ತೆಲುಗು ಲಸ್ಟ್ ಸ್ಟೋರಿಸ್‌ನಲ್ಲಿ ನಟಿ ಶ್ರುತಿ ಹಾಸನ್ ಅಭಿನಯಿಸಲಿದ್ದಾರೆ. ತೆಲುಗು ಸಿನಿಮಾವನ್ನು ತರುಣ್ ಭಾಸ್ಕರ್, ಸಂಕಲ್ಪ್ ರೆಡ್ಡಿ ಹಾಗೂ ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅಮಲಾ ಪೌಲ್ ಅಥವಾ ಈಷಾ ರೆಬ್ಬಾ ಈ ಹಸ್ತ ಮೈಥುನದ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆಂದು ಸುದ್ದಿ ಇತ್ತು. ಆದರೆ ಇಂಥ ಪಾತ್ರವನ್ನು ಅಭಿನಯಿಸುವುದಕ್ಕೆ ಶ್ರುತಿ ಬೆಸ್ಟ್ ಎಂದಿದ್ದಾರೆ, ನಿರ್ದೇಶಕರು.
ಕೊನೆಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ 'Lust stories' ನಾಯಕಿ!
ಇನ್ನು ಕರಣ್ ಜೋಹಾರ್ ನಿರ್ದೇಶನದ ಗುಜಾನ್ ಸೆಕ್ಸೇನಾ: ದಿ ಕಾರ್ಗಿಲ್ ಗರ್ಲ್ ನಲ್ಲಿ ಜಾಹ್ನವಿ ಅಭಿನಯಿಸಿದ ನಂತರ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರ ಅಭಿನಯದ ಕೋಲಮಾವು ಕೋಕಿಲಾ ಹಿಂದಿ ರಿಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಲಾಕ್‌ಡೌನ್ ಅಂತಿಮಗೊಂಡು ಚಿತ್ರಮಂದಿರಗಳು ಪ್ರದರ್ಶನಕಗಳಿಗೆ ಸಜ್ಜಾದ ನಂತರ ಸೂಪರ್ ಹಿಟ್ ಸಿನಿಮಾಗಳು ಬೆಳ್ಳಿ ಪರದೆ ಮೆಲೇ ರಾರಾಜಿಸಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.