Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪ್ರಾರಂಭ: ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ 'ಆರ್​ಆರ್​ಆರ್' ಟೀಂ

By Govindaraj S  |  First Published Mar 13, 2023, 6:14 AM IST

ಪ್ರತಿಷ್ಠಿತ ಆಸ್ಕರ್​ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪ್ರಾರಂಭವಾಗಿದೆ. ‘ಆರ್​ಆರ್​ಆರ್​’ ಮತ್ತು ತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಚಿತ್ರದ ನಿರ್ದೇಶಕ ಎಸ್​.ಎಸ್​.ರಾಜಮೌಳಿ, ನಟ ಜೂ.ಎನ್​ಟಿಆರ್, ರಾಮ್ ಚರಣ್​, ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. 


ಪ್ರತಿಷ್ಠಿತ ಆಸ್ಕರ್​ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪ್ರಾರಂಭವಾಗಿದೆ. ‘ಆರ್​ಆರ್​ಆರ್​’ ಮತ್ತು ತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಚಿತ್ರದ ನಿರ್ದೇಶಕ ಎಸ್​.ಎಸ್​.ರಾಜಮೌಳಿ, ನಟ ಜೂ.ಎನ್​ಟಿಆರ್, ರಾಮ್ ಚರಣ್​, ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು, ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 

ಆಸ್ಕರ್​ ಕಾರ್ಯಕ್ರಮವನ್ನು ನೋಡಲು ಅವಕಾಶವಿದ್ದು, ಹುಲು ಲೈವ್ ಟಿವಿನಲ್ಲಿ ಇದನ್ನು ನೋಡಬಹುದು. ಜೊತೆಗೆ ಯೂಟ್ಯೂಬ್‌ನಲ್ಲೂ  ಉಚಿತವಾಗಿ ವೀಕ್ಷಿಸಬಹುದು. ಎಟಿ ಆ್ಯಂಡ್ ಟಿ ಟಿವಿ ಹಾಗೂ ಫುಬೋ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಇದೆ. ಎಬಿಸಿ ವೆಬ್​ಸೈಟ್​ನಲ್ಲಿ ಆಸ್ಕರ್ ಕಾರ್ಯಕ್ರಮ ಉಚಿತವಾಗಿ ವೀಕ್ಷಿಸಬಹುದಾಗಿದೆ.

Tap to resize

Latest Videos

ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಭಾರತೀಯರಿಗೂ ವಿಶೇಷವಾಗಿದೆ. ಈ ಬಾರಿ ತೆಲುಗಿನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ ಗೊಂಡಿದೆ. ಹಾಗಾಗಿ ಈ ಬಾರಿ ಭಾರತಕ್ಕೆ ಒಂದು ಆಸ್ಕರ್ ಪಕ್ಕಾ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಹಾಗಾಗಿ ಈ ಬಾರಿ ತುಂಬಾ ವಿಶೇಷವಾಗಿದೆ. ಈ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬಹಿರಂಗವಾಗಿದೆ.

Oscars 2023: ಆಸ್ಕರ್‌ ಪ್ರಶಸ್ತಿಗೆ ಕ್ಷಣಗಣನೆ: ಭಾರತದ ಮೂರು ಚಿತ್ರಗಳು ಪ್ರಶಸ್ತಿಯ ರೇಸ್‌ನಲ್ಲಿ

ಆಸ್ಕರ್ 2023 ಸಮಾರಂಭಕ್ಕೆ ಬಾಲಿವುಡ್ ಸ್ಟಾರ್  ದೀಪಿಕಾ ಪಡುಕೋಣೆ ಎಂಟ್ರಿ ಕೊಡುತ್ತಿದ್ದಾರೆ. ಆಸ್ಕರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ದೀಪಿಕಾ ಕೂಡ ಒಬ್ಬರಾಗಿದ್ದಾರೆ. ಅಷ್ಟಕ್ಕೂ ದೀಪಿಕಾ ಯಾಕೆ ಆಸ್ಕರ್ ವೇದಿಕೆಯಲ್ಲಿ ಅಂತೀರಾ? ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ದೀಪಿಕಾ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಹಾಲಿವುಡ್‌ನ ಖ್ಯಾತ ಕಲಾವಿದರ ಜೊತೆ ಬಾಲಿವುಡ್ ಸ್ಟಾರ್ ಕೂಡ ಒಬ್ಬರಾಗಿರುವುದು ವಿಶೇಷವಾಗಿದೆ. ಡ್ವೇನ್ ಜಾನ್ಸನ್, ಎಮಿಲಿ ಬ್ಲಂಟ್, ಮೈಕೆಲ್ ಬಿ. ಜೋರ್ಡಾನ್ ಸೇರಿದಂತೆ ಇನ್ನು ಅನೇಕರ ಜೊತೆಗೆ ದೀಪಿಕಾ ಕೂಡ ಇರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. 

ಸಾಕ್ಷ್ಯಚಿತ್ರ ವಿಭಾಗದಲ್ಲಿ ಶೌನಕ್‌ ಸೇನ್‌ ಅವರ ‘ಆಲ್‌ ದ ಬ್ರೀದ್ಸ್‌’ ನಾಮನಿರ್ದೇಶನಗೊಂಡಿದ್ದು, ಇದು 2022ರಲ್ಲಿ ‘ವರ್ಲ್ಡ್‌ ಸಿನಿಮಾ ಗ್ರಾಂಡ್‌ ಜ್ಯೂರಿ ಪ್ರೈಸ್‌’ ಮತ್ತು ‘ಗೋಲ್ಡನ್‌ ಐ’ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇನ್ನು ಕಾರ್ತಿಕಿ ಗೋನ್ಸಾಲ್ವೇಸ್‌ ಅವರ ‘ದ ಎಲಿಫೆಂಟ್‌ ವಿಸ್ಪರ್ಸ್‌’ ಸಹ ಕಿರು ಅವಧಿಯ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ.

click me!