ಡಾನ್ಸ್​ನಲ್ಲಿ Shilpa Shettyಯನ್ನೇ ಸುಸ್ತು ಮಾಡಿದ ಪುಟಾಣಿ: ಸೋಲೊಪ್ಪಿಕೊಂಡ ನಟಿ-ವಿಡಿಯೋ ವೈರಲ್​

Published : Oct 18, 2025, 05:48 PM IST
Shilpa Shetty

ಸಾರಾಂಶ

ಸೂಪರ್ ಡ್ಯಾನ್ಸರ್ ಶೋನಲ್ಲಿ ಪುಟಾಣಿ ಬಾಲಕಿಯೊಬ್ಬಳ ಡಾನ್ಸ್‌ಗೆ ಶಿಲ್ಪಾ ಶೆಟ್ಟಿ ಸೋಲೊಪ್ಪಿಕೊಂಡಿದ್ದಾರೆ. ಮತ್ತೊಂದೆಡೆ, ಶಿಲ್ಪಾ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಹೆಸರು ಕೂಡ ಉಲ್ಲೇಖವಾಗಿದೆ.

ಮಂಗಳೂರಿನ ಚೆಲುವೆ ಶಿಲ್ಪಾ ಶೆಟ್ಟಿಗೆ (Shilpa Shetty) ವಯಸ್ಸು 50 ಆದರೂ ಇಂದಿಗೂ 20ರ ಹರೆಯದವರಂತೆ ಕಾಣಿಸುವುದು ಮಾತ್ರವಲ್ಲದೇ ಅಷ್ಟೇ ಎನರ್ಜಿಯನ್ನೂ ಇಟ್ಟುಕೊಂಡಿದ್ದಾರೆ. ಯೋಗ, ಧ್ಯಾನ, ಡಯೆಟ್​ ಎಲ್ಲವುಗಳಿಂದ ತಮ್ಮ ತೂಕವನ್ನು ನಿಯಂತ್ರಿಸುವ ಮೂಲಕ ಆರೋಗ್ಯವಂತೆಯೂ ಆಗಿರೋ ಶಿಲ್ಪಾ ಶೆಟ್ಟಿಯ ನೃತ್ಯಕ್ಕೆ ಮೋಡಿಯಾಗದವರೇ ಇಲ್ಲ. ಈಕೆ ಭರತನಾಟ್ಯ ಕಲಾವಿದೆ ಕೂಡ ಹೌದು. ಮಾತ್ರವಲ್ಲದೇ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ನಟಿಯೀಕೆ. ನಟಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ಈಕೆ ಫೇಮಸ್​. ರೂಪದರ್ಶಿಯೂ ಹೌದು ಜೊತೆಗೆ ಬ್ರಿಟಿಷ್ ರಿಯಾಲಿಟಿ ಟೆಲಿವಿಷನ್ ಸರಣಿ ಬಿಗ್ ಬ್ರದರ್ 5 ವಿಜೇತೆ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.

