
ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡಬೇಕು ಎಂದು ಒಮ್ಮೆ ಆದರೂ ಸ್ಟಾರ್ ನಟರು ಪ್ಲಾನ್ ಮಾಡಿರುತ್ತಾರೆ. ಹಾಗೆಯೇ ಮೆಗಾ ಸ್ಟಾರ್ ಚಿರಂಜೀವಿ ಕೂಡ ಅಂದುಕೊಂಡಿದ್ದರಂತೆ. ಆದರೆ ಅವರಿಬ್ಬರಿಗೆ ಕೂಡಿ ಬಂದಿದ್ದ ಚಿತ್ರ ಕಥೆಯನ್ನು ಪಲ್ಲವಿ ಅವರೇ ರಿಜೆಕ್ಟ್ ಮಾಡಿದ್ದಾರಂತೆ. ಇದರ ಬಗ್ಗೆ ಸ್ವತಃ ಚಿರಂಜೀವಿ ಅವರೇ ಹೇಳಿ, ಥ್ಯಾಂಕ್ಸ್ ಅಂದಿದ್ದಾರೆ.
ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಲವ್ ಸ್ಟೋರಿ ಚಿತ್ರದ ಈವೆಂಟ್‌ನಲ್ಲಿ ಮಾತನಾಡಿದ ಚಿರಂಜೀವಿ, 'ನನ್ನ ತಮ್ಮನ ಮಗ ವರುಣ್ ತೇಜ್ ಸಾಯಿ ಪಲ್ಲವಿ ಜೊತೆಗೆ ನಟಿಸಿದ್ದ. ಆ ಸಿನಿಮಾದ ಹಾಡೊಂದನ್ನು ನನಗೆ ತೋರಿಸಿದ್ದ ಆಗ ನಾನು ಅವನ ಡ್ಯಾನ್ಸ್ ನೋಡುವ ಬದಲು ಪಲ್ಲವಿ ಡ್ಯಾನ್ಸ್ ನೋಡಿ ಫಿದಾ ಆಗಿದ್ದೆ. ಅವನಿಗೂ ಅದನ್ನೇ ಹೇಳಿದೆ. ನಂತರ ನನ್ನದೊಂದು ಸಿನಿಮಾದಲ್ಲಿ ಪಲ್ಲವಿಗೆ ತಂಗಿ ಪಾತ್ರಕ್ಕೆ ಆಯ್ಕೆ ಮಾಡೋಣ ಎಂದು ಮಾತು ಬಂತು. ಸಾಯಿ ಪಲ್ಲವಿ ಇದನ್ನು ರಿಜೆಕ್ಟ್ ಮಾಡಲಿ ಎಂದುಕೊಂಡಿದ್ದೆ. ಅದು ಹಾಗೆಯೇ ಆಯಿತು. ಅದಕ್ಕೆ ನನ್ನ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ,' ಎಂದು ಚಿರಂಜೀವಿ ಮಾತನಾಡಿದ್ದಾರೆ.
'ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್. ಅವರಂತ ಪ್ರತಿಭಾವಂತ ನಟಿಯ ಜೊತೆ ಒಂದು ಹಾಡಿನಲ್ಲಿ ಹೆಜ್ಜೆ ಹಾಕಬೇಕು. ಮಾಡಿದರೆ ಒಂದು ಸೂಪರ್ ರೊಮ್ಯಾಂಟಿಕ್ ಗೀತೆಗೆ ಡ್ಯಾನ್ಸ್ ಮಾಡಬೇಕು. ತಂಗಿ ಪಾತ್ರ ಮಾಡಿದರೆ ಚೆನ್ನಾಗಿರುವುದಿಲ್ಲ,' ಎಂದು ಚಿರಂಜೀವಿ ಹಾಸ್ಯ ಮಾಡುತ್ತಾ ಮಾತನಾಡುತ್ತಾರೆ. 'ಇಲ್ಲ ಸರ್ ಅದು ಒಂದು ರಿಮೇಕ್ ಸಿನಿಮಾ ಅನ್ನುವ ಕಾರಣ ನಾನು ರಿಜೆಕ್ಟ್ ಮಾಡಿದೆ. ನಿಮ್ಮ ಜೊತೆ ನಟಿಸುವ ಆಸೆ ನನಗಿದೆ ಹಾಗೇ ಅದು ನನ್ನ ಕನಸಾಗಿದೆ,'ಎಂದು ಪಲ್ಲವಿ ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.