
ಬ್ರಾಡ್ ಪಿಟ್
ಹಾಲಿವುಡ್ ಹೀರೋ ಬ್ರಾಡ್ ಪಿಟ್‌ಗೆ ಚೀನಾ ದೇಶದೊಳಗೆ ಪ್ರವೇಶವಿಲ್ಲ. ಅದಕ್ಕೆ ಕಾರಣ ಆತ ನಟಿಸಿದ ಸೆವೆನ್ ಇಯರ್ಸ್ ಇನ್ ಟಿಬೆಟ್ ಫಿಲಂ. ಅದರಲ್ಲಿ ದಲಾಯಿ ಲಾಮ ಅವರ ಬಾಲ್ಯದ ದಿನಗಳು ಚಿತ್ರಿತವಾಗಿವೆ. ಹಾಗೇ ಬ್ರಿಟಿಷ್ ಹೀರೋ, ದಲಾಯಿ ಲಾಮರ ಗೆಳೆತನ ಬೆಳೆಸುವ ಚಿತ್ರಣ. ಅದರಲ್ಲಿ ದಲಾಯಿ ಲಾಮ ಅವರನ್ನು ಧನಾತ್ಮಕವಾಗಿಯೂ, ಚೀನಾದ ಕಮ್ಯುನಿಸ್ಟ್ ಅಧಿಕಾರಿಗಳನ್ನು ಋಣಾತ್ಮಕವಾಗಿಯೂ ಚಿತ್ರಿಸಲಾಗಿದೆ ಎಂಬುದು ಚೀನಾದ ತಕರಾರು. ಹೀಗಾಗಿ ಬ್ರಾಡ್ ಪಿಟ್‌ಗೂ ಆ ಚಿತ್ರದ ನಿರ್ದೇಶಕನಿಗೂ ಚೀನಾದೊಳಗೆ ಪ್ರವೇಶ ನಿಷೇಧಿಸಿದೆ.
ಸಂಜಯ್ ದತ್
ಸಂಜಯ್ ದತ್ ಅವರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಹಾಗೂ ಮುಂಬಯಿ ಭಯೋತ್ಪಾದನಾ ಸ್ಫೋಟದ ಜೊತೆಗೆ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕಾಗಿ ಅವರಿಗೆ ಶಿಕ್ಷೆಯಾಗಿದೆ. ಹೀಗಾಗಿ ಅವರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದೆ. ಅವರ ವೀಸಾ ರಿನೀವಲ್ ಆಗುತ್ತಿಲ್ಲ.
ಜೊತೆಯಾಗಿ 10 ವರ್ಷ: ಸನ್ನಿಗೆ ಪತಿಯಿಂದ ಸಿಕ್ತು ಡೈಮಂಡ್ ಗಿಫ್ಟ್ ...
ಮಿಯಾ ಕಲೀಫಾ
ಮಿಯಾ ಕಲೀಫಾ ಎಂಬ ಪೋರ್ನ್ ತಾರೆ, ತನ್ನ ಹುಟ್ಟೂರು ಲೆಬನಾನ್ ಅನ್ನು ಪ್ರವೇಶಿಸುವಂತೆಯೇ ಇಲ್ಲ. ಲೆಬನಾನ್ ಮಾತ್ರವಲ್ಲ, ಸಿರಿಯಾ, ಇರಾನ್, ಇರಾಕ್ ಮುಂತಾದ ಮಧ್ಯಪ್ರಾಚ್ಯದ ಯಾವ ದೇಶಗಳಿಗೂ, ಪ್ಯಾಲೆಸ್ತೀನ್ ಮೊದಲಾದ ಅರಬ್ ದೇಶಗಳಿಗೂ ಕಾಲಿಡುವಂತೆಯೇ ಇಲ್ಲ. ಯಾಕೆಂದರೆ ಐಸಿಸ್ ಉಗ್ರರು ಆಕೆಯ ತಲೆಗೆ ಕೋಟ್ಯಂತರ ಬೆಲೆ ಕಟ್ಟಿದ್ದಾರೆ. ಆಕೆ ಅಲ್ಲಿಗೆ ಕಾಲಿಟ್ಟರೆ ಅವರು ಕತ್ತರಿಸಿಯೇ ಸಿದ್ಧ. ಅದಕ್ಕೆ ಕಾರಣ- ಆಕೆ ಪೋರ್ನ್ ವಿಡಿಯೋಗಳಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡಿರುವುದು. ಇದು ಅಲ್ಲಿ ಮೂಲಭೂತವಾದಿಗಳನ್ನು ಕೆರಳಿಸಿದೆ.
