ಕ್ಷಮೆ ಕೋರದ ಸಲ್ಮಾನ್​ಗೆ ದುಃಸ್ವಪ್ನವಾದ ಕೃಷ್ಣಮೃಗ! ಜೀವ ಉಳಿಸಿಕೊಳ್ಳಲು 2 ಕೋಟಿಯ ಮತ್ತೊಂದು ಕಾರು ಖರೀದಿ

By Suchethana D  |  First Published Oct 19, 2024, 11:56 AM IST

 ಕ್ಷಮೆ ಕೋರುವಂತೆ ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ ಹೇಳಿದರೂ ಕ್ಷಮೆ ಕೋರದ ಸಲ್ಮಾನ್​ ಖಾನ್​ ಈಗ ಜೀವ ಉಳಿಸಿಕೊಳ್ಳಲು ಮತ್ತೊಂದು ಕಾರು ಖರೀದಿಗೆ ಮುಂದಾಗಿದ್ದಾರೆ!
 


ಬಿಷ್ಣೋಯಿ ಸಮುದಾಯದವರು ದೇವರು ಎಂದೇ ನಂಬುತ್ತಿರುವ ಕೃಷ್ಣಮೃಗವನ್ನು ಕೊಂದು, ಆ ತಪ್ಪಿಗೆ ಇದುವರೆಗೆ ಕ್ಷಮೆ ಕೋರದ ನಟ ಸಲ್ಮಾನ್​ ಖಾನ್​ಗೆ​ ಈಗ ಹೆಜ್ಜೆ ಹೆಜ್ಜೆಗೂ ಮೃತ್ಯುಭಯ  ಆವರಿಸುತ್ತಿದೆ. ಇದಾಗಲೇ ಹಲವಾರು ಬಾರಿ ಲಾರೆನ್ಸ್​ ಬಿಷ್ಣೋಯಿ ಸಮುದಾಯದವರು ನಟನಿಗೆ ಇಟ್ಟಿದ್ದ ಬೇಡಿಕೆ ಒಂದೇ. ಅದು ಅಂದು ಕೃಷ್ಣಮೃಗ ಕೊಂದ ತಪ್ಪಿಗೆ ಕ್ಷಮೆ ಕೋರಬೇಕು ಎನ್ನುವುದು. ದಶಕ ಕಳೆದರೂ ಇದುವರೆಗೂ ಸಲ್ಮಾನ್​ ಖಾನ್​ ಕ್ಷಮೆ ಕೋರಲಿಲ್ಲ. ಈ ಕ್ಷಮೆ ಎನ್ನುವ ಮಾತು ಹಂತ ಹಂತವಾಗಿ ಬೆಳೆಯುತ್ತಾ ಇಂದು ಸಲ್ಮಾನ್ ಖಾನ್​ ಆಪ್ತರು ಎನಿಸಿಕೊಂಡವರ ಜೀವಕ್ಕೆ ಮುಳ್ಳಾಗುತ್ತಿದೆ. ಇದಾಗಲೇ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮಾಡಿರುವ ಬಿಷ್ಣೋಯಿ ಗ್ಯಾಂಗ್​ನವರು, ಇದಕ್ಕೆ ಕಾರಣ ಕೂಡ ಸಲ್ಮಾನ್​ ಖಾನ್​ ಎಂದಿದ್ದಾರೆ. ಸಲ್ಮಾನ್​ ನಿಕಟವರ್ತಿಗಳಿಗೆ ಇದೇ ಶಿಕ್ಷೆಯಾಗುತ್ತದೆ ಎಂದೂ ಹೇಳಿದ್ದಾರೆ. ಇಷ್ಟು ಆಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆ ಕೋರುವಂತೆ ಸಲ್ಮಾನ್​ ಖಾನ್​ಗೆ ಒತ್ತಡ ಹೆಚ್ಚಾಗುತ್ತಿದೆ. ಆದರೆ ಜಪ್ಪಯ್ಯ ಎಂದರೂ ಅದು ಸಾಧ್ಯವಿಲ್ಲ ಎನ್ನುವಂತೆ ನಟ ನಡೆದುಕೊಳ್ಳುತ್ತಿರುವ ಕಾರಣ, ಹಲವರ ಅಸಮಾಧಾನಕ್ಕೆ ಇದು ಕಾರಣವಾಗಿದೆ. 
 
