The Kerala Story: ವಿವಾದ, ಬ್ಯಾನ್ ನಡುವೆಯೂ ಭರ್ಜರಿ ಕಲೆಕ್ಷನ್, 100 ಕೋಟಿ ದಾಡಿದ ಗಳಿಕೆ

By Shruthi KrishnaFirst Published May 13, 2023, 2:17 PM IST
Highlights

ವಿವಾದ, ಬ್ಯಾನ್ ನಡುವೆಯೂ ದಿ ಕೇರಳ ಸ್ಟಾರ್ ಭರ್ಜರಿ ಕಲೆಕ್ಷನ್ ಮಾಡಿದೆ. 100 ಕೋಟಿ ದಾಡಿದಾಟಿ ಮುನ್ನುಗ್ಗಿತ್ತಿದೆ. 

ಭಾರಿ ವಿವಾದದ ನಡುವೆಯೂ ತೆರೆಗೆ ಬಂದ ದಿ ಕೇರಳ ಸ್ಟೋರಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುತ್ತಿದೆ. ಕೆಲವು ರಾಜ್ಯಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ಬ್ಯಾನ್ ಮಾಡಿದ್ರೆ ಇನ್ನು ಕೆಲವು ರಾಜ್ಯಗಳು ಟ್ಯಾಕ್ಸ್ ಫ್ರೀ ಮಾಡಿವೆ. ಕರ್ನಾಟಕದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿದೆ. ವಿರೋಧ, ಟೀಕೆಯ ನಡುವೆಯೂ ಕೇರಳ ಸ್ಟೋರಿ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ದಿ ಕರೇಳ ಸ್ಟೋರಿ ಸಿನಿಮಾ ಉತ್ತಮ ಕಮಾಯಿ ಮಾಡಿದೆ. 

ಮೇ 5ರಂದು ತೆರೆಗೆ ಬಂದಿರುವ ದಿ ಕೇರಳ ಸ್ಟೋರಿ ಸಿನಿಮಾ ಆಗಲೇ 100 ಕೋಟಿಯ ಗಡಿ ದಾಟಿದೆ. ಸಿನಿಮಾ ರಿಲೀಸ್ ಆಗಿ 8 ದಿನಕ್ಕೆ 100 ಕೋಟಿ ರೂಪಾಯಿ ಬಾಚುವಲ್ಲಿ ದಿ ಕೇರಳ ಸ್ಟೋರಿ ಯಶಸ್ವಿಯಾಗಿದೆ. ಪ್ರಾರಂಭದಲ್ಲಿ ಕೇರಳ ಸ್ಟೋರಿ ಕಲೆಕ್ಷನ್ ನಿಧಾನವಾಗಿತ್ತು. ನಂತರದ ದಿನಗಳಲ್ಲಿ ಕೇರಳ ಸ್ಟೋರಿ ಕಲೆಕ್ಷನ್ ಹೆಚ್ಚಾಗುತ್ತಾ ಸಾಗಿತು. 

Latest Videos

1ನೇ ದಿನ: 8.03 ಕೋಟಿ ರೂ. 

2ನೇ ದಿನ: 11.22 ಕೋಟಿ ರೂ.

3ನೇ ದಿನ: 16.40 ಕೋಟಿ ರೂ.

4ನೇ ದಿನ: 10.07 ಕೋಟಿ ರೂ.

5ನೇ ದಿನ: 11.14 ಕೋಟಿ ರೂ.

6ನೇ ದಿನ: 12 ಕೋಟಿ ರೂ.

7ನೇ ದಿನ: 12.50 ಕೋಟಿ ರೂ.

8ನೇ ದಿನ: 12.23 ಕೋಟಿ ರೂ.

ದಿ ಕೇರಳ ಸ್ಟೋರಿ ವಿವಾದ, ಬ್ಯಾನ್‌ಗಳ ನಡುವೆಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. 

OTTಗೆ ವಿವಾದಾತ್ಮಕ 'ದಿ ಕೇರಳ ಸ್ಟೋರಿ': ಯಾವಾಗ, ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

ಸದ್ಯದಲ್ಲೇ ಒಟಿಟಿಗೆ ಕೇರಳ ಸ್ಟೋರಿ 

ದಿ ಕೇರಳ ಸ್ಟೋರಿ ಆಗಲೇ ಒಟಿಟಿ ರಿಲೀಸ್ ಸುದ್ದಿ ವೈರಲ್ ಆಗಿದೆ. ಈಗಾಗಲೇ ಈ ಸಿನಿಮಾದ ಒಟಿಟಿ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. ಅಂದಹಾಗೆ ಕೇರಳ ಸ್ಟೋರಿ ಸಿನಿಮಾವನ್ನು ಪ್ರಸಿದ್ಧ ಒಟಿಟಗಳಲ್ಲಿ ಒಂದಾಗಿರುವ ಜೀ 5 ಸಂಸ್ಥೆ ಖರೀದಿ ಮಾಡಿದೆ ಎನ್ನಲಾಗಿದೆ. ದೊಡ್ಡ ಮೊತ್ತಕ್ಕೆ ದಿ ಕೇರಳ ಸ್ಟೋರಿ ಸಿನಿಮಾವನ್ನು ಖರೀದಿಸಿದೆ ಎನ್ನುವ ಸುದ್ದಿ ಇದೆ. ಅಂದಹಾಗೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ 4-6 ವಾರದಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದೆಯಂತೆ. ಅಂದರೆ ಜೂನ್ 3ನೇ ವಾರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. 

click me!