ನಟಿಗೆ ಠಕ್ಕರ್​ ಕೊಟ್ಟ ಬಾಲಕಿ

ಇಂಥ ನಟಿಗೆ ಈಗ ಪುಟ್ಟ ಬಾಲಕಿ ಠಕ್ಕರ್​ ಕೊಟ್ಟಿದ್ದಾಳೆ. ಡಾನ್ಸ್​ನಲ್ಲಿ ನಟಿಯನ್ನೇ ಸೋಲಿಸಿದ್ದಾಳೆ. ಸೋನಿ ಟಿವಿಯಲ್ಲಿ ಪ್ರಸಾರ ಆಗುವ Super Dancer Chapter 5ನಲ್ಲಿ ಬಾಲಕಿಯೊಬ್ಬಳ ಜೊತೆ ಶಿಲ್ಪಾ ಶೆಟ್ಟಿ ಡಾನ್ಸ್​ ಮಾಡಿದ್ದಾರೆ. ಶಿಲ್ಪಾ ಡಾನ್ಸ್​ ಮಾಡಿದ ಮೇಲೆ ಹೇಳುವುದೇ ಬೇಡ. ಅಲ್ಲಿ ಮೋಡಿ ಇದ್ದೇ ಇರುತ್ತದೆ. ಆದರೆ, ಈ ಪುಟಾಣಿ ಕೂಡ ಶಿಲ್ಪಾ ಶೆಟ್ಟಿಗೆ ಕಮ್ಮಿ ಇಲ್ಲದಂತೆ ನರ್ತಿಸಿದ್ದಾಳೆ. ವ್ಹಾರೆವ್ಹಾ ಎನ್ನುವ ಎಕ್ಸ್​ಪ್ರೆಷನ್​ ಕೂಡ ಕೊಟ್ಟಿದ್ದಾಳೆ. ನೃತ್ಯದ ಕೊನೆಯಲ್ಲಿ ಅತಿ ವೇಗದಲ್ಲಿ ಗಿರಿಗಿಟ್ಟಲೆ ಹೊಡೆದಿದ್ದಾಳೆ ಬಾಲಕಿ. ಇದನ್ನು ನೋಡಿ ಶಿಲ್ಪಾ ಶೆಟ್ಟಿ ಸುಸ್ತಾಗಿ ಹೋಗಿ, ನನ್ನಿಂದ ಸಾಧ್ಯವಿಲ್ಲವಪ್ಪಾ ಎಂದು ತಪ್ಪು ಒಪ್ಪಿಕೊಂಡಿದ್ದಾರೆ. ಬಾಲಕಿಯ ವೇಗಕ್ಕೆ ಒಂದು ಹಂತದಲ್ಲಿ ಖುದ್ದು ಶಿಲ್ಪಾ ಕೂಡ ಹೆದರಿದ್ದು, ಎಲ್ಲಿ ಆಕೆ ಬಿದ್ದುಬಿಡುತ್ತಾಳೋ ಎಂದು ಭಯಪಟ್ಟು ಹಿಡಿದುಕೊಂಡರು. ಇದರ ವಿಡಿಯೋ ಈಗ ವೈರಲ್​ ಆಗಿದೆ.

ಕಾನೂನಿನ ತೂಗುಗತ್ತಿ

ಇದು ಡಾನ್ಸ್​ ವಿಷ್ಯವಾದರೆ, ಇನ್ನು ಸದ್ಯ ಶಿಲ್ಪಾ ಶೆಟ್ಟಿಯ ಮೇಲೆ ಕಾನೂನಿನ ತೂಗುಗತ್ತಿ ನೇತಾಡುತ್ತಾ ಇದೆ. ಏಕೆಂದರೆ, ಶಿಲ್ಪಾ ಶೆಟ್ಟಿ ಬಾಳಲ್ಲಿ ಮತ್ತೊಮ್ಮೆ ಬರಸಿಡಿಲು ಬಡಿದಿದೆ. ಕೆಲ ವರ್ಷಗಳ ಹಿಂದಷ್ಟೇ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ನೀಲಿ ಚಿತ್ರದ ಕೇಸ್​ನಲ್ಲಿ ಸಿಲುಕಿದ್ದರು. ಈ ಕೇಸ್​ ವಿಚಾರಣೆ ಇನ್ನೂ ಮುಗಿದಿಲ್ಲ. ಇದರ ನಡುವೆಯೇ ಮತ್ತೊಂದು ಕೇಸ್​ ಇವರ ವಿರುದ್ಧ ದಾಖಲಾಗಿದೆ. ಅದು, ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ ಈ ಜೋಡಿ 60 ಕೋಟಿ ರೂ. ವಂಚನೆ ಮಾಡಿರುವುದಾಗಿ ಕೇಳಿಬಂದಿದೆ. ಈ ಆರೋಪದ ಅಡಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ವಿರುದ್ಧ ದೂರು ದಾಖಲಾಗಿದೆ (Shilpa Shetty Fraud Case). ಆದರೆ ಇದೀಗ ಈ ಕೇಸ್‌ನಲ್ಲಿ ಭಾರಿ ಟ್ವಿಸ್ಟ್‌ ಬಂದಿದೆ. ಇದೀಗ ಈ ಪ್ರಕರಣದಲ್ಲಿ ರಾಜ್‌ ಕುಂದ್ರಾ (Raj Kundra) ಅವರು ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದು, ಈ ಇಬ್ಬರು ನಟಿಯರು ಈಗ ಪೇಚಿಗೆ ಸಿಲುಕಿದ್ದಾರೆ.