ಇದಾಗಲೇ, ಸಲ್ಮಾನ್​ ಖಾನ್​ ಬಳಿ ಬುಲೆಟ್​ ಪ್ರೂಫ್​ ಕಾರು ಇದೆ. ಆದರೆ ಮತ್ತಷ್ಟು ಸೆಕ್ಯುರಿಟಿಗಾಗಿ ಎರಡು ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಬುಲೆಟ್​ಪ್ರೂಫ್​ ಕಾರನ್ನು ಹೊಸದಾಗಿ ಈಗ ಖರೀದಿ ಮಾಡಲು ಮುಂದಾಗಿದ್ದಾರೆ ಸಲ್ಮಾನ್​. ನಿಸಾನ್​ ಎಸ್​ಯುವಿ ಕಾರು ಇದಾಗಿದೆ. ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಇದಾಗಲೇ ನಟನ  ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರದಿಂದಲೇ  ವೈ ಪ್ಲಸ್ ಭದ್ರತೆ ನೀಡಲಾಗಿದೆ.    ಸದ್ಯ ಸಲ್ಮಾನ್​ಗೆ ಮಹಾರಾಷ್ಟ್ರ ಸರ್ಕಾರ ನೀಡಿರೋ ವೈ ಪ್ಲಸ್ ಸೆಕ್ಯೂರಿಟಿ 25 ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದೆ. ಇದರಲ್ಲಿ  4 ಜನ ಎನ್.ಎಸ್​.ಜಿ ಕಮಾಂಡೋಸ್ ಇದ್ದು,  ಅತ್ಯಾಧುನಿಕ ರೈಫಲ್ ಹೊಂದಿರೋ ಇವರು ಅದೆಂಥಾ ಅಟ್ಯಾಕ್ ನಡೆದರೂ ಎದುರಿಸಿ, ರಕ್ಷಿಸಬಲ್ಲ ನಿಪುಣರು ಇದ್ದಾರೆ.  

ನಿನಗೆ ಯುದ್ಧವೇ ಬೇಕಿದ್ರೆ ಇದು ಟ್ರೇಲರ್​ ಅಷ್ಟೇ, ಇನ್ನು ಗುಂಡು ಗೋಡೆಗೆ ಬೀಳಲ್ಲ- ಜೈ ಶ್ರೀರಾಮ್​: ಲಾರೆನ್ಸ್​ ಬಿಷ್ಣೋಯಿ

Tap to resize

Latest Videos

undefined

ಇದಾಗಲೇ  ದುಬೈನಿಂದ ಆಮದು ಮಾಡಿಕೊಂಡಿರುವ ಬುಲೆಟ್​ಪ್ರೂಫ್​ ಕಾರು ಇದೆ. ಇದು ಸಾಲದು ಎನ್ನುವುದಕ್ಕೆ ಈಗ ಮತ್ತೊಂದು ಕಾರು ಖರೀದಿಸಿದ್ದಾರೆ ನಟ.  ಸಲ್ಮಾನ್ ಖಾನ್​ಗೆ ನೀಡಲಾಗೋ ವೈ ಪ್ಲಸ್ ಸೆಕ್ಯೂರಿಟಿಗೆ ತಿಂಗಳಿಗೆ ಕನಿಷ್ಠ 15 ಲಕ್ಷ ಖರ್ಚಾಗುತ್ತೆ ಎನ್ನಲಾಗಿದೆ. ಜೊತೆಗೆ ಮನೆಗೆ ನೀಡಿರೋ ಭದ್ರತಾ ದಳದ ಸಂಬಳ, ಮನೆ ಬಳಿ  ಅಳವಡಿಸರೋ ಎಐ ಸೆಕ್ಯೂರಿಟಿ ಕ್ಯಾಮರಾ.. ಎಲ್ಲಾ ಸೇರಿದ್ರೆ ವರ್ಷಕ್ಕೆ ಮೂರು ಕೋಟಿ ಸಲ್ಮಾನ್ ಭದ್ರತೆ ಖರ್ಚಾಗ್ತಾ ಇದೆಯೆಂದು ಮೂಲಗಳು ಹೇಳಿವೆ.  ಎಲ್ಲಾ ಖರ್ಚುಗಳನ್ನು ಸರ್ಕಾರ ಭರಿಸುತ್ತಿರುವುದಕ್ಕೆ ಸಾಕಷ್ಟು ಅಸಮಾಧಾನಗಳೂ ಹೊಗೆಯಾಡುತ್ತವೆ. ನಟ ಮಾಡಿಕೊಂಡಿರುವ ತಪ್ಪಿಗೆ, ಜನರ ತೆರಿಗೆ ದುಡ್ಡನ್ನು ಪೋಲು ಮಾಡುವುದು ಎಷ್ಟು ಸರಿ ಎನ್ನುವ ಮಾತುಗಳು ಕೇಳಿಬರುತ್ತಿವೆ. 

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ.  ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ. 
 

ಸಲ್ಮಾನ್ ಖಾನ್ ಕ್ರೂರ ಹಂದಿ ಎಂದಿದ್ದ ಮಾಜಿ ಲವರ್​ ಸೋಮಿಯಿಂದ ಲಾರೆನ್ಸ್​ ಬಿಷ್ಣೋಯಿಗೆ ಶಾಕಿಂಗ್ ಪತ್ರ! ಏನಿದೆ ಇದರಲ್ಲಿ?

click me!