'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಗಾರ್ಬೇಜ್‌ಗೆ ಹೋಲಿಸಿದ ನಿರ್ದೇಶಕ ಸಯೀದ್ ಅಖ್ತರ್

By Shruthi KrishnaFirst Published Dec 20, 2022, 11:27 AM IST
Highlights

ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಗಾರ್ಬೇಜ್‌ಗೆ ಹೋಲಿಸಿದ್ದಾರೆ. 

ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾ ಇನ್ನೂ ಸದ್ದು ಮಾಡುತ್ತಿದೆ. ಈ ಇತ್ತೀಚಿಗೆ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದೆ. ಅಂದಹಾಗೆ ಸಿನಿಮಾ ರಿಲೀಸ್ ಆಗಿ ಅನೇಕ ತಿಂಗಳೇ ಆಗಿದೆ. ಸೂಪರ್ ಹಿಟ್ ಆಗಿದ್ದು ಕೋಟಿ ಕೋಟಿ ಕಮಾಯಿ ಮಾಡಿದೆ. ಈಗಲೂ ಈ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೆ IFFI 2022ನ ಜ್ಯೂರಿ ಮುಖ್ಯಸ್ಥ ನದಾವ್ ಲಾಪಿಡ್ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿತ್ತು. 'ದಿ ಕಾಶ್ಮೀರ್ ಫೈಲ್ಸ್' ಅಶ್ಲೀಲ, ತಪ್ಪು ಪ್ರಚಾರದ ಉದ್ದೇಶ ಹೊಂದಿದ ಸಿನಿಮಾ ಎಂದು ಹೇಳುವ ಮೂಲಕ ನದಾವ್ ವಿವಾದದ ಕಿಡಿ ಹೊತ್ತಿಸಿದ್ದರು. ನದಾವ್ ಲಾಪಿಡ್ ವಿರುದ್ಧ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಸಿಡಿದೆದಿದ್ದರು. ಇದೀಗ ಮತ್ತೆ ಮತ್ತೋರ್ವ ಖ್ಯಾತ ನಿರ್ದೇಶಕ ಮತ್ತು ಚಿತ್ರಕಥೆಗಾರ ಸಯೀದ್ ಅಖ್ತರ್ ಮಿರ್ಜಾ ಕಾಶ್ಮೀರ್ ಫೈಲ್ಸ್ ವಿರುದ್ಧ ಕಿಡಿ ಕಾರಿದ್ದಾರೆ. ಗಾರ್ಬೇಜ್ ಎಂದು ಹೇಳಿದ್ದಾರೆ. 

ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ, 'ನನಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾರ್ಬೇಜ್. ಹಾಗಂತ ಕಾಶ್ಮೀರಿ ಪಂಡಿತರ ವಿಚಾರವೇ ಗಾರ್ಬೇಜ್ ಅಂತ ಅಲ್ಲ. ಕಾಶ್ಮೀರಿ ಪಂಡಿತರ ಘಟನೆ ನಿಜ. ಕಾಶ್ಮೀರಿ ಹಿಂದೂಗಳಿಗೆ ಮಾತ್ರವಲ್ಲ. ಮುಸ್ಲಿಮರೂ ನರಕ ಅನುಭವಿಸಿದ್ದಾರೆ. ಗುಪ್ತಚರ ಸಂಸ್ಥೆಗಳ ಕುತಂತ್ರಗಳು, ರಾಷ್ಟ್ರೀಯ ಹಿತಾಸಕ್ತಿಗಳು ಎಂದು ಕರೆಸಿಕೊಳ್ಳುವ ರಾಷ್ಟ್ರೀಯವಾದಿಗಳ ಕತಂತ್ರದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಲ್ಲಿ ಮುಖ್ಯ ವಿಷಯವೆಂದರೆ ಪಕ್ಷಗಳನ್ನು ತೆಗೆದುಕೊಳ್ಳಬಾರದು. ಮನುಷ್ಯರಾಗಿರಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ' ಎಂದು ಹೇಳಿದ್ದಾರೆ. ಅಂದಹಾಗೆ ಸಯೀದ್ ಮಾತಿಗೆ ಅಗ್ನಿಹೋತ್ರಿ ಪ್ರತಿಕ್ರಿಯೆ ಏನಾಗಿರಲಿದೆ ಎಂದು ಕಾದುನೋಡಬೇಕಿದೆ. 

ದೆಹಲಿ ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ ಅಗ್ನಿಹೋತ್ರಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಮಾಡಿದ ತಪ್ಪೇನು?

ಸಯೀದ್ ಅಖ್ತರ್ ಮಿರ್ಜಾ,  ಮೋಹನ್ ಜೋಶಿ ಹಾಜಿರ್ ಹೋ (1984), ಆಲ್ಬರ್ಟ್ ಪಿಂಟೊ ಕೊ ಗುಸ್ಸಾ ಕ್ಯೂನ್ ಆತಾ ಹೈ (1980), ಸಲೀಂ ಲಾಂಗ್ಡೆ ಪೆ ಮತ್ ರೋ (1989) ಮತ್ತು ನಸೀಮ್ (1995) ಸೇರಿದಂತೆ  ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೊತೆಗೆ ನುಕ್ಕಡ್ (1986) ಮತ್ತು ಇಂತೇಜಾರ್ (1988) ನಂತಹ ಜನಪ್ರಿಯ ಟಿವಿ ಧಾರಾವಾಹಿಗಳನ್ನು ನಿರ್ದೇಶಕರಾಗಿದ್ದಾರೆ. ಕೊನೆಯದಾಗಿ ಸಯೀದ್,  2018 ರಲ್ಲಿ ಬಿಡುಗಡೆಯಾದ ಕರ್ಮ ಕೆಫೆ ಎಂಬ ಕಿರುಚಿತ್ರಕ್ಕೆ ಕಥೆ ಬರೆದಿದ್ದರು.

ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡೋದನ್ನೇ ಬಿಡ್ತೀನಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಸವಾಲ್

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್, ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ವಲಸೆ ಬಗ್ಗೆ ಚಿತ್ರಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಮಾರ್ಚ್ 11 ರಂದು ಬಿಡುಗಡೆಯಾಯಿತು. ಇದು ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ಕಾಶ್ಮೀರ್ ಫೈಲ್ಸ್‌ನಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಸೇರಿದಂತೆ ಅನೇಕರು ನಟಿಸಿದ್ದಾರೆ. 

click me!