ಹೈದರಾಬಾದ್‌: ನಟಿ ಅನುರಾಧಾ ಆತ್ಮಹತ್ಯೆ!

Suvarna News   | Asianet News
Published : Oct 01, 2021, 12:19 PM ISTUpdated : Oct 01, 2021, 01:00 PM IST
ಹೈದರಾಬಾದ್‌: ನಟಿ ಅನುರಾಧಾ ಆತ್ಮಹತ್ಯೆ!

ಸಾರಾಂಶ

6 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಕೈ ಕೊಟ್ಟ ಎಂದು ಆತ್ಮಹತ್ಯೆ ಮಾಡಿಕೊಂಡ ಜೂನಿಯರ್ ಆರ್ಟಿಸ್ಟ್‌ ಅನುರಾಧಾ (22).   

ನಟಿ ಆಗಬೇಕೆಂದು ಕನಸು ಕಟ್ಟಿ ಬಣ್ಣದ ಜಗತ್ತಿಗೆ ಕಾಲಿಟ್ಟ ಅನುರಾಧಾ (Anuradha) ಜೂನಿಯರ್ ಆರ್ಟಿಸ್ಟ್ ಆಗಿ ಕೆಲವು ವರ್ಷಗಳ ಕಾಲ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನುರಾಧಾ ಮೂಲತಃ ಕುತುಬುಲ್ಲಾಪುರ (Quthubullapur) ಜಿಲ್ಲೆಯ ಗಾಜುಲ ರಾಮ್‌ನವರು. ಈ ನಟಿ ಅನುರಾಧಾ ಹೈದರಾಬಾದ್‌ನ ಫಿಲ್ಮ್ ನಗರ್‌ನ ಮನೆಯೊಂದರಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. 

ನಾಲ್ಕು ದಿನವಾದರೂ ಅನುರಾಧಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹಾಗೂ ಅವರು ವಾಸವಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕ ಮನೆಯವರುಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ಮತ್ತು ಕಿಟಕಿ ಒಡೆದು ನೋಡಿದಾಗ, ಅನುರಾಧಾ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಕಿರುತೆರೆ ನಟಿ ಸುಸೈಡ್‌ ಕೇಸ್‌ಗೆ ಟ್ವಿಸ್ಟ್.. ಮದುವೆಯಾಗು ಎಂದು ಕಿರುಕುಳ ಕೊಡ್ತಿದ್ದ ನಟ!

ಆತ್ಮಹತ್ಯೆಗೆ ಕಾರಣವೇನಿರಬಹುದು?
ಕೆಲವರು ಅನುರಾಧಾ ಅವರು ಅವಕಾಶ ವಂಚಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ಅಕೆಯ ಲೀವಿಂಗ್ ಇನ್ ರಿಲೇಷನ್‌ಶಿಪ್‌ (Living in relationship) ಬಗ್ಗೆ ಮಾಹಿತಿ ನೀಡಿದ್ದಾರೆ. ಸಿನಿ ಜರ್ನಿ ಆರಂಭಿಸಿದ ನಂತರ ಕಿರಣ್ (Kiran) ಎಂಬಾತನೊಂದಿಗೆ ಅನುರಾಧಾ ಪ್ರೀತಿಯಲ್ಲಿ ಬಿದ್ದರು. ಕಳೆದು ಮೂರು ತಿಂಗಳಿನಿಂದ ಇಬ್ಬರು ಗ್ಯಾನಿ ಜೈಲ್ ಸಿಂಗ್ ನಗರದಲ್ಲಿ (Giani Zail Singh Nagar) ಮನೆ ಕೂಡ ಮಾಡಿದ್ದರಂತೆ. 

ಕಳೆದ 6 ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು, ಮದುವೆ (Marriage) ಆಗುವ ನಿರ್ಧಾರ ಕೂಡ ಮಾಡಿದ್ದರಂತೆ. ಈ ನಂಬಿಕೆ ಮೇಲೆ ಇಬ್ಬjt ಒಟ್ಟಿಗೆ ಇರಲು ಕೂಡ ಪ್ಲಾನ್ ಮಾಡಿ, ಮನೆ ಖರೀಸಿದ್ದಾರೆ. ಆದರೆ ಅನುರಾಧಾಗೆ ಕೈ ಕೊಟ್ಟು ಬೇರೆ ಯುವತಿಯ ಜೊತೆ ಕಿರಣ್ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದು ಅನುರಾಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ 

ಅನುರಾಧಾ ಪೋಷಕರು ಕಿರಣ್ ವಿರುದ್ಧ ದೂರು (Complaint) ದಾಖಲಿಸಿದ್ದಾರೆ. ಕಿರಣ್‌ಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. 

ನಾಗಮಂಡಲ ನಟಿ‌ ವಿಜಯಲಕ್ಷ್ಮಿ ತಾಯಿ ನಿಧನ

ಸೆ.30ರಂದು ಕನ್ನಡದ ನಟಿ ಸವಿ ಮಾದಪ್ಪ (Savi Madappa) ಅವರೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕೈದು ಪುಟಗಳ ಡೆತ್ ನೋಟ್ (Death Note) ಬರೆದು ಬೆಂಗಳೂರಿನ ಮನೆಯೊಂದರಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಆದರೆ ಸವಿ ಮಾದಪ್ಪ ಅವರ ಸಾವಿನ ಬಗ್ಗೆ ತಂದೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಮಗಳಿಗೆ ಯಾರೋ ಟಾರ್ಚರ್ (Torture) ನೀಡಿರಬೇಕು. ಬೆಳಗ್ಗೆ ಕಾಲ್ ಮಾಡಿ ಕೊಡಗಿಗೆ (Coorg) ಬರೋದಾಗಿ ಹೇಳಿದ್ದಳು. ಬಂದು ಮೂರು ದಿನ ಮನೆಯಲ್ಲಿಯೇ ಇರ್ತೀನಿ ಅಂತಾನೂ ಹೇಳಿದಳು. ಮಗಳು ಇಂಥ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಯಾರೋ ಮಗಳಿಗೆ ಟಾರ್ಚರ್ ನೀಡಿದ್ದಾರೆ. ಮನೆಯಲ್ಲಿ ಮಗಳ ಫೋನ್ (SmartPhone) ಕಾಣಿಸುತ್ತಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ದುಡ್ಡು ಇದೆಯೋ, ಇಲ್ವೋ ನೋಡಬೇಕಿದೆ, ಎಂದು ಸವಿ ಮಾದಪ್ಪ ಅವರ ತಂದೆ ಪ್ರಭು ಮಾದಪ್ಪ ಪೊಲೀಸರಿಗೆ ನೀಡುರುವ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಹೀಗೆ ಯುವನಟಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ಜನರಲ್ಲಿ ಆಂತಕ ಸೃಷ್ಟಿಸಿದೆ. ಜೀವನದಲ್ಲಿ ಎದುರಿಸಬೇಕಾದ ದೊಡ್ಡ ಸವಾಲುಗಳಿರುತ್ತದೆ. ಸಣ್ಣ ಪುಟ್ಟ ವಿಚಾರಕ್ಕೆ ಆತ್ಮವಿಶ್ವಾಸ ಕಳೆದುಕೊಂಡು ಇಂತಹ ಕೆಟ್ಟ ನಿರ್ಧಾರಕ್ಕೆ ಒಳಗಾಗುವುದು ತಪ್ಪು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!