
ಟಾಲಿವುಡ್ ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯ ಡಿಸೆಂಬರ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಮುಹೂರ್ತದೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ ಸ್ಥಳ ಮಾತ್ರ ಪಕ್ಕಾ ಫಿಕ್ಸ್ ಆಗಿದೆ.
ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ!
ಹೌದು! ಅರಮನೆಗಳಿರುವ ರಾಜಸ್ಥಾನದ ಉದಯ್‌ಪುರದಲ್ಲಿ ನಿಹಾರಿಕಾ ಮದುವೆಯಾಗುತ್ತಿದ್ದಾರೆ. ಪಕ್ಕಾ ರಾಜ-ರಾಣಿ ಶೈಲಿಯಲ್ಲಿ ವಧು-ವರನ ಉಡುಪು ವಿನ್ಯಾಸ ಮಾಡಲಾಗುತ್ತದೆ. ಐಷಾರಾಮಿ ಹೊಟೇಲ್‌ನಲ್ಲಿ ಈಗಾಗಲೆ ರೂಮ್‌ಗಳನ್ನು ಬುಕ್ ಮಾಡಲಾಗಿದೆ. ಆಪ್ತರು ಮಾತ್ರ ಭಾಗಿಯಾಗುತ್ತಿರುವ ಈ ಸಮಾರಂಭಕ್ಕೆ ಹೈ ಎಂಡ್ ಸೆಕ್ಯುರಿಟಿ ನೀಡಲಾಗುತ್ತದೆ.
ಗುಂಟೂರಿನ ಐಜಿಪಿ ಪ್ರಭಾಕರ್ ಪುತ್ರ ಚೈತನ್ಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಬ್ಯುಸಿನೆಸ್ ಸ್ಟ್ರಾಟಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಶೀಘ್ರದಲ್ಲೇ ಪ್ರೀ ವೆಂಡಿಂಗ್ ಫೋಟೋ ಶೂಟ್ ಮಾಡಿಸಲಿದ್ದಾರೆ.
ದೇಶವೇ ಚೀನಾ ಪ್ರಾಡಕ್ಟ್ ನೀಷೇಧಿಸ್ತಿದ್ರೆ, ಚಿರು ಮಗಳು ಮಾತ್ರ 1+ ಫೋನ್ ಆ್ಯಡ್‌ನಲ್ಲಿ ಬ್ಯುಸಿ
ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಿಹಾರಿಕಾ ಸೋಷಿಯಲ್ ಮೀಡಿಯಾ ಸ್ಟಾರ್ ಎಂದು ಹೇಳಿದರೆ ತಪ್ಪಾಗದು. ಅನೇಕ ಜಾಹಿರಾತುಗಳನ್ನು ಪ್ರಮೋಟ್ ಮಾಡುತ್ತಾರೆ. ಭಾರತ ಚೀನಾ ವಸ್ತುಗಳನ್ನು ನಿಷೇಧಿಸಿದಾಗ 1 ಪ್ಲಸ್ ಫೋನ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಿದ್ದಕ್ಕೆ ಟ್ರೋಲ್ ಆಗಿದ್ದರು ನಿಹಾರಿಕಾ.
ಚಿರಂಜೀವಿ ಕುಟುಂಬದಲ್ಲಿ ಗಂಡು ಮಕ್ಕಳೇ ಹೆಚ್ಚಾಗಿ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರುವುದು. ಆದರೆ ಅವರ ಪೈಕಿ ನಿಹಾರಿಕಾ ಒಬ್ಬಳೇ ಹೆಣ್ಣು ಮಗಳು ಆನ್‌ಸ್ಕ್ರೀನ್‌ನಲ್ಲಿ ಕಮಾಲ್ ಮಾಡಿರುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.