ರಿಚರ್ಡ್ ಗೇರೆ
ರಿಚರ್ಡ್ ಗೇರೆ ಓಪನ್ ಆಗಿ ತಾನು ಟಿಬೆಟಿಯನ್ ಬುದ್ಧಿಸ್ಟ್ ಎಂದು ಹೇಳಿಕೊಳ್ಳುತ್ತಾರೆ. ಅವರು ಟಿಬೆಟ್‌ನ ಸ್ವಾತಂತ್ರ್ಯ ಹೋರಾಟದ ಪರವಾಗಿ ಮಾತನಾಡುತ್ತಾರೆ, ಅದಕ್ಕೆ ದೇಣಿಗೆ ತರುತ್ತಾರೆ, ಪಾಶ್ಚಾತ್ಯ ದೇಶಗಳಲ್ಲಿ ದಲಾಯಿ ಲಾಮಾ ಪರವಾಗಿ ಅಭಿಪ್ರಾಯ ಮೂಡಿಸುವ ಕೆಲಸಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ ಚೀನಾಕ್ಕೆ ಅವರನ್ನು ಕಂಡರೆ ಕಣ್ಣು ಕಿಸುರು. ನೇಪಾಳ ಮುಂತಾದ ಬುದ್ಧಿಸ್ಟ್ ದೇಶಗಳಲ್ಲಿ ಮುಕ್ತವಾಗಿ ಸಂಚರಿಸುವ ರಿಚರ್ಡ್, ಆಗಾಗ ಲಾಮಾ ಅವರು ಇರುವ ಧರ್ಮಶಾಲಾಗೂ ಬಂದು ಹೋಗುತ್ತಾರೆ. ಹೀಗಾಗಿ ಅವರಿಗೆ ಚೀನಾ ಪ್ರವೇಶ ನಿಷೇಧ.
ಬಾಲಿವುಡ್‌ನಲ್ಲಿ ಮುನ್ನೇರಲು ರಶ್ಮಿಕಾಗೆ ಗೈಡ್ ಮಾಡಿದ ಹ್ಯಾಂಡ್ಸಂ ಹೀರೋ..! ...
ಶರೋನ್ ಸ್ಟೋನ್
ಈಕೆ ಅನೇಕ ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ ಹೆಸರಾಂತ ನಟಿ. ಇವಳನ್ನು ಚೀನಾ ಬ್ಯಾನ್ ಮಾಡಿದೆ. ಅದಕ್ಕೆ ಕಾರಣ ಆಕೆ ಚೀನಾ ಸರಕಾರದ ಬಗ್ಗೆ ಮಾಡಿದ ಟೀಕೆ. ಅಲ್ಲೂ ಆಕೆ ಟಿಬೆಟ್ ಅನ್ನು ಚೀನಾ ಕ್ರೂರವಾಗಿ ನಡೆಸಿಕೊಳ್ಳುತ್ತಿರುವುದನ್ನು ಟೀಕಿಸಿದ್ದಳು. ಇದರಿಂದ ಚೀನಾ ಕೆರಳಿತ್ತು.
ಪ್ಯಾರಿಸ್ ಹಿಲ್ಟನ್
ಈಕೆ ಹಾಲಿವುಡ್ ನಟಿ ಮತ್ತು ಗಾಯಕಿ. ಇವಳನ್ನು ಜಪಾನ್ ತನ್ನ ದೇಶದೊಳಗೆ ಬರದಂತೆ ನಿಷೇದಿಸಿದೆ. ಕಾರಣ ಆಕೆಯ ಮಾದಕ ವಸ್ತು ಸೇವನೆಯಲ್ಲಿ ಆರೋಪಿಯಾಗಿರುವುದು.
ಲೇಡಿ ಗಾಗಾ
ಈಕೆ ಇಂಡೋನೇಷ್ಯಾದ ಒಳಗೆ ಹೋಗುವಂತಿಲ್ಲ. ಪ್ರಚೋದನಕಾರಿಯಾಗಿ ಡ್ರೆಸ್ ಧರಿಸುತ್ತಾಳೆ ಎಂಬ ಕಾರಣಕ್ಕೆ, ಈಕೆಯನ್ನು ಸೈತಾನನ ಕಾರುಭಾರಿ ಎಂದು ಅಲ್ಲಿನ ಮತೀಯವಾದಿ ಸಂಘಟನೆ ದೂರಿದ್ದು, ಬಂದರೆ ಕೊಲ್ಲುವುದಾಗಿ ಎಚ್ಚರಿಸಿದೆ.
ಕಿತ್ತಾಡ್ತಾ ಇದ್ದೋರು ಫ್ರೆಂಡ್ಸ್ ಆದ್ರಾ ? ಕಂಗನಾಳನ್ನು ಹೊಗಳಿದ ತಾಪ್ಸಿ ...
ಕೇಟಿ ಪೆರ್ರಿ
ಹಾಲಿವುಡ್‌ನ ಖ್ಯಾತ ಗಾಯಕಿಯಾದ ಈಕೆಯನ್ನು ಚೀನಾ ತನ್ನೊಳಗೆ ಬರದಂತೆ ನಿಷೇಧಿಸಿದೆ. ಅದಕ್ಕೆ ಕಾರಣ, ಹಿಂದೊಮ್ಮೆ ಆಕೆ ದೊಡ್ಡ ಕಾರ್ಯಕ್ರಮವೊಂದರಲ್ಲಿ ಸನ್‌ಫ್ಲವರ್ ಹೂಗಳ ವಿನ್ಯಾಸವಿದ್ದ ಹಳದಿ ಬಣ್ಣದ ಉಡುಗೆ ತೊಟ್ಟಿದ್ದು. ಸನ್‌ಫ್ಲವರ್ ಹೂಗಳು ಚೀನಾವಿರೋಧಿ- ಟಿಬೆಟ್ ಪರ ಹೋರಾಟಗಾರರ ಸಂಕೇತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.