ಈ 5 ಕೊರಿಯನ್ ಸಸ್ಪೆನ್ಸ್ , ಹಾರರ್ ಸಿನಿಮಾ ನೋಡ್ತಿದ್ರೆ ಪಕ್ಕದವರಿಗೂ ನಿಮ್ಮ ಹಾರ್ಟ್‌ಬೀಟ್ ಕೇಳುತ್ತೆ

Published : Apr 12, 2025, 12:56 PM IST
ಈ 5 ಕೊರಿಯನ್ ಸಸ್ಪೆನ್ಸ್ , ಹಾರರ್ ಸಿನಿಮಾ ನೋಡ್ತಿದ್ರೆ ಪಕ್ಕದವರಿಗೂ ನಿಮ್ಮ ಹಾರ್ಟ್‌ಬೀಟ್ ಕೇಳುತ್ತೆ

ಸಾರಾಂಶ

Must Watch Korean Movies: ಭಾರತದಲ್ಲಿ ಕೊರಿಯನ್ ಸಿನಿಮಾಗಳ ಕ್ರೇಜ್ ಹೆಚ್ಚಾಗಿದೆ, ಅದರಲ್ಲೂ ಹಾರರ್ ಸಿನಿಮಾಗಳಿಗೆ ಹೆಚ್ಚು ಬೇಡಿಕೆಯಿದೆ. ಇಲ್ಲಿವೆ ನಿಮ್ಮನ್ನು ಬೆಚ್ಚಿ ಬೀಳಿಸುವಂತಹ 5 ಸಸ್ಪೆನ್ಸ್ ಮತ್ತು ಹಾರರ್ ಸಿನಿಮಾಗಳ ಪಟ್ಟಿ.

Korean Movies: ಇಂದು ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡಲಾಗುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದ್ರೆ, ಅದು ಕೆಲವೇ ದಿನಗಳಲ್ಲಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಸಿಗುತ್ತದೆ. ಅದರಲ್ಲಿಯೋ ಕೊರಿಯನ್ ಡ್ರಾಮಾ, ವೆಬ್ ಸಿರೀಸ್ ವೀಕ್ಷಣೆ ಮಾಡೋರು ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಈ ಸಿನಿಮಾಗಗಳ ಮೇಲಿನ ವ್ಯಾಮೋಹದಿಂದಾತಗಿ ಜನರೇಷನ್ ಝಡ್ ಸಮುದಾಯ ಕೊರಿಯನ್ ಭಾಷೆ ಕಲಿಯಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೊರಿಯನ್ ತಿಳಿಯದವರು, ಇಂಗ್ಲಿಷ್ ಅಥವಾ ಹಿಂದಿ ಭಾಷೆಗೆ ಡಬ್ ಮಾಡ್ಕೊಂಡು ಆನಂದಿಸುತ್ತಾರೆ. ಅದರಲ್ಲಿಯೂ ಕೊರಿಯನ್ ಹಾರರ್ ಸಿನಿಮಾಗಳು ಹೆಚ್ಚು ಟ್ರೆಂಡಿಂಗ್ ನಲ್ಲಿರುತ್ತವೆ. ನೀವು ಕೊರಿಯನ್ ಸಿನಿಮಾಗಳ ಪ್ರಿಯರಾಗಿದ್ದರೆ ತಪ್ಪದೇ ಈ ಐದು ಹಾರರ್ ಆಂಡ್ ಸಸ್ಪೆನ್ಸ್ ಸಿನಿಮಾಗಳನ್ನು ವೀಕ್ಷಿಸಿ. 

ಕೊರಿಯನ್ ಸಿನಿಮಾಗಳ ಕಥೆ ಹೇಳುವ ಶೈಲಿ, ಛಾಯಾಗ್ರಹಣ, ಹಿನ್ನಲೆ ಸಂಗೀತ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿಯೂ ಅಚ್ಚುಕಟ್ಟತೆಗೆ ಇವರು ಹೆಸರುವಾಸಿ.  . ವಿಶೇಷವಾಗಿ ಕೊರಿಯನ್ ಭಾಷೆಯ ಸಸ್ಪೆನ್ಸ್, ಥ್ರಿಲ್ಲರ್‌ ಮತ್ತು ಹಾರರ್ ಸಿನಿಮಾಗಳು ನೋಡುಗರಿಗೆ ಪಕ್ಕದಲ್ಲಿದ್ದವರ ಹೃದಯಬಡಿತ ಕೇಳುವಂತೆ ಮಾಡುವ ಶಕ್ತಿಯನ್ನು ಹೊಂದಿವೆ. ಈ ಚಿತ್ರಗಳನ್ನು ರಾತ್ರಿಯಿಡೀ ನಿಮ್ಮನ್ನು ಎಚ್ಚರಿಸುವ ತಾಕತ್ತು ಹೊಂದಿವೆ. 

