ನಟಿ ಸಮಂತಾ ಅವರನ್ನು ತಬ್ಬಿಕೊಂಡ ವಿಜಯ್ ದೇವರಕೊಂಡ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ.
ಸೌತ್ ಸ್ಟಾರ್ ಸಮಂತಾ ರುತ್ ಪ್ರಭು ಸದ್ಯ ಸಿಟಾಡೆಲ್ ಮತ್ತು ಖುಷಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ನಟಿ ಸಮಂತಾ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸದ್ಯ ಸಮಂತಾ ತೆಲುಗು ಸ್ಟಾರ್ ವಿಜಯದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಮೇಕಿಂಗ್ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಸದ್ಯ ಚಿತ್ರೀಕರಣ ಸ್ಥಳದಿಂದ ಹೊರ ಬಿದ್ದಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರ ರೊಮ್ಯಾಂಟಿಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಇತ್ತೀಚೆಗಷ್ಟೆ ಖುಷಿ ಸಿನಿಮಾದ ಹಾಡು ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ವಿಜಯ್ ದೇವರಕೊಂಡ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಖುಷಿ ಸಿನಿಮಾದ ಹಾಡಿನ ಚಿತ್ರೀಕರಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ಇಬ್ಬರೂ ಉತ್ತಮ ಸ್ನೇಹಿತರು. ಶೂಟಿಂಗ್ ಸೆಟ್‌ನಲ್ಲೂ ಅಷ್ಟೇ ಸ್ನೇಹ ಬಾಂಧವ್ಯದಿಂದ ಇದ್ದರು ಎನ್ನುವುದಕ್ಕೆ ಸದ್ಯ ವೈರಲ್ ಆಗಿರುವ ವಿಡಿಯೋನೇ ಸಾಕ್ಷಿ.
ಇಬ್ಬರನ್ನೂ ಒಟ್ಟಿಗೆ ನೋಡಿ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಗಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಜೋಡಿ ಎಂದು ಹೇಳುತ್ತಿದ್ದಾರೆ. ಅನೇಕರು ವಾವ್ ಎಂದು ಹೇಳುತ್ತಿದ್ದಾರೆ. ಸಮಂತಾ ಅವರ ಖುಷಿ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 'ನೀವು ಸಂತೋಷದಿಂದ ನಗುತ್ತಿರುವುದನ್ನು ನೋಡಿ ಸಂತೋಷವಾಗಿದೆ ಸ್ಯಾಮ್' ಎಂದು ಹೇಳಿದ್ದಾರೆ.
Kushi: ದೇವರಕೊಂಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್; ಸಮಂತಾಗೆ 'ನನ್ನ ರೋಜಾ ನೀನೇ' ಎಂದ ಸೆನ್ಸೇಷನಲ್ ಸ್ಟಾರ್
ಸಮಂತಾ ಮತ್ತು ವಿಜಯ್ ಈ ಮೊದಲು ಮಹಾನಟಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2018ರಲ್ಲಿ ರಿಲೀಸ್ ಆಗಿದ್ದ ಮಹಾನಟಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಖುಷಿ ಸಿನಿಮಾ ಮೂಲಕ ಮತ್ತೆ ಸಮಂತಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಶಿವ ನಿರ್ವಾಣ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1, 2023 ರಂದು ತೆರೆಗೆ ಬರುತ್ತಿದೆ.
ಹಿಜಾಬ್ ಧರಿಸಿದ ಫೋಟೋ ಶೇರ್ ಮಾಡಿದ ಸಮಂತಾ: ಫ್ಯಾನ್ಸ್ ಶಾಕ್!
ವಿಜಯ್ ದೇವರಕೊಂಡ ನಟನೆಯ ಟೈಸನ್ ಸಿನಿಮಾ ಹೀನಾಯ ಸೋಲು ಕಂಡಿತ್ತು. ಸಿನಿಮಾ ಸೋಲಿನ ಸುಳಿಯಲ್ಲಿದ್ದ ವಿಜಯ್ ದೇವರಕೊಂಡ ಖುಷಿ ಸಿನಿಮಾ ಮೂಲಕ ಗೆದ್ದು ಬೀಗುತ್ತಾರಾ ಎಂದು ಕಾದು ನೋಡಬೇಕಿದೆ. ಸಮಂತಾ ಕೂಡ ಶಾಕುಂತಲಂ ಸಿನಿಮಾದ ಸೋಲಿನಲ್ಲಿದ್ದಾರೆ. ಹಾಗಾಗಿ ಮುಂದಿನ ಸಿನಿಮಾದ ಗೆಲವು ಅನಿವಾರ್ಯವಾಗಿದೆ. ಖುಷಿ ಸಿನಿಮಾ ಮೂಲಕ ಇಬ್ಬರೂ ದೊಡ್ಡ ಗೆಲವು ಪಡೆಯುತ್ತಾರಾ ಎಂದು ಕಾದು ನೋಡಬೇಕಿದೆ.