ಕನ್ನಡದ ಚಿತ್ರರಂಗದ 'ಡಾಲಿ' ಧನಂಜಯ್ ಜೀವನದ ಮರೆಯಲಾಗದ ಘಟನೆಗಳಿವು...

Suvarna News   | Asianet News
Published : Jul 04, 2021, 04:27 PM ISTUpdated : Jul 07, 2021, 11:05 AM IST
ಕನ್ನಡದ ಚಿತ್ರರಂಗದ 'ಡಾಲಿ' ಧನಂಜಯ್ ಜೀವನದ ಮರೆಯಲಾಗದ ಘಟನೆಗಳಿವು...

ಸಾರಾಂಶ

ಕನ್ನಡದ ಭರವಸೆಯ ಯುವನಟ, ವಿಲನ್ ಪಾತ್ರಗಳಲ್ಲಿ ಖ್ಯಾತಿ ಗಳಿಸಿರುವ ಡಾಲಿ ಧನಂಜಯ, ಚಿತ್ರರಂಗಕ್ಕೆ ಬಂದ ಕಾರಣದಿಂದ ಅವರ ಜೀವನದಲ್ಲಾದ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆತ್ಮೀಯರೊಂದಿಗೆ ಮಾತನಾಡುವಾಗ ಹೇಳಿ ಕೊಂಡಿದ್ದಾರೆ.  

ಟಗರು ಫಿಲಂನಲ್ಲಿ 'ಡಾಲಿ' ಎಂಬ ವಿಚಿತ್ರ ಹೆಸರಿನ ವಿಲನ್‌ ಪಾತ್ರದಲ್ಲಿ ಖ್ಯಾತರಾದ ಕನ್ನಡದ ಯುವನಟ ಧನಂಜಯ, ಈಗ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಬೇಡಿಕೆಯ ನಟ. ಧನಂಜಯ ಅವರ ನಟನೆ ಅಲ್ಲಿನವರನ್ನು ಮಂತ್ರಮುಗ್ಧರನ್ನಾಗಿಸಿದೆ. ಖ್ಯಾತ ಹೀರೋ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಪುಷ್ಪ' ಫಿಲಂನಲ್ಲಿ ಧನಂಜಯ ಮೇನ್ ವಿಲನ್.

ಅದರಲ್ಲಿ ಧನಂಜಯ ಅವರ ಪಾತ್ರದ ಹೆಸರು ಏನು ಗೊತ್ತಾ? ಜಾಲಿ! ಕನ್ನಡದಲ್ಲಿ ಟಗರು ಫಿಲಂನಲ್ಲಿ 'ಡಾಲಿ' ಎಂಬ ಹೆಸರಿನಲ್ಲಿ ಪ್ರಖ್ಯಾತರಾಗಿರುವ ಧನಂಜಯ ಅವರಿಗೆ ತೆಲುಗಿನಲ್ಲಿ ಜಾಲಿ ಎಂಬ ಪಾತ್ರ ದೊರೆತಿರುವುದು ಒಂದು ಸೋಜಿಗ. ಈ ಜಾಲಿ, ತಿರುಪತಿಯ ಕುಖ್ಯಾತ ಕೇಡಿ ಗ್ಯಾಂಗ್ ಒಂದರ ನಾಯಕನಾಗಿದ್ದನಂತೆ. ಅಂದರೆ ಇದು ರಿಯಲ್ ಲೈಫ್‌ನಿಂದಲೇ ಎತ್ತಿಕೊಂಡ ಪಾತ್ರ. ಈ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಲು ಡಾಲಿ ಸಿದ್ಧತೆ ನಡೆಸುತ್ತಿದ್ದಾರೆ.

ಹಲವಾರು ದಿನಗಳ ಚಿತ್ರೀಕರಣವೂ ಆಗಿದೆ. ಆ ಫಿಲಂನಲ್ಲಿ ಕೇರಳದ ಖ್ಯಾತ ನಟರಲ್ಲಿ ಒಬ್ಬರಾದ ಫಹಾದ್ ಫಾಜಿಲ್‌ ಕೂಡ ನಟಿಸುತ್ತಿದ್ದು, ಅವರ ಜೊತೆ ನಟಿಸುವ ಸದವಕಾಶವನ್ನು ಡಾಲಿ ಕಾಯುತ್ತಿದ್ದಾರಂತೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಅವರು, ಎರಡು ಚಿತ್ರಗಳಲ್ಲಿ ಅದ್ಭುತ ಪರ್‌ಫಾರ್ಮೆನ್ಸ್ ನೀಡಿದ ಡಾಲಿ ಅವರ ಅಭಿನಯ ಕಂಡು ಫಿದಾ ಆಗಿ, ತಮ್ಮ ಚಿತ್ರಕ್ಕೆ ವಿಲನ್ ಆಗಲು ಇವರೇ ಬೇಕು ಎಂದು ಕರೆಸಿಕೊಂಡಿದ್ದಾರೆ. ಶೂಟಿಂಗ್‌ ವೇಳೆ ಇವರ ಪರ್‌ಫಾರ್ಮೆನ್ಸ್ ನೋಡಿ, ನೀವು ಇಲ್ಲೇ ಇರಿ ಎಂದವರೂ ಚಿತ್ರತಂಡದಲ್ಲಿ ಇದ್ದಾರಂತೆ

ತಿರಸ್ಕಾರದ ನೋವು: ಪ್ರತಿ ದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ವಿದ್ಯಾ ಬಾಲನ್ ...