1. ಎ ಟೇಲ್ ಆಫ್ ಟು ಸಿಸ್ಟರ್ (A Tale of Two Sisters)
ಇದು ಇಬ್ಬರು ಸೋದರಿಯರ ಕಥೆಯಾಗಿದೆ. ಮೆಂಟಲ್ ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್ ಆಗುವ   ಸು-ಮಿ ತನ್ನ ಸಹೋದರಿ ಸು-ಯೆಯೋನ್‌ ಜೊತೆಯಲ್ಲ ತಮ್ಮ ಹಳೆಯ ಮನೆಗೆ ಬಂದು ನೆಲಸುತ್ತಾರೆ. ಸು-ಮಿ ಮತ್ತು  ಸು-ಯೆಯೋನ್‌ ಇಲ್ಲಿಗೆ ಬಂದ ನಂತರ ಮನೆಯಲ್ಲಿ ಭಯಾನಕ ಘಟನೆಗಳು ನಡೆಯಲು ಶುರುವಾಗುತ್ತವೆ. ಇದೊಂದು ಸೈಕಾಜಿಕಲ್ ಹಾರರ್ ಮತ್ತು ಫ್ಯಾಮಿಲಿ ಸೀಕ್ರೆಟ್‌ಗೆ ಸಂಬಂಧಿಸಿದ ಭಯಪಡಿಸುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಎ ಟೇಲ್ ಆಫ್ ಟು ಸಿಸ್ಟರ್ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಿಸಬಹುದು.
 
2. ಐ ಸಾ ದಿ ಡೆವಿಲ್  (I Saw The Devil)
ಅಪಾಯಕಾರಿ ಸೀರಿಯಲ್ ಕಿಲ್ಲರ್ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸೀಕ್ರೆಟ್ ಏಜೆಂಟ್‌ನೊಬ್ಬನ ಪ್ರೇಯಸಿಯನ್ನು ಈ ಸೀರಿಯಲ್ ಕಿಲ್ಲರ್ ಕೊಲೆ ಮಾಡುತ್ತಾನೆ. ತನ್ನ ಪ್ರೇಯಸಿಯ ಪ್ರಾಣ ತೆಗೆದ ಸೀರಿಯಲ್ ಕಿಲ್ಲರ್‌ನನ್ನು ಹಿಡಿಯಲು ಏಜೆಂಟ್ ಮುಂದಾಗುತ್ತಾನೆ. ಇದು ಕೇವಲ ಸೇಡು ತೀರಿಸಿಕೊಳ್ಳುವ ಕಥೆಯಾಗಿಲ್ಲ, ಬದಲಾಗಿ ಇದು ಕ್ರೌರ್ಯ ಮತ್ತು ಸೇಡಿನ ಮಿತಿಗಳನ್ನು ಪರೀಕ್ಷಿಸುವ ಥ್ರಿಲ್ಲರ್ ಆಗಿದೆ. ಈ ಸಿನಿಮಾವನ್ನು ನೀವು ಜಿಯೋ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. 

3. ಮೆಮೊರೀಸ್ ಆಫ್ ಮರ್ಡರ್ (Memories of Murder)
ಇದು 1986ರ ನೈಜ ಘಟನೆಯಾಧರಿತ ಕಥೆಯನ್ನು ಹೊಂದಿದ್ದು, ದಕ್ಷಿಣ ಕೊರಿಯಾದ ಹಳ್ಳಿಯೊಂದರಲ್ಲಿ ಕೆಲ ಯುವತಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತದೆ. ಈ ಪ್ರಕರಣದ ತನಿಖೆಯನ್ನು ಇಬ್ಬರು ಪೊಲೀಸರು ಜಂಟಿಯಾಗಿ ನಡೆಸುತ್ತಾರೆ. ಆದ್ರೆ ಇಬ್ಬರಿಗೂ ಯಾವುದೇ ಸುಳಿವು ಸಿಗಲ್ಲ. ಆದ್ರೆ ಚಿತ್ರದಲ್ಲಿ ರೋಚಕ ತಿರುವುಗಳು ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತವೆ. ಮೆಮೊರೀಸ್ ಆಫ್ ಮರ್ಡರ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. 

