
ಜುಲೈ 19, 2021ರಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಅಶ್ಲೀಲ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಬಂಧಿಸಿದ ದಿನದಿಂದ ಶಿಲ್ಪಾ ಶೆಟ್ಟಿ ಚಿತ್ರೀಕರಣದಿಂದ, ಮಾಧ್ಯಮಗಳಿಂದ ಹಾಗೂ ಮೊಬೈಲ್‌ನಿಂದ ದೂರ ಉಳಿದಿದ್ದರು. ತನ್ನ ಪತಿ ಹೆಸರು ಅಶ್ಲೀಲ ಚಿತ್ರಗಳ ದಂಧೆಯಲ್ಲಿ ಕೇಳಿ ಬರುತ್ತಿದ್ದಂತೆ, ಶಿಲ್ಪಾ ಕೈಯಲ್ಲಿದ್ದ ಅದೆಷ್ಟೋ ಪ್ರಾಜೆಕ್ಟ್‌ಗಳು ಕೈ ತಪ್ಪಿವೆ, ಎನ್ನಲಾಗಿತ್ತು. ಅದರೆ ಸೂಪರ್ ಡ್ಯಾನ್ಸ್ ಸೀಸನ್ 4ರ ಜೊತೆಗಿದ್ದ ಕಾಂಟ್ರ್ಯಾಕ್ಟ್ ಇನ್ನೂ ನಡೆಯುತ್ತಿರುವ ಕಾರಣ ಶಿಲ್ಪಾ ಶೂಟಿಂಗ್‌ಗೆ ಆಗಮಿಸುತ್ತಾರೋ, ಇಲ್ಲವೋ ಎಂದು ಪದೇ ಪದೇ ಸಹ ಜಗ್ಡ್ ಆಗಿದ್ದ ಗೀತಾ ಮತ್ತು ಅನುರಾಗ್‌ಗೆ ಪ್ರಶ್ನೆ ಮಾಡಲಾಗುತ್ತಿತ್ತು.
ಪತಿಯ ಬಂಧನವಾಗಿ ಒಂದು ತಿಂಗಳ ನಂತರ ಶಿಲ್ಪಾ ಚಿತ್ರೀಕರಣಕ್ಕೆ ಮರಳಿದ್ದಾರೆ. ತಮ್ಮ ಕ್ಯಾರಾವ್ಯಾನ್‌ನಿಂದ ಇಳಿದು ಸೆಟ್‌ಗೆ ನಡೆದುಕೊಂಡು ಹೋಗುವ ವೇಳೆ ಮಾಧ್ಯಮಗಳ ಕ್ಯಾಮೆರಾಗೆ ಸೆರೆ ಸಿಕ್ಕಿದ್ದಾರೆ. ಯಾವ ಮಾಧ್ಯಮದವರೂ ಪ್ರಶ್ನೆ ಕೇಳಿಲ್ಲ, ಶಿಲ್ಪಾ ಮೌನಿಯಾಗಿಯೇ ಉಳಿದಿದ್ದಾರೆ. ಶಿಲ್ಪಾ ನೀಲಿ ಮತ್ತು ಕೆಂಪು ಬಣ್ಣದ ಫ್ಲೋರಲ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಮುಖದಲ್ಲಿ ಚಾರ್ಮ್ ಇಲ್ಲದ್ದನ್ನು ಕಂಡು ನೆಟ್ಟಿಗರು, ನಟಿಯ ಮನಸ್ಥಿತಿಯ ಬಗ್ಗೆ ಅನೇಕ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಶಿಲ್ಪಾ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು 'ರಾಜ್ ಕುಂದ್ರಾ ಹಣದ ಆಸೆ ಶಿಲ್ಪಾ ವೃತ್ತಿ ಜೀವನ ಹಾಳು ಮಾಡಿತ್ತು,' ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಇನ್ನೂ ಕೆಲವರು 'ಆಕೆಯ ಮುಖದಲ್ಲಿ ಮುಜುಗರ ಕಾಣಿಸುತ್ತಿದೆ', 'ತಾನು ಮಾಡದ ತಪ್ಪಿಗೆ ನೋವು ಅನುಭವಿಸುತ್ತಿದ್ದಾಳೆ',' ಪ್ರತಿ ಸಲವೂ ಪತಿ ತನ್ನ ಶಕ್ತಿ ಎಂದು ಹೇಳುತ್ತಿದ್ದ ಶಿಲ್ಪಾ ಈಗ ಮಾತನಾಡಲು ಪದವೇ ಇಲ್ಲದ ಹಾಗೆ ನಡೆಯುತ್ತಿದ್ದಾರೆ,' ಎಂದು ಕಾಲೆಳೆದಿದ್ದಾರೆ. ಕೆಲವರು ಧೈರ್ಯ ತುಂಬಿದರೆ ಇನ್ನೂ ಕೆಲವರು ಮನಸ್ಸು ಕುಗ್ಗಿಸುವಂತೆ ಕಾಮೆಂಟ್ ಮಾಡಿದ್ದಾರೆ.
ಶಿಲ್ಪಾ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹೋದರಿ ಶಮಿತಾ ಶೆಟ್ಟಿ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಬ್ಬರೂ ಸಹೋದರಿಯರಿಗೆ ಮನಸ್ಸಿನಲ್ಲಿ ನೋವಿದ್ದರೂ, ಜೀವನವನ್ನ ಫೇಸ್ ಮಾಡಲು ಸ್ಟ್ರಾಂಗ್ ಆಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.