ಜೀವನವೇ ಬದಲಾಯಿತು
ಡಾಲಿ ಕಲಿತದ್ದು ಇಂಜಿನಿಯರಿಂಗ್. ಇಂಜಿನಿಯರಿಂಗ್ ಮುಗಿಸಿದ ಬಳಿಕ ಇನ್‌ಫೋಸಿಸ್‌ನಲ್ಲಿ ಅವರಿಗೆ ಕೆಲಸವೂ ದೊರೆಯಿತು. ಅಲ್ಲಿ ಒಂದೆರಡು ತಿಂಗಳು ಕೆಲಸ ಮಾಡಿದರು. ಆದರೆ ರಂಗಭೂಮಿ ಹಿನ್ನೆಲೆಯಿಂಧ ಬಂದ ಅವರಿಗೆ ಅಲ್ಲಿನ ವಾತಾವರಣ ಕೃತಕ ಅನಿಸತೊಡಗಿತು. ಟೈ ಕಟ್ಟಿಕೊಂಡು, ಕೋಟು ಧರಿಸಿಕೊಂಡು ಹೋಗುವುದು, ಬೆಳಗಿನಿಂದ ಸಂಜೆಯವರೆಗೆ ಕೆಲಸ ಮಾಡುವುದು ಅಸಹನೀಯ ಅನಿಸಿತು. ಅಭಿನಯ ಕೈ ಬೀಸಿ ಕರೆಯತೊಡಗಿತು.

ಏನಾದರೂ ಸಾಧಿಸಿದರೆ ನಟನೆಯಲ್ಲೇ ಎಂದು ತೀವ್ರವಾಗಿ ಅನಿಸಿತು. ಅಂದು ಅವರು ಕೋಟು ಟೈಗಳನ್ನು ತೆಗೆದೆಸೆದು, ಮರಳಿ ರಂಗಭೂಮಿಗೆ ಬಂದರು. ಆದರೆ, ಈತ ಕೈತುಂಬ ಸಂಬಳ ತರುತ್ತಾನೆ ಎಂದು ಭಾವಿಸಿದ್ದ ಇವರನ್ನು ವರಿಸಲು ಮುಂದಾದ ಹುಡುಗಿಗೆ ಇದರಿಂದ ನಿರಾಶೆಯಾಯಿತು. ಯಾವ ನಿಶ್ಚಿತ ಆದಾಯವೂ ಇಲ್ಲದೆ ಚಿತ್ರರಂಗವನ್ನು ನಂಬಿಕೊಂಡು ಬಂದ ನಟ ತನ್ನನ್ನು ಬಾಳಿಸುತ್ತಾನೆಂದು ನಂಬುವುದಾದರೂ ಹೇಗೆ? ಸಂಬಂಧ ಮುರಿಯಿತು. ಒಂದಷ್ಟು ಕಾಲ ಆ ಪ್ರೇಮಭಗ್ನತೆ, ನಿರಾಶೆ ಕೂಪದಲ್ಲಿದ್ದ ಅವರು ಇದು ಮುಂದೆ ಟಗರು ಫಿಲಂನ ಡಾಲಿ ಪಾತ್ರದ ಹಿಂಸೆ, ಕ್ರೌರ್ಯದ ಸ್ವರೂಪದಲ್ಲಿ ವ್ಯಕ್ತವಾಯಿತು ಅಂತಾರೆ ಧನಂಜಯ.

ಮದ್ವೆಗಿಂತ ಹೆಚ್ಚು ಡಿವೋರ್ಸ್ ಸೆಲೆಬ್ರೇಟ್ ಮಾಡಬೇಕು ಎಂದ ನಿರ್ದೇಶಕ ...

ಡಾಲಿ ಅವರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಹುಟ್ಟೂರು ಅರಸೀಕೆರೆ, ಮುಂದೆ ಮೈಸೂರಿನಲ್ಲಿ ರಂಗಾಯಣ ಮುಂತಾದ ಕಡೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಪಳಗಿದವರು. ನಾಟಕಗಳಲ್ಲಿ ಇವರ ಅಭಿನಯ ಕಂಡು ಮನಸೋತ ಒಬ್ಬ ಜರ್ಮನ್ ನಿರ್ದೇಶಕರು ಇವರನ್ನು ಜರ್ಮನಿಗೂ ಕರೆದಿದ್ದರು. ಇವರೂ ಅಲ್ಲಿ ಹೋಗಿ ಅಲ್ಲಿನ ಅನೇಕ ನಾಟಕಗಳನ್ನು ನೋಡಿ, ಅಭಿನಯ ಕಲಿತು ಬಂದರು. ಇವರು ಮೈಸೂರಿಗೆ ಕಲಿಯಲು ಹೋದರು. 

ಮಾಜಿ ವಿಶ್ವಸುಂದರಿ ಕಣ್ಣು ಸರಿ ಇಲ್ಲ ಎಂದ ಫ್ಯಾನ್, ಪಿಗ್ಗಿ ಉತ್ತರವಿದು ...

ಇಂಥ ಡಾಲಿಗೆ ಇರ್ಫಾನ್ ಖಾನ್, ಫಹಾದ್ ಫಾಸಿಲ್‌ ಥರಾ ಒಳ್ಳೆಯ ನಟನಾಗಿ ಖ್ಯಾತಿ ಪಡೆಯುವ ಆಸೆ. ಆದರೆ ಹೀರೋ ಅನಿಸಿಕೊಂಡು ಜನರಿಂದ ದೂರ ಉಳಿಯುವುದು ಇಷ್ಟವಿಲ್ಲ. ತಾನು ಜನರ ನಡುವೆ ಇದ್ದಾಗಲೇ ಏನಾದರೂ ಕಲಿಯಲು ಸಾದ್ಯ ಅಂತಾರೆ ಅವರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?