
ಬಾಲಿವುಡ್ ಸ್ಮಾರ್ಟ್ ಮ್ಯಾನ್ ಕಾರ್ತಿಕ್ ಆರ್ಯನ್ ತಮ್ಮದೇ ವಿಭಿನ್ನ ಶೈಲಿಯ ನಟನೆ ಹಾಗೂ innocence ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದ್ದಕ್ಕಿದ್ದಂತೆ ಇನ್‌ಸ್ಟಾಗ್ರಾಂ ಬಯೋಡೆಟಾ ಬದಲಾಯಿಸಿರುವುದಕ್ಕೆ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ.
ಕರಣ್ ಸಿನಿಮಾದಿಂದ ಕಾರ್ತಿಕ್ ಹೊರಬೀಳಲು ಕಾರಣ ಜಾನ್ವಿನಾ?
ಹೌದು! ಕೆಲವು ದಿನಗಳ ಹಿಂದೆ ಕರಣ್ ಜೋಹಾರ್ ನಿರ್ದೇಶನದ 'ದೋಸ್ತಾನ 2' ಸಿನಿಮಾದಿಂದ ಕಾರ್ತಿಕ್ ಆರ್ಯನ್ ಹೊರ ಬಂದಿರುವುದಾಗಿ ತಿಳಿದು ಬಂದಿದೆ. ಇದಾಗ ನಂತರ ಕಾರ್ತಿಕ್ ಕೈಯಲ್ಲಿದ್ದ ಮೂರ್ನಾಲ್ಕು ಸಿನಿಮಾಗಳು ಕ್ಯಾನ್ಸಲ್ ಆಗಿವೆ. ಇಷ್ಟು ದಿನ ಕಾರ್ತಿಕ್ ಇನ್‌ಸ್ಟಾಗ್ರಾಂನಲ್ಲಿ ನಟ ಎಂದು ಬರೆದುಕೊಂಡು, ತಾವು ಅಭಿನಯಿಸಿದ ಸಿನಿಮಾಗಳ ಹೆಸರು ಅಥವಾ ಪಾತ್ರದ ಹೆಸರುಗಳನ್ನು ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದರು. ಆದರೀಗ ಅವೆಲ್ಲವನ್ನೂ ತೆಗೆದು ತಾವು ಪಡೆದ ಬಿ-ಟೆಕ್ ಎಂದು ನಮೂದಿಸಿಕೊಂಡಿದ್ದಾರೆ.
ಅಲ್ಲದೇ ಆನಂದ್ ರೈ ನಿರ್ದೇಶನದ 'ಫ್ರೆಡ್ಡಿ' ಚಿತ್ರಕ್ಕೆ ಆರ್ಯನ್ ಆಯ್ಕೆ ಆಗಿದ್ದರು. ಇದೀಗ ಈ ಚಿತ್ರವೂ ಕೈ ತಪ್ಪಿ ಹೋಗಿದೆ, ಎನ್ನಲಾಗುತ್ತಿದೆ. 'ಕಾರ್ತಿಕ್ ಸಿನಿಮಾ ಕತೆ ಕೇಳಿ ಒಪ್ಪಿಕೊಂಡಿದ್ದರು. ಆದರೆ ಸಹಿ ಮಾಡುವ ಮುನ್ನವೇ ಕಾರಣಾಂತರಗಳಿಂದ ಈ ಚಿತ್ರವೂ ಕೈ ತಪ್ಪಿದೆ,' ಎಂದು ರೈ ಹೇಳಿದ್ದಾರೆ. ಕೆಲವು ಮೂಲಗಳ ಪ್ರಕಾರ ಕಾರ್ತಿಕ್ ಆರ್ಯನ್ ಕರಣ್ ಸಿನಿಮಾದಿಂದ ಹೊರ ಬಂದ ಕಾರಣ ಇನ್ನಿತರೆ ನಿರ್ಮಾಪಕರೂ ಈ ನಟನನ್ನು ಸಿನಿಮಾದಿಂದ ಹೊರ ಹಾಕುತ್ತಿದ್ದಾರೆ ಎನ್ನಲಾಗಿದೆ. ಫ್ರೆಡ್ಡಿ ಚಿತ್ರದಲ್ಲಿ ಆರ್ಯನ್ ಬದಲು ಆಯುಷ್ಮಾನ್‌ನನ್ನು ಕರೆ ತರಲು ತಂಡ ಪ್ಲಾನ್ ಮಾಡುತ್ತಿದೆ.
ಕಳೆದ ವರ್ಷ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗ, ಬಾಲಿವುಡ್‌ನಲ್ಲಿ ನಡೆಯುವ ಇಂಥ ಮಾಫಿಯಾ ಬಗ್ಗೆ ಹಲವರು ಬಾಯಿ ಬಿಟ್ಟಿದ್ದರು. ಆದರೆ, ಕೆಲ ಕಾಲ ಎಲ್ಲವೂ ಮೌನವಾಗಿರುವಂತೆ ಕಂಡು ಬಂದಿತ್ತು. ಎಲ್ಲವೂ ಸರಿ ಹೋಗಬಹುದೆಂಬ ವಿಶ್ವಾಸದಲ್ಲಿದ್ದ ಸಿನಿ ಅಭಿಮಾನಿಗಳಿಗೆ, ಈಗ ಕಾರ್ತಿಕ್ ಅವರನ್ನು ಬಾಲಿವುಡ್ ಸೈಲೆಂಟ್ ಆಗಿ ಬಹಿಷ್ಕರಿಸುತ್ತಿರುವುದಕ್ಕೆ ಮತ್ತೊಮ್ಮೆ ಆತಂಕ ಸೃಷ್ಟಿಯಾಗಿದೆ. ವಿದ್ಯಾವಂತ, ಪ್ರತಿಭಾವಂತ ಕಲಾವಿದರಿಗೆ ಬಂದೊದಗುತ್ತಿರುವ ಸ್ಥಿತಿ ಕಂಡು ಮರುಕ ಪಡುವಂತಾಗಿದೆ. ಚೂರು ಪಾರು ವಿದ್ಯಾರ್ಹತೆ ಹೊಂದಿದ್ದು, ಕರಣ್ ಜೋಹಾರ್ ಹಾಗೂ ಸಲ್ಮಾನ್ ಖಾನ್ ಕೃಪಕಟಾಕ್ಷವಿದ್ದರೆ ಮಾತ್ರ ಬಾಲಿವುಡ್‌ನಲ್ಲಿ ಬದುಕಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.