
ರಾಕಿಂಗ್ ಸ್ಟಾರ್ ಯಶ್‌ಗೆ ಜೋಡಿಯಾಗಿ 'ಕಿರಾತಕ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ಛಾಪು ಮೂಡಿಸಿದ್ದ ನಟಿ ಓವಿಯಾ ಮೀಟೂ ಟ್ಟೀಟ್ ವೈರಲ್ ಅಗುತ್ತಿದೆ. ಮಹಿಳೆಯರ ವಿರುದ್ಧ ಆಗುತ್ತಿರುವ ದೌರ್ಜನ್ಯದ ಬಗ್ಗೆ ಧ್ವನಿ ಎತ್ತದಿದ್ದರೆ ಹೇಗೆ ಎಂದು ನೆಟ್ಟಿಗರನ್ನು ಪ್ರಶ್ನೆ ಮಾಡಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕೆಲವರು ಆರ್ಥಿಕ ಸಮಸ್ಯೆಗಳಿಂದ ವರದಕ್ಷಿಣೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ಕೇವಲ ಒಂದು ರಾಜ್ಯದ ವಿಚಾರವಲ್ಲ, ಹಲವೆಡೆ ಹೀಗೆ ನಡೆಯುತ್ತಿದೆ. ಇದನ್ನು ತಡೆಯಬೇಕೆಂದು ಓವಿಯಾ ಮುಂದಾಗಿದ್ದಾರೆ.
'ನಿಮ್ಮ ಮಗಳಿಗೆ ಸೆಲ್ಫೀ ಡಿಫೆನ್ಸ್ ಹೇಳಿ ಕೊಡುವ ಬದಲು #metoo ನಿಮ್ಮ ಮಗನಿಗೆ ಹೆಣ್ಣು ಮಕ್ಕಳನ್ನು ಗೌರವಿಸುವುದು ಹಾಗೂ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳುವಂತೆ ಗುಣಗಳನ್ನು ಹೇಳಿಕೊಡಿ,' ಎಂದು ಓವಿಯಾ ಟ್ಟೀಟ್ ಮಾಡಿದ್ದಾರೆ. ಹೆಣ್ಣು ಮಕ್ಕಳ ಪರ ಓವಿಯಾ ಹೋರಾಟ ಮಾಡುತ್ತಿರುವುದು ಇದೇ ಮೊದಲೇನಲ್ಲ. ಅನೇಕ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದಾರೆ.
'ಹಸ್ತಮೈಥುನ ಇದೆಯಲ್ಲ-ಗಂಡ ಬೇಕಿಲ್ಲ' ಬೋಲ್ಡ್ ರಿಪ್ಲೈ ಕೊಟ್ಟ ಯಶ್ ನಾಯಕಿ!
ಕೆಲವು ತಿಂಗಳ ಹಿಂದೆ ನಟಿ ಓವಿಯಾ ಗೋ ಬ್ಯಾಕ್ ಮೋದಿ ಎಂದು ಟ್ಟೀಟ್ ಮಾಡಿದ್ದರು. ಇದಕ್ಕೆ ತಮಿಳುನಾಡು ಬಿಜೆಪಿ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.