
ತೆಲುಗು (Tollywood) ಚಿತ್ರರಂಗದ ಜನಪ್ರಿಯ ನಟ ಗೋಪಿಚಂದ್ (Gopichand) ತಮ್ಮ 30ನೇ ಸಿನಿಮಾವನ್ನು ಕರ್ನಾಟಕದ ಮೈಸೂರಿನಲ್ಲಿ (Mysore) ಚಿತ್ರೀಕರಣ ಮಾಡುತ್ತಿದ್ದಾರೆ. ಏಪ್ರಿಲ್ 29ರಂದು ಚಿತ್ರೀಕರಣ ಮಾಡುವಾಗ ಸೆಟ್‌ನಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಾಯಕನಿಗೆ ಆಪಘಾತವಾಗಿದ್ದರಿಂದ ಎರಡು ದಿನದ ಮಟ್ಟಕ್ಕೆ ಚಿತ್ರೀಕರಣವನ್ನು ಸ್ಥಗಿತಗೊಳಿಸಿಲಾಗಿತ್ತು.
ಗೋಪಿಚಂದ್ ಅಭಿನಯಿಸುತ್ತಿರುವ 30ನೇ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ ಆದರೆ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು ಕೋಟಿಯಲ್ಲಿ ಬಂಡವಾಳ ಹಾಕಲಾಗುತ್ತಿದೆ ಎನ್ನಲಾಗಿದೆ. ಮೈಸೂರಿನಲ್ಲಿ ಅದ್ಭುತ ಸೆಟ್ ಹಾಕಲಾಗಿದ್ದು ಚಿತ್ರೀಕರಣದ ವೇಳೆ ಗೋಪಿಚಂದ್ ಅವರ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಗೋಪಿಚಂದ್ ಅವರಿಗೆ ದೊಡದಡ ಮಟ್ಟದಲ್ಲಿ ಪೆಟ್ಟಾಗಿಲ್ಲ ಹೀಗಾಗಿ ಕೇಲವ ಎರಡು ದಿನಕ್ಕೆ ಚಿತ್ರೀಕರಣ ರದ್ದು ಮಾಡಲಾಗಿದೆ.
ನಿರ್ದೇಶಕರ ಟ್ವೀಟ್:
'ನಾವು ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ವೇಳೆ ನಟ ಗೋಪಿಚಂದ್ ಅವರು ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ದೇವರ ದಯೆಯಿಂದ ಏನೂ ಆಗಿಲ್ಲ ಅವರು ಆರೋಗ್ಯವಾಗಿದ್ದಾರೆ, ಸಣ್ಣ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಸ್ನೇಹಿತರು ಮತ್ತು ಅಭಿಮಾನಿಗಳು ಗಾಬರಿ ಆಗಬಾರದು' ಎಂದು ನಿರ್ದೇಶಕ ವಂಶಿ ಶೇಖರ್ ಟ್ಟೀಟ್ ಮಾಡಿದ್ದಾರೆ.
ಹಿಂದಿ ಈಗ ರಾಷ್ಟ್ರಭಾಷೆಯಾಗಿದೆ, ಸಂಸ್ಕೃತ ಆಗಲಿ; ರಾಷ್ಟ್ರಭಾಷಾ ವಿವಾದದ ಬಗ್ಗೆ ಕಂಗನಾ ಪ್ರತಿಕ್ರಿಯೆ
ಖಳನಾಯಕನಾಗಿ (Villain) ಎಂಟ್ರಿ ಕೊಟ್ಟ ಗೋಪಿಚಂದ್ ನಾಯಕನಾದ ಮೇಲೆ ಮಾಸ್ (Mass films) ಹಾಗೂ ಆಕ್ಷನ್ (Action films) ಸಿನಿಮಾಗಳಲ್ಲಿ ಹೆಚ್ಚಿಗೆ ಅಭಿನಯಿಸುತ್ತಿದ್ದಾರೆ. ಆದರೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಫ್ಲಾಪ್ ಆಗುತ್ತಿರುವುದಿಂದ ಕೆಲವು ದಿನಗಳ ಕಾಲ ಸಿನಿಮಾಗಳಿಂದ ದೂರ ಉಳಿದುಕೊಂಡರು. ಒಳ್ಳೆ ಪ್ರಾಜೆಕ್ಟ್‌ಗಳೊಂದಿಗೆ ಈ ಮತ್ತೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅವರ ಪಕ್ಕಾ ಕಮರ್ಷಿಯಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, ಜೂನ್ ತಿಂಗಳಿನಲ್ಲಿ ಸಿನಿಮಾ ತೆರೆ ಕಾಣುತ್ತಿದೆ.
ನಟ ವಿಶಾಲ್ ಹೆಗ್ಡೆ, ಪ್ರಿಯಾ ದಂಪತಿಗೆ ಗಂಡು ಮಗು!
1979ರಲ್ಲಿ ಹುಟ್ಟಿದ ಗೋಪಿಚಂದ್ ತೆಲುಗು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸುಮಾರು 100 ಸಿನಿಮಾಗಳಲ್ಲಿ ನಟಿಸಿರುವ ಗೋಪಿ ನಾಲ್ಕೈದು ಸಿನಿಮಾಗಳಿಗೆ ಬೆಸ್ಟ್ ವಿಲನ್ ಅವಾರ್ಡ್ ಪಡೆದುಕೊಂಡಿದ್ದಾರೆ. 2013ರಲ್ಲಿ ತೆಲುಗು ನಟ ಶ್ರೀಕಾಂತ್ (Srikanth) ಕುಟುಂಬಸ್ಥೆ ರೇಶ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗೋಪಿಚಂದ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.