ಇದನ್ನೂ ಓದಿ: ಹಾರರ್ ಮೂವಿ ಲವರ್ಸ್‌ಗೆ ಇದು ಬೆಸ್ಟ್ ಸಿನಿಮಾ; ಇದನ್ನ ನೋಡೋಕೆ ಸ್ವಲ್ಪ ಧೈರ್ಯವೂ ಬೇಕು!

4. ಓಲ್ಡ್ ಬಾಯ್ (Oldboy)
ಓಹ್ ಡೇ-ಸು ಎಂಬಾತ ಸುಮಾರು 15 ವರ್ಷಗಳ ಕಾಲ ಅಜ್ಞಾತಸ್ಥಳವೊಂದರಲ್ಲಿ ಬಂಧಿತನಾಗಿರುತ್ತಾನೆ. ಅಜ್ಞಾತಸ್ಥಳದಿಂದ ಹೊರಬಂದಾಗ ಓಹ್ ಡೇ-ಸುಗೆ ತನ್ನ ಅಪಹರಣಕಾರರನ್ನು ಪತ್ತೆ ಮಾಡಲು ಮತ್ತು ಸೇಡು ತೀರಿಸಿಕೊಳ್ಳಲು 5 ದಿನದ ಅವಕಾಶ ನೀಡಲಾಗುತ್ತದೆ. ಈ ಐದು ದಿನಗಳು ಓಹ್ ಡೇ-ಸು ಜೀವನಲ್ಲಿ ಹೊಸ ಹೊಸ ತಿರುವುಗಳನ್ನು ನೀಡುತ್ತದೆ. ಓಹ್ ಡೇ-ಸು ಸೇಡು ತೀರಿಸಿಕೊಳ್ಳುತ್ತಾನಾ ಎಂಬುವುದೇ ಸಸ್ಪೆನ್ಸ್. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದ್ದು, ಇಲ್ಲಿಂದ ವೀಕ್ಷಿಸಬಹುದಾಗಿದೆ. 

5. ದಿ ಚೇಸರ್ (The Chaser)
ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ವೇಶ್ಯಾವಾಟಿಕೆ ನಡೆಸುತ್ತಿರುತ್ತಾನೆ. ತನ್ನ ಮನೆಯಿಂದ ದಿಢೀರ್ ಕಾಣೆಯಾಗುವ ಯುವತಿಯನ್ನು ಹುಡುಕಲು ಈ ಮಾಜಿ ಪೊಲೀಸ್ ಅಧಿಕಾರಿ ಮುಂದಾಗುತ್ತಾನೆ. ಈ ವೇಳೆ ಸೀರಿಯಲ್ ಕಿಲ್ಲರ್ ಒಬ್ಬ ಮಾಜಿ ಪೊಲೀಸ್ ಅಧಿಕಾರಿಗೆ ಎದುರಾಗುತ್ತಾನೆ. ಮುಂದೆ ಇವರಿಬ್ಬರ ನಡುವೆ ಏನಾಗುತ್ತೆ ಅನ್ನೋದು ಚಿತ್ರದ ಕಥೆ. ಈ ಸಿನಿಮಾವನ್ನು ನೀವು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ವೀಕ್ಷಿಸಬಹುದು. 

ಇದನ್ನೂ ಓದಿ: ವಿಶ್ವದ ನಂಬರ್ 1 ಶಾಪಗ್ರಸ್ತ ಹಾರರ್ ಸಿನಿಮಾ; ಶೂಟಿಂಗ್‌ನಲ್ಲಿಯೇ 20 ಜನರ ಸಾವು? ಥಿಯೇಟರ್‌ನಲ್ಲಿ ರಕ್ತದ ವಾಂತಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!