ಖಾತೆಗಳಿಗೆ ನೇರ ಹಣ ವರ್ಗಾವಣೆ

ವಿಚಾರಣೆಯ ಸಮಯದಲ್ಲಿ ಅವರು 60 ಕೋಟಿ ರೂಪಾಯಿಗಳಲ್ಲಿ ಕೆಲವನ್ನು ಇಬ್ಬರಿಗೂ ಶುಲ್ಕವಾಗಿ ನೀಡಲಾಗಿದೆ ಎಂದು ಕುಂದ್ರಾ ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿ, ಬಿಪಾಶಾ ಬಸು (Bipasha Basu) ಮತ್ತು ನೇಹಾ ಧೂಪಿಯಾ (Neha Dhupia)ಸೇರಿದಂತೆ ನಾಲ್ವರು ನಟಿಯರ ಖಾತೆಗಳಿಗೆ ಕಂಪೆನಿಯ ಖಾತೆಗಳಿಂದ ನೇರವಾಗಿ ಹಣವನ್ನು ವರ್ಗಾಯಿಸಲಾಗಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಇದರ ಹೊರತಾಗಿ, ಬಾಲಾಜಿ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಯಾವುದೇ ವಹಿವಾಟು ನಡೆದಿದೆಯೇ ಎಂದು ಸಹ ತನಿಖೆ ನಡೆಸಲಾಯಿತು. ಇಲ್ಲಿಯವರೆಗೆ, ಆರ್ಥಿಕ ಅಪರಾಧಗಳ ತನಿಖಾ ಇಲಾಖೆಯು ಈ ಪ್ರಕರಣದಲ್ಲಿ ಸುಮಾರು 25 ಕೋಟಿ ರೂ.ಗಳ ನೇರ ವರ್ಗಾವಣೆಯನ್ನು ಪತ್ತೆಹಚ್ಚಿದೆ.

ಏನಿದು ಕೇಸ್‌?

ಅಷ್ಟಕ್ಕೂ ಈ ಕೇಸ್‌ ಏನೆಂದರೆ, ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್‌ನ ನಿರ್ದೇಶಕ ದೀಪಕ್ ಕೊಠಾರಿ ದಂಪತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅವರು ತಮ್ಮ ದೂರಿನಲ್ಲಿ, ರಾಜೇಶ್ ಆರ್ಯ ಎಂಬುವವರು ತಮಗೆ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿಯನ್ನು ಪರಿಚಯಿಸಿದ್ದರು. ಆಗ ಅವರು ಮನೆ ಶಾಪಿಂಗ್ ಮತ್ತು ಆನ್‌ಲೈನ್ ಚಿಲ್ಲರೆ ವೇದಿಕೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು. ಆ ಸಮಯದಲ್ಲಿ, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿ ಕಂಪನಿಯ 87.6% ಷೇರುಗಳನ್ನು ಹೊಂದಿದ್ದರು. ಇದರಲ್ಲಿಯೇ ಭಾರಿ ಮೋಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗಂಡಸ್ರು ಡಿಸ್ಟರ್ಬ್​ ಆಗ್ತಾರೆ, ಹೆಂಗಸ್ರು ಹೊಟ್ಟೆ ಉರ್ಕೊಳ್ತಾರೆ ಅಂತ ಇವಳಿಗೆ ಕೆಲ್ಸನೇ ಸಿಗ್ತಿಲ್ವಂತೆ! ಏನ್​ ಹೇಳಿದ್ದಾಳೆ ಕೇಳಿ

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