
ಪುರಿ ಜಗನ್ನಾಥ್ ನಿರ್ದೇಶನದ 'ಸೂಪರ್' ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ದಿನೇ ದಿನೇ ಕನ್ನಡಿಗರ ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ. ಹೆಸರು ಮಾಡಿರುವುದು ಟಾಲಿವುಡ್ - ಕಾಲಿವುಡ್‌ನಲ್ಲಿ. ಹುಟ್ಟಿದ್ದು ಮಂಗಳೂರು. ಓದಿದ್ದು ಬೆಂಗಳೂರಲ್ಲಿ. ಮಾತೃಭಾಷೆ ತುಳು. ಆದರೆ, ನಾಡ ಭಾಷೆ ಮೇಲೆ ಎಲ್ಲಿಲ್ಲದ ಪ್ರೇಮ. ಸದಾ ಕನ್ನಡದಲ್ಲಿಯೇ ಶುಭ ಕೋರಿ, ಕನ್ನಡಿಗರ ಮನ ಗೆದ್ದವರು ಅನುಷ್ಕಾ.
ಜನವರಿ 15ರಂದು ತಮ್ಮ ಅಭಿಮಾನಿಗಳಿಗೆ 'ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು' ಎಂದು ಫೋಟೋ ಹಾಕಿ, ಕನ್ನಡದಲ್ಲಿಯೇ ಶುಭ ಕೋರಿದ್ದಾರೆ. ಆಕೆಯ ಪೋಸ್ಟ್ ನೋಡುತ್ತಿದ್ದಂತೆ ಕನ್ನಡಿಗರಿಗೆ ಬೆಲ್ಲ ತಿಂದಷ್ಟೇ ಖುಷಿಯಾಗಿದೆ. ಈ ಪೋಸ್ಟ್‌ಗೆ 1 ಸಾವಿರ ಕಾಮೆಂಟ್ಸ್ ಬಂದಿವೆ. 476 ಬಾರಿ ಶೇರ್ ಆಗಿವೆ.
ಇದೇನಪ್ಪಾ ಕನ್ನಡದಲ್ಲಿ ವಿಶ್ ಮಾಡಿದ್ರೆ ಬೇರೆ ಭಾಷಾ ಅಭಿಮಾನಿಗಳ ಕಥೆ ಏನು? ಇಲ್ಲ, ಅಲ್ಲಿಯೂ ಅನುಷ್ಕಾ ಹುಷಾರಾಗಿದ್ದಾರೆ. ವಿಭಿನ್ನ ಹೆಸರುಗಳಿಂದ ಕರೆಯುವ ಸಂಕ್ರಾಂತಿಗೆ # ಬಳಸಿ ಹ್ಯಾಪಿ ಪೊಂಗಲ್, ಹ್ಯಾಪಿ ಲೋಹ್ರಿ. ಹ್ಯಾಪಿ ಉತ್ತರರಾಯಣ್, ಹ್ಯಾಪಿ ಬಿಹು ಎಂದು ವಿಶ್ ಮಾಡಿದ್ದಾರೆ. ಆ ಮೂಲಕ ಎಲ್ಲ ರಾಜ್ಯದವರನ್ನು ನೆನಪಿಸಿಕೊಂಡಿದ್ದಾರೆ ಈ ಬಾಹುಬಲಿ ನಟಿ.
ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ: ಎಷ್ಟು ಚೆಂದ ಅನುಷ್ಕಾ ಭಾಷಾ ಲಯ!
ಈ ಹಿಂದೆ ಕನ್ನಡ ರಾಜ್ಯೋತ್ಸವಕ್ಕೆ 'ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದೂ ಕ್ಷಣವನ್ನೂ ಹೀಗೆ ಮುಂದುವರಿಸೋಣ ಪ್ರಪಂಚದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು' ಎಂದು ಬರೆದು ವಿಶ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.