ತೆಲುಗಿನ ಪುಷ್ಪ ಚಿತ್ರಕ್ಕೆ ತಲೆನೋವಾದ ಕೆಜಿಎಫ್ ಯಶಸ್ಸು

Suvarna News   | Asianet News
Published : Jun 17, 2021, 01:27 PM ISTUpdated : Jun 17, 2021, 01:29 PM IST
ತೆಲುಗಿನ ಪುಷ್ಪ ಚಿತ್ರಕ್ಕೆ ತಲೆನೋವಾದ ಕೆಜಿಎಫ್ ಯಶಸ್ಸು

ಸಾರಾಂಶ

ಶೂಟಿಂಗ್ ಮುಗಿಸಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಡಬ್ಬಿಂಗ್ ರೈಟ್ಸ್ ಸೇರಿದಂತೆ ಹಲವು ರೀತಿಯ ವ್ಯವಹಾರ ಆರಂಭಿಸಿದ ನಿರ್ಮಾಪಕರು ಪುಷ್ಪ ಚಿತ್ರವನ್ನು ಕೆಜಿಎಫ್ ಜತೆ ಹೋಲಿಕೆ ಮಾಡುತ್ತಿರುವ ಚಿತ್ರತಂಡ

ಶೂಟಿಂಗ್ ಮುಗಿಸಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಎಡಿಟಿಂಗ್ ಟೇಬಲ್ ಮೇಲಿದೆ. ಈ ಹೊತ್ತಿನಲ್ಲಿ ನಿರ್ಮಾಪಕರು ಚಿತ್ರದ ಟಿ.ವಿ. ರೈಟ್ಸ್, ವಿತರಣೆ ಹಕ್ಕುಗಳು, ಡಬ್ಬಿಂಗ್ ರೈಟ್ಸ್ ಸೇರಿದಂತೆ ಹಲವು ರೀತಿಯ ವ್ಯವಹಾರ ಆರಂಭಿಸಿದ್ದಾರೆ. ಆದರೆ, ಎಲ್ಲೇ ಹೋದರೂ ಪುಷ್ಪ ಚಿತ್ರವನ್ನು ಕೆಜಿಎಫ್ ಜತೆ ಹೋಲಿಕೆ ಮಾಡುತ್ತಿದ್ದಾರೆ. ‘ನಮ್ಮ ಚಿತ್ರ ಕೆಜಿಎಫ್‌ಗಿಂತಲೂ ದೊಡ್ಡ ಮಟ್ಟದಲ್ಲಿ ಮೂಡಿ ಬಂದಿದೆ. ನಮ್ಮದು ಕೂಡ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ’ ಎಂದು ಹೇಳಿಯೇ ಪುಷ್ಪ ಚಿತ್ರದ ನಿರ್ಮಾಪಕರು ಮುಂದಕ್ಕೆ ಹೋಗಬೇಕಿದೆ.

ಈ ಮೂಲಕ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಪುಷ್ಪ ಚಿತ್ರದ ಮೂಲಕ ಕೆಜಿಎಫ್ ಚಿತ್ರದ ರಾಕಿಂಗ್ ಸ್ಟಾರ್ ಯಶ್‌ಗಿಂತಲೂ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗಾಗಿಯೇ ನಿರ್ದೇಶಕ ಸುಕುಮಾರ್ ಕೂಡ ಪುಷ್ಪ ಚಿತ್ರಕ್ಕೆ ಕ್ಲಾಸಿಕ್ ಮಾಸ್ ಇಮೇಜ್ ಕೊಟ್ಟಿದ್ದಾರಂತೆ.

ರಶ್ಮಿಕಾ, ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಟೈಟಲ್ ಚೇಂಜ್; ಅಭಿಮಾನಿಗಳು ಶಾಕ್? .

‘ನಮ್ಮದು ಕೆಜಿಎಫ್‌ಗಿಂತಲೂ ದೊಡ್ಡ ಸಿನಿಮಾ’ ಎಂದು ಹೇಳಿಕೊಳ್ಳುವುದು ಕಷ್ಟವಾದರೂ ಅದು ಅನಿವಾರ್ಯವಾಗಿದೆ. ಮತ್ತೊಂದು ಮೂಲದ ಪ್ರಕಾರ ಈ ಚಿತ್ರದ ಟೈಟಲ್ ಬದಲಾಯಿಸುವ ಸಾಧ್ಯತೆಗಳೂ ಇವೆ ಎನ್ನುತ್ತಿವೆ ಟಾಲಿವುಡ್ ಸಿನಿಮಾ ಮೂಲಗಳು. ಯಶಸ್ವಿ ನಿರ್ದೇಶಕ ಹಾಗೂ ಹೀರೋಗೆ  ಸಿನಿಮಾದ ಗೆಲುವು ದೊಡ್ಡ ಸವಾಲಿನ ಜತೆಗೆ ತಲೆನೋವು ಕೂಡ ಆಗಿದೆ. 

ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಬಿಗ್ ನ್ಯೂಸ್! ...

ಅಲ್ಲದೆ ಪುಷ್ಪ ಚಿತ್ರ ಕೂಡ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ರಕ್ತಚಂದನದ ಮಾಫಿಯಾ ಕತೆಯನ್ನು ಈ ಸಿನಿಮಾ ಹೇಳುತ್ತದೆ. ಜತೆಗೆ ಈ ಚಿತ್ರಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಟಾಲಿವುಡ್‌ನಲ್ಲಿ ಕೆಎಜಿಫ್ ವರ್ಸ್‌ಸ್ ಪುಷ್ಪ ಎನ್ನುವಂತಾಗಿರುವುದು ಮಾತ್ರ ಸದ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಗಳಿಗೆ 14 ವರ್ಷ, ಮೊಬೈಲ್‌ ಕೊಡಿಸಿಲ್ಲ: ಗಾಸಿಪ್‌ಗಳಿಂದ ಪುತ್ರಿಯನ್ನು ದೂರ ಇಟ್ಟ ಅಭಿಷೇಕ್-ಐಶು